Film News

ಸ್ವತಂತ್ರ ದಿನಾಚರಣೆಯಂದು ದಿ.ಚಿರು ಸರ್ಜಾ ಪುತ್ರನ ಸ್ಪೇಷಲ್ ಪೊಟೋ, ಚಿರು ಪುತ್ರ ರಾಯನ್ ಸರ್ಜಾ ಕ್ಯೂಟ್ ಪೊಟೋ ವೈರಲ್…..!

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಮರಣದ ನೋವನ್ನು ಆತನ ಪತ್ನಿ ಮೇಘನಾ ರಾಜ್ ತನ್ನ ಮಗನ ಮೂಲಕ ಮರೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಸಿನೆಮಾಗಳಲ್ಲಿ ಸಹ ಬ್ಯುಸಿಯಾಗಿದ್ದಾರೆ. ಜೊತೆಗೆ ತನ್ನ ಮಗ ರಾಯನ್ ಜೊತೆಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಸಿನೆಮಾಗಳ ಜೊತೆ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಸ್ವಾತಂತ್ಯ್ರ ದಿನಾಚರಣೆಯ ಅಂಗವಾಗಿ ರಾಯನ್ ಸರ್ಜಾ ತ್ರಿವರ್ಣ ಧ್ವಜ ಹಿಡಿದು ಮುದ್ದಾಗಿ ಪೋಸ್ ಕೊಟ್ಟಿದ್ದು, ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಯಾಂಡಲ್ ವುಡ್ ಸಿನಿರಂಗದ ಸ್ಟಾರ್‍ ನಟಿ ಮೇಘನಾ ರಾಜ್ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತತ್ಸಮ ತದ್ಭವ ಸಿನೆಮಾದ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲಿದ್ದಾರೆ. ಖ್ಯಾತ ನಿರ್ದೇಶಕ ಪನ್ನಗಾಭರಣ ನಿರ್ದೇಶನದ ತತ್ಸಮ ತದ್ಭವ ಸಿನೆಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ಇನ್ನೂ ಸೊಷಿಯಲ್ ಮಿಡಿಯಾದಲ್ಲೂ ಸಹ ಮೇಘನಾ ರಾಜ್ ಆಕ್ಟೀವ್ ಆಗಿರುತ್ತಾರೆ. ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ, ಸಿನೆಮಾಗಳ ಬಗ್ಗೆ ಸಹ ಪೋಸ್ಟ್ ಮಾಡುತ್ತಿರುತ್ತಾರೆ. ಮಗನ ಹಾರೈಕೆಯ ಜೊತೆಗೆ ಆಕೆ ಸಿನೆಮಾಗಳನ್ನೂ ಸಹ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ಮಗನ ಕ್ಯೂಟ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಸ್ವತಂತ್ರ ದಿನೋತ್ಸವದ ಅಂಗವಾಗಿ ರಾಯನ್ ಸರ್ಜಾ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೊಟೋ ಸಖತ್ ವೈರಲ್ ಆಗುತ್ತಿದೆ.

ಆಗಸ್ಟ್ 15 ಸ್ವಾತಂತ್ಯ್ರ ದಿನಾಚರಣೆ ಪ್ರಯುಕ್ತ ರಾಯನ್ ಸರ್ಜಾ ರವರ  ಕ್ಯೂಟ್ ಪೊಟೋ ಹಾಗೂ ವಿಡಿಯೋ ಒಂದನ್ನು ಮೇಘನಾ ಸರ್ಜಾ ಹಂಚಿಕೊಂಡಿದ್ದಾರೆ. ಈ ಪೊಟೋದಲ್ಲಿ ರಾಯನ್ ಸರ್ಜಾ ಸೆಲ್ಯೂಟ್ ಮಾಡುತ್ತಾ ವೈಟ್ ಡ್ರೆಸ್ ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಸಖತ್ ವೈರಲ್ ಆಗುತ್ತಿದೆ. ಈ ಪೊಟೋ ನೋಡಿದ ಚಿರು ಹಾಗೂ ಮೇಘನಾ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಜೊತೆಗೆ ವಿವಿಧ ಬಗೆಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಲವ್ ಯೂ ಜೂನಿಯರ್‍ ಚಿರು ಎಂದು ಅಭಿಮಾನಿಗಳು ಕಾಮೆಂಟ್ ಗಳನ್ನು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಮೇಘನಾ ರಾಜ್ ರವರ ವೃತ್ತಿ ಜೀವನ ಸಹ ಮತಷ್ಟು ಯಶಸ್ವಿಯಾಗಿ ಸಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.

ಸದ್ಯ ಮೇಘನಾ ರಾಜ್ ತತ್ಸಮ ತದ್ಬವ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ಆಕೆ ಸಿನೆಮಾದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದಲ್ಲಿ ಪ್ರಜ್ವಲ್ ದೇವರಾಜ್ ಸಹ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಇನ್ನೂ ಈ ಸಿನೆಮಾದ ಟೀಸರ್‍ ಸಹ ಬಿಡುಗಡೆಯಾಗಿದ್ದು, ಒಳ್ಳೆಯ ಸ್ಪಂದನೆ ಪಡೆದುಕೊಂಡಿದೆ. ಶೀಘ್ರದಲ್ಲೇ ಈ ಸಿನೆಮಾ ಸಹ ಬಿಡುಗಡೆಯಾಗಲಿದ್ದು, ಪನ್ನಗಾಭರಣ ರವರು ಈ ಸಿನೆಮಾ ನಿರ್ಮಾಣ ಮಾಡಿದ್ದಾರೆ.

Most Popular

To Top