ಪಿಂಕ್ ಫ್ರಾಕ್ ನಲ್ಲಿ ಕ್ಯೂಟ್ ಅಂಡ್ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡ ಯಂಗ್ ಬ್ಯೂಟಿ ವಿಷ್ಣುಪ್ರಿಯಾ….!

Follow Us :

ತೆಲುಗು ಕಿರುತೆರೆಯ ಟಾಲ್ ಸುಂದರಿ ವಿಷ್ಣು ಪ್ರಿಯಾ ತಮ್ಮ ಸೌಂದರ್ಯಕ್ಕೆ ತಕ್ಕ ಮೈಮಾಟ ಸಹ ಹೊಂದಿದ್ದಾರೆ. ಸಿನಿರಂಗಕ್ಕೂ ಸಹ ಎಂಟ್ರಿ ಕೊಟ್ಟ ಈಕೆ ಸಿನೆಮಾಗಳಲ್ಲಿ ಮತಷ್ಟು ಅವಕಾಶಗಳನ್ನು ಗಳಿಸುವ ಉದ್ದೇಶಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಿರುತೆರೆಯ ಪೋವೆ ಪೋರಾ ಎಂಬ ಶೋ ಮೂಲಕ ಫೇಂ ಪಡೆದುಕೊಂಡ ಈಕೆ ಮಾಡ್ರನ್, ಟ್ರೆಡಿಷನಲ್ ಡ್ರೆಸ್ ಗಳಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಆಕೆಯ ಅಭಿಮಾನಿಗಳನ್ನು ಮಸ್ಮರೈಜ್ ಮಾಡುತ್ತಿದ್ದಾರೆ.

ಆಂಕರಿಂಗ್ ಮೂಲಕ ಕೆರಿಯರ್‍ ಆರಂಭಿಸಿದ ವಿಷ್ಣು ಪ್ರಿಯಾ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಳ್ಳಬೇಕೆಂಬ ಭಾರಿ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಸಿಗಲಿಲ್ಲ ಎಂದೇ ಹೇಳಬಹುದು. ಇನ್ನೂ ಅವಕಾಶಗಳನ್ನು ಪಡೆದುಕೊಳ್ಳಲು ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಕಿರುತೆರೆ ಶೋಗಳಿಂದ ದೂರವಿರುವ ವಿಷ್ಣುಪ್ರಿಯಾ ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಾ ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವಂತಹ ವಿಷ್ಣು ಪ್ರಿಯಾ ಪಿಂಕ್ ಡ್ರೆಸ್ ನಲ್ಲಿ ಕ್ಯೂಟ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಕ್ಯೂಟ್ ಪೋಸ್ ಗಳ ಮೂಲಕ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರನ್ನೂ ಸಹ ಫಿದಾ ಮಾಡಿದ್ದಾರೆ. ಆಕೆಯ ಈ ಪೊಟೋಗಳನ್ನು ಕಂಡ ಅನೇಕರು ಲೈಕ್ ಗಳು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಕಿರುತೆರೆಯಲ್ಲಿ ತನ್ನ ದೇಹದ ಮೈಮಾಟದ ಮೂಲಕ ಎಲ್ಲರನ್ನೂ ರಂಜಿಸಿದ ವಿಷ್ಣು ಪ್ರಿಯಾ ಇದೀಗ ಸೋಷಿಯಲ್ ಮಿಡಿಯಾ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಯಂಗ್ ಹಿರೋ ಮಾನಸ್ ಜೊತೆಗೆ ಜರಿ ಜರಿ ಪಂಚಕಟ್ಟು ಎಂಬ ಸಾಂಗ್ ಮೂಲಕ ಸಖತ್ ಸದ್ದು ಮಾಡಿದ್ದರು. ಗ್ಲಾಮರಸ್ ಸ್ಟೆಪ್ಸ್ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದರು.

ಇನ್ನೂ ಕಿರುತೆರೆಯ ಮೂಲಕ ಫೇಂ ಪಡೆದುಕೊಂಡ ಅನಸೂಯ, ರಶ್ಮಿ ಗೌತಮ್ ಸೇರಿದಂತೆ ಅನೇಕರು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಷ್ಣುಪ್ರಿಯಾ ಸಹ ಸಿನೆಮಾಗಳಲ್ಲಿ ಸಕ್ಸಸ್ ಕಾಣಲು ಶ್ರಮಿಸುತ್ತಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯುವ ಕೆಲಸ ಸಹ ಮಾಡುತ್ತಿದ್ದಾರೆ.