Film News

ಜನರಿಗೆ ಅಂತಹ ದೃಶ್ಯಗಳೆಂದರೇ ಇಷ್ಟ ಎಂದ ತಮನ್ನಾ, ಮಾಡೋದು ಕೆಟ್ಟ ಕೆಲಸ ಜನರ ಮೇಲೆ ಹಾಕೋದು ಏಕೆ ಎಂದ ನೆಟ್ಟಿಗರು….!

ವರ್ಷದ ಆರಂಭದಿಂದ ಮಿಲ್ಕಿ ಬ್ಯೂಟಿ ತಮನ್ನಾ ಸದಾ ಸುದ್ದಿಯಾಗುತ್ತಿದ್ದಾರೆ. ನೂತನ ವರ್ಷದ ಆಚರಣೆಯ ವೇಳೆ ತಮನ್ನಾ ಹಾಗೂ ವಿಜಯ್ ವರ್ಮಾ ನಡುವೆ ಡೇಟಿಂಗ್ ಸುದ್ದಿ ಹೊರಬಂತು. ಅಂದಿನಿಂದ ತಮನ್ನಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಜೊತೆಗೆ ಆಕೆ ಎರಡು ವೆಬ್ ಸಿರೀಸ್ ಗಳ ಕಾರಣದಿಂದ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಆಕೆಯ ಕೆರಿಯರ್‍ ನಲ್ಲಿ ಮೊದಲ ಬಾರಿಗೆ ಆಕೆ ತುಂಬಾ ಬೋಲ್ಡ್ ದೃಶ್ಯಗಳಲ್ಲಿ ಈ ಸಿರೀಸ್ ಮೂಲಕ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆ ವೆಬ್ ಸಿರೀಸ್ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅದಕ್ಕೆ ನೆಟ್ಟಿಗರೂ ಸಹ ತಕ್ಕ ಕೌಂಟರ್‍ ನೀಡುತ್ತಿದ್ದಾರೆ.

ಸ್ಟಾರ್‍ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳಿರುವಂತಹ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಜೀ ಕರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ಎಂಬ ವೆಬ್ ಸಿರೀಸ್ ಗಳಲ್ಲಿ ತಮನ್ನಾ ತುಂಬಾನೆ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಇಲ್ಲಿಯವರೆಗೂ ತಮನ್ನಾ ರವರನ್ನು ನೋಡದ ರೀತಿಯಲ್ಲಿ ಈ ಸಿರೀಸ್ ಗಳಲ್ಲಿ ನೋಡಬಹುದಾಗಿದೆ. ಈ ವೆಬ್ ಸಿರೀಸ್ ಗಾಗಿ ತಮನ್ನಾ ತನ್ನ ಇಮೇಜ್ ಸಹ ಬದಿಗೊತ್ತಿ ಇಂಟಿಮೇಟ್ ದೃಶ್ಯಗಳಲ್ಲಿ ಸಹ ನಟಿಸಿದ್ದಾರೆ. ಕೆಲವು ಅಸಭ್ಯಕರವಾದ ಡೈಲಾಗ್ ಗಳನ್ನು ಸಹ ಹೇಳಿದ್ದಾರೆ. ಇನ್ನೂ ತಮನ್ನಾ ರವರ ಈ ಸಿರೀಸ್ ಗಳ ಕೆಲವೊಂದು ಬೋಲ್ಡ್ ವಿಡಿಯೋಗಳು ಸಹ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ತಮನ್ನಾ ರವರನ್ನು ಸಹ ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡಿದರು. ತಮನ್ನಾ ಅನೇಕ ಸ್ಟಾರ್‍ ಹಿರೋಗಳ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡಿದ್ದಾರೆ. ಆದರೆ ವೆಬ್ ಸಿರೀಸ್ ಗಾಗಿ ಆಕೆ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ನೆಟ್ಟಿಗರ ಆಕ್ರೋಷಕ್ಕೆ ಕಾರಣವಾಗಿದೆ. ಜೊತೆಗೆ ಆಕೆಯನ್ನು ಜೂನಿಯರ್‍ ಸನ್ನಿ ಲಿಯೋನ್ ಎಂದೂ ಸಹ ಕರೆದಿದ್ದಾರೆ.

ಇನ್ನೂ ಈ ಬಗ್ಗೆ ಇತ್ತಿಚಿಗೆ ತಮನ್ನಾ ರಿಯಾಕ್ಟ್ ಆಗಿದ್ದು, ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಬಾಲಿವುಡ್ ಮಿಡಿಯಾದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ತಮನ್ನಾ ವೆಬ್ ಸಿರೀಸ್ ನಲ್ಲಿನ ಬೋಲ್ಡ್ ಸೀನ್ಸ್ ಬಗ್ಗೆ ಮಾತನಾಡಿದ್ದಾರೆ. ಕಥೆಗೆ ಅಂತಹ ಸನ್ನಿವೇಶಗಳು ತುಂಬಾ ಅವಶ್ಯಕವಿರುತ್ತದೆ. ಒಂದು ರಿಲೇಷನ್ ಶಿಪ್ ಬಗ್ಗೆ ತೋರಿಸುವ ನಿಟ್ಟಿನಲ್ಲಿ ಅಂತಹ ಸನ್ನಿವೇಶಗಳು ತುಂಬಾ ಪ್ರಮುಖವಾಗಿರುತ್ತವೆ. ಆದ್ದರಿಂದಲೇ ಆ ದೃಶ್ಯಗಳಲ್ಲಿ ನಟಿಸಬೇಕಾಗಿ ಬಂತು. ಅದು ಜನಕ್ಕೆ ಇಷ್ಟವಾದರೂ ಇಲ್ಲದೇ ಇದ್ದರೂ ಕಥಯಲ್ಲಿನ ಭಾಗವಾಗಿ ಅದನ್ನು ಹಾಗೆ ನೋಡುತ್ತಾರೆ. ಇನ್ನೂ ನಿರ್ದೇಶಕಿ ಅರುಣಿಮ ನೀಡಿದ ಸೂಚನೆಗಳಂತೆ ಅಂತಹ ಸನ್ನಿವೇಶಗಳಲ್ಲಿ ಸುಲಭ ಹಾಗೂ ಸೌಕರ್ಯವಾಗಿ ನಟಿಸಲು ಸಾಧ್ಯವಾಯಿತು. ಯಾರು ಏನೇ ಹೇಳಿದರೂ ಜನರಿಗೆ ಇಷ್ಟವಾಗುವ ಕಾರಣದಿಂದಲೇ ಅಂತಹ ದೃಶ್ಯಗಳಲ್ಲಿ ನಟಿಸಿದ್ದೇನೆ ಎಂದಿದ್ದಾರೆ.

ಇನ್ನೂ ತಮನ್ನಾ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅದಕ್ಕೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಈ ಬಗ್ಗೆ ಅನೇಕರು ವಿಮರ್ಶೆಗಳನ್ನು ಮಾಡಿದ್ದಾರೆ. ಮಾಡೋದು ಕೆಟ್ಟ ಕೆಲಸ ಅದನ್ನು ನಮ್ಮ ಮೇಲೆ ಹಾಕುತ್ತೀಯಾ ಎಂದು ಫೈರಿಂಗ್ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

Most Popular

To Top