Film News

ಆದಿಪುರುಷ್ ರೈಟರ್ ವಿವಾದಿತ ಹೇಳಿಕೆಗಳು, ಹನುಮಂತ ದೇವರೇ ಅಲ್ವಂತೆ, ಹುಚ್ಚು ಹಿಡಿದಿದೆಯಾ ಎಂದು ತರಾಟೆ…..!

ಓಂ ರಾವತ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ಆದಿಪುರುಷ್ ಸಿನೆಮಾ ಘೋಷಣೆಯಾದಾಗಿನಿಂದ ವಿವಾದಗಳಿಗೆ ಗುರಿಯಾಗುತ್ತಲೇ ಇದೆ. ರಾಮಾಯಣ ಕಥೆಯನ್ನು ಆಧರಿಸಿ ತೆರೆಗೆ ತಂದ ಈ ಸಿನೆಮಾದಲ್ಲಿನ ಪಾತ್ರಗಳನ್ನು ಓಂ ರಾವತ್ ಬೇರೆಯದ್ದೆ ರೀತಿಯಲ್ಲಿ ತೋರಿಸಿದ್ದಾರೆ. ಈ ಕಾರಣದಿಂದ ಅನೇಕರು ಈ ಸಿನೆಮಾದ ವಿರುದ್ದ ಕಿಡಿಕಾರುತ್ತಿದ್ದಾರೆ. ಜೊತೆಗೆ ಸಿನೆಮಾ ಬ್ಯಾನ್ ಮಾಡಬೇಕೆಂಬ ಕೂಗು ಸಹ ಕೇಳಿಬರುತ್ತಿದೆ. ಈ ಸಮಯದಲ್ಲೇ ಆದಿಪುರುಷ್ ಸಿನೆಮಾದ ರೈಟರ್‍ ಇದೀಗ ಹನುಮಾನ್ ದೇವರೇ ಅಲ್ಲ ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಅದಕ್ಕೆ ನೆಟ್ಟಿಗರೂ ಹುಚ್ಚು ಹಿಡಿದಿದೆಯಾ ಎಂದು ಖಾರವಾಗಿಯೇ ರಿಯಾಕ್ಟ್ ಆಗಿದ್ದಾರೆ.

ಆದಿಪುರುಷ್ ಸಿನೆಮಾದ ಕಥೆ, ಪಾತ್ರಗಳು, ಡೈಲಾಗ್ ಗಳ ಜೊತೆಗೆ ಗ್ರಾಫಿಕ್ಸ್ ಬಗ್ಗೆ ಸಹ ವಿಮರ್ಶೆಗಳು ಕೇಳಿಬರುತ್ತಲೇ ಇದೆ. ಅರಣ್ಯಕಾಂಡ, ಯುದ್ದಕಾಂಡ ಆಧಾರ ಬಿಟ್ಟರೇ ಬೇರೆ ಎಲ್ಲಾ ವಿಚಾರದಲ್ಲೂ ಸಹ ರಾಮಾಯಣ ಕಥೆಗೆ ಆದಿಪುರುಷ್ ಸಿನೆಮಾ ವಿಭಿನ್ನವಾಗಿದೆ ಎಂದು ಅನೇಕ ಹಿಂದೂ ವಾದಿಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ಜೊತೆಗೆ ಸಿನೆಮಾದಲ್ಲಿನ ಡೈಲಾಗ್ ಗಳು ಕೂಡ ಸರಿಯಲ್ಲ ಎಂಬ ಟ್ರೋಲ್ ಸಹ ನಡೆಯುತ್ತಿದೆ. ಈ ಸಮಯದಲ್ಲೇ ಸಿನೆಮಾ ರೈಟರ್‍ ಮನೋಜ್ ಮುಂತಾಷಿರ್‍ ಸಹ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಅವರ ಕಾಂಟ್ರವರ್ಸಿ ಹೇಳಿಕೆಗಳ ಕಾರಣದಿಂದ ಆತನ ವಿರುದ್ದ ಅನೇಕರು ತಿರುಗಿ ಬಿದ್ದಿದ್ದಾರೆ.

ಕೆಲವು ದಿನಗಳಿಂದ ಹಿಂದೆ ಮನೋಜ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾವು ರಾಮಾಯಣ ಸಿನೆಮಾ ತೆಗೆದಿಲ್ಲ. ಆದಿಪುರುಷ್ ಸಿನೆಮಾ ರಾಮಾಯಣ ಅಲ್ಲ. ರಾಮಾಯಣ ಸಿನೆಮಾದ ಪ್ರೇರಣೆಯಿಂದ ನಿರ್ಮಾಣ ಮಾಡಿದ ಸಿನೆಮಾ ಇದಾಗಿದೆ ಎಂದು ಹೇಳಿಕೆಗಳನ್ನು ನೀಡಿದ್ದರು. ಇನ್ನೂ ಹನುಮಾನ್ ಪಾತ್ರಕ್ಕಾಗಿ ಮನೋಜ್ ಬರೆದಂತಹ ಡೈಲಾಗ್ ಸಹ ತೀವ್ರ ಚರ್ಚೆಗೆ ಕಾರಣವಾಗಿತ್ತು. ಮನೋಜ್ ಬರೆದ ಡೈಲಾಗ್ ಗಳನ್ನು ಸಮರ್ಥನೆ ಸಹ ಮಾಡಿಕೊಂಡಿದ್ದಾರೆ. ಇನ್ನೂ ಇತ್ತಿಚಿಗೆ ನಡೆದ ಸಂದರ್ಶನದಲ್ಲಿ ಮನೋಜ್ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ. ಹನುಮಂತ ದೇವರೇ ಅಲ್ಲ. ಓರ್ವ ಭಕ್ತ. ಶಕ್ತಿ ಭಕ್ತಿಯ ಕಾರಣದಿಂದ ನಾವು ಹನುಮಾನ್ ರನ್ನು ದೇವರು ಎಂದು ಭಾವಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆತ ಮಾಡಿದ ಹೇಳಿಕೆಗಳು ಇದೀಗ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

ಇನ್ನೂ ನೆಟ್ಟಿಗರು ಮನೋಜ್ ಮಾಡಿದಂತಹ ಹೇಳಿಕೆಗಳ ಕಾರಣದಿಂದ ಆತನ ವಿರುದ್ದ ಕಿಡಿಕಾರುತ್ತಿದ್ದಾರೆ. ಮನೋಜ್ ನೀವು ಮಾತನಾಡುತ್ತಿರುವ ಬಗ್ಗೆ ಗಮನ ಇದೆಯೇ, ಅಥವಾ ನಿಮಗೆ ಹುಚ್ಚು ಹಿಡಿದಿದೆಯೇ ಎಂದು ವಿವಿಧ ಕಾಮೆಂಟ್ ಗಳ ಮೂಲಕ ಫೈರ ಆಗುತ್ತಿದ್ದಾರೆ. ಇನ್ನೂ ಪ್ರಭಾಸ್ ಸಹ ಈ ವಿವಾದಗಳ ಬಗ್ಗೆ ಸೈಲೆಂಟ್ ಆಗಿದ್ದಾರೆ.

Most Popular

To Top