Film News

ರಹಸ್ಯವಾಗಿ ಪ್ರಿಯಕರನನ್ನು ಮದುವೆಯಾದ ತಾಪ್ಸಿ, ಉದಯಪುರ್ ದಲ್ಲಿ ಸೀಕ್ರೇಟ್ ಆಗಿ ನಡೆದ ಮದುವೆ, ಯಾಕೆ ಗೊತ್ತಾ?

ಇತ್ತೀಚಿಗೆ ಸಿನಿರಂಗದ ಅನೇಕ ಸ್ಟಾರ್‍ ಗಳ ಮದುವೆಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ರಕುಲ್ ಪ್ರೀತ್, ಕೃತಿ ಕರಬಂಧ ರಂತಹ ಸ್ಟಾರ್‍ ನಟಿಯರ ಮದುವೆ ನಡೆದಿದೆ. ಇತ್ತೀಚಿಗೆ ಸ್ಟಾರ್‍ ನಟಿ ತಾಪ್ಸಿ ಪನ್ನು ಮದುವೆಯ ಬಗ್ಗೆ ಸುದ್ದಿಗಳು ಜೋರಾಗಿ ಕೇಳಿಬಂದಿತ್ತು. ಆಕೆ ಸಹ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಕೋಚ್ ಮಥಿಯಾಸ್ ಬೋಯ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದಾರೆ. ಶೀಘ್ರದಲ್ಲೆ ಈ ಜೋಡಿಯ ಮದುವೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ತಾಪ್ಸಿ ಹಾಗೂ ಮಥಿಯಾಸ್ ಬೋಯ್ ಮದುವೆ ಸೀಕ್ರೆಟ್ ಆಗಿ ನಡೆದಿದೆ ಎಂದು ತಿಳಿದುಬಂದಿದೆ.

ಸೌತ್ ಸಿನಿರಂಗದಿಂದ ಬಾಲಿವುಡ್ ಗೆ ಹಾರಿದ ತಾಪ್ಸಿ ಪನ್ನು ಬಾಲಿವುಡ್ ಸಿನೆಮಾಗಳಲ್ಲಿಯೇ ಪುಲ್ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಗೆ ಹೋಗಿದ ಬಳಿಕ ತಾಪ್ಸಿ ತುಂಬಾನೆ ಬದಲಾಗಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗೆ ತೆರೆಕಂಡ ಡಂಕಿ ಸಿನೆಮಾದ ಮೂಲಕ ತಾಪ್ಸಿ ಒಳ್ಳೆಯ ಸಕ್ಸಸ್ ಪಡೆದುಕೊಂಡರು. ಸದ್ಯ ತಾಪ್ಸಿ ಮದುವೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಬಾಲಿವುಡ್ ನಲ್ಲಿ ಇತ್ತೀಚಿಗೆ ಹಿರೋಯಿನ್ ಗಳ ಮದುವೆ ನಡೆಯಿತು. ಕಿಯಾರಾ, ರಕುಲ್ ಪ್ರೀತ್ ಸಿಂಗ್ ಮದುವೆ ಸಹ ಇತ್ತೀಚಿಗಷ್ಟೆ ನಡೆಯಿತು. ಇದೀಗ ತಾಪ್ಸಿ ಸಹ ಮದುವೆಗೆ ಸಿದ್ದವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆಕೆಯ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಕೋಚ್ ಮಥಿಯಾಸ್ ಬೋಯ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದಾರೆ. ಇಷ್ಟು ದಿನ ಸೀಕ್ರೇಟ್ ಆಗಿ ಲವ್ ಟ್ರಾಕ್ ನಡೆಸಿದ್ದರು. ಇದೀಗ ಇಬ್ಬರೂ ಸೀಕ್ರೇಟ್ ಆಗಿಯೇ ಮದುವೆಯಾಗಿದ್ದಾರೆ.

ನಟಿ ತಾಪ್ಸಿ ಹಾಗೂ ಮಥಿಯಾಸ್ ಮದುವೆ ಮಾ.23 ರಂದು ಉದಯಪುರ್‍ ನಲ್ಲಿ ತುಂಬಾ ರಹಸ್ಯವಾಗಿ ನಡೆದಿದೆ ಎನ್ನಲಾಗಿದೆ. ಇಬ್ಬರ ಕುಟುಂಬಸ್ಥರು, ಕ್ಲೋಜ್ ಪ್ರೆಂಡ್ಸ್ ಮಾತ್ರ ಈ ಮದುವೆ ಸಮಾರಂಭದಲ್ಲಿ ಹಾಜರಾಗಿದ್ದರಂತೆ. ಮಾ.20 ರಂದು ಮದುವೆ ಸಂಭ್ರಮ ಶುರುವಾಗಿದ್ದು, ಮಾ.23 ರಂದು ಮದುವೆಯಾಗಿದೆಯಂತೆ. ತಾಪ್ಸಿ ಮದುವೆಯಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್, ಕನಿಕಾ ಥಿಲ್ಲಾನ್ ಸೇರಿದಂತೆ ಕೆಲವೇ ಮಂದಿ ಹಾಜರಾಗಿದ್ದಾರೆ. ತಪ್ಪಾಡ್ ಎಂಬ ಸಿನೆಮಾದಲ್ಲಿ ತಾಪ್ಸಿ ಜೊತೆಗೆ ನಟಿಸಿದಂತಹ ಪೋವೈಲ್ ಗುಲಾಟಿ ಎಂಬಾತ ಸಹ ಮದುವೆಗೆ ಹಾಜರಾಗಿದ್ದು, ಆತ ಒಂದು ಪೊಟೋ ಹಂಚಿಕೊಂಡಿದ್ದಾರೆ. ಅಸಲು ನಾವು ಎಲ್ಲಿದ್ದೀವಿ ಅಂತಾ ನಮಗೆ ಗೊತ್ತಿಲ್ಲ ಎಂದು ಪೊಟೋ ಹಂಚಿಕೊಂಡಿದ್ದಾರೆ. ಆ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ತಾಪ್ಸಿ ಮುಂಬೈನಲ್ಲಿ ಗ್ರಾಂಡ್ ಆಗಿ ರಿಸೆಪ್ಷನ್ ಕಾರ್ಯಕ್ರಮ ಆಯೋಜನೆ ಮಾಡಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.  ಒಟ್ಟಿನಲ್ಲಿ ತಾಪ್ಸಿ ಮದುವೆ ಸಹ ನಡೆದಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭಾಷಯಗಳನ್ನು ಕೋರುತ್ತಿದ್ದಾರೆ.

Most Popular

To Top