Film News

ಹೋಳಿ ಆಟವಾಡಿ ತಮ್ಮ ವಿಚ್ಚೇದನದ ವದಂತಿಗೂ ಪುಲ್ ಸ್ಟಾಪ್ ಇಟ್ಟ ಐಶ್ವರ್ಯಾ-ಅಭಿಷೇಕ್….!

ಸುಮಾರು ದಿನಗಳಿಂದ ಬಾಲಿವುಡ್ ಸ್ಟಾರ್‍ ಐಶ್ವರ್ಯ ರಾಯ್ ಹಾಗೂ ಅಭಿಷೇಕ್ ಬಚ್ಚನ್ ರವರು ವಿಚ್ಷೇದನ ಪಡೆದುಕೊಳ್ಳಲಿದ್ದಾರೆ ಎಂಬ ವದಂತಿ ತುಂಬಾನೆ ಹರಿದಾಡುತ್ತಿದೆ. ಈ ವದಂತಿ ಹರಿದಾಡಲು ಕೆಲವೊಂದು ಸಂಘಟನೆಗಳೂ ಸಹ ಕಾರಣವಾಗಿದೆ ಎನ್ನಬಹುದು. ಅದು ಏನೇ ಇರಲಿ ಇದೀಗ ಈ ವಿಚ್ಚೇದನದ ರೂಮರ್‍ ಗೆ ಈ ಜೋಡಿ ಪುಲ್ ಸ್ಟಾಪ್ ಇಟ್ಟಿದ್ದಾರೆ. ಹೋಳಿ ಹಬ್ಬವನ್ನು ಇಬ್ಬರೂ ಒಟ್ಟಿಗೆ ಸಂತೋಷದಿಂದ ಆಚರಿಸಿಕೊಳ್ಳುವ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

ಬಾಲಿವುಡ್ ನ ಬೆಸ್ಟ್ ಜೋಡಿ ಎಂದೇ ಕರೆಯಲಾಗುವ ಐಶ್ವರ್ಯ ಹಾಗೂ ಅಭಿಷೇಕ್ ಸುಮಾರು 20 ವರ್ಷಗಳಿಂದ ಸಂತೋಷವಾಗಿ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ. 2007 ರಲ್ಲಿ ಪ್ರೀತಿಸಿ ಮದುವೆಯಾದ ಈ ಜೋಡಿ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಜೋಡಿಗೆ ಆರಾಧ್ಯ ಎಂಬ ಮುದ್ದಾದ ಮಗಳೂ ಸಹ ಇದ್ದಾಳೆ. ಇದೀಗ ಈ ಜೋಡಿಯ ಬಗ್ಗೆ ರೂಮರ್‍ ಒಂದು ಕೇಳಿಬರುತ್ತಿದೆ. ಸೋಷಿಯಲ್ ಮಿಡಿಯಾದ ಜೊತೆಗೆ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಈ ಸುದ್ದಿ ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಅಭಿಷೇಕ್ ಬಚ್ಚನ್ ಅವರ ಎಂಗೇಜ್ ಮೆಂಟ್ ರಿಂಗ್ ಇಲ್ಲದೇ ಕಾಣಿಸಿಕೊಂಡಿದ್ದು, ದೊಡ್ಡ ಚರ್ಚೆಗೆ ಕಾರಣವಾಗಿ ಅವರು ವಿಚ್ಚೇದನ ಪಡೆದುಕೊಳ್ಳುವುದು ಪಕ್ಕಾ ಎಂದು ಸುದ್ದಿ ವೈರಲ್ ಆಗಿತ್ತು.

ಸದ್ಯ ದೇಶದಾದ್ಯಂತ ಹೋಳಿ ಆಚರಣೆ ಜೋರಾಗಿ ನಡೆಯುತ್ತಿದೆ. ಸಾಮಾನ್ಯರೂ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಸಂಭ್ರಮದಿಂದ ಹೋಳಿಯನ್ನು ಆಚರಿಸಿದ್ದಾರೆ. ಈ ಹಾದಿಯಲ್ಲೇ ಬಾಲಿವುಡ್ ಫೇಮಸ್ ಜೋಡಿ ಐಶ್ವರ್ಯ ಹಾಗೂ ಅಭಿಷೇಕ್ ರವರು ಸಹ ಹೋಳಿಯನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಿದ್ದಾರೆ. ಈ ಸಂಬಂಧ ಪೊಟೋಗಳನ್ನು ಬಚ್ಚನ್ ಕುಟುಂಬದ ನವ್ಯಾ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳು ಹಂಚಿಕೊಂಡ ಕಡಿಮೆ ಸಮಯದಲ್ಲೇ ತುಂಭಾ ವೈರಲ್ ಆಗುತ್ತಿದ್ದು, ತಮ್ಮ ವಿರುದ್ದ ಕೇಳಿಬರುತ್ತಿರುವ ವಿಚ್ಚೇದನದ ವದಂತಿಗೆ ಪುಲ್ ಬ್ರೇಕ್ ಹಾಕಿದ್ದಾರೆ.

 

ಇನ್ನೂ ಐಶ್ವರ್ಯ ಹಾಗೂ ಅಭಿಷೇಕ್ ರವರ ಹೋಳಿ ಆಚರಣೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನೀವು ಸಂತೋಷವಾಗಿ ಜೀವನ ಸಾಗಿಸಿ ಎಂದೂ, ಬೆಸ್ಟ್ ಜೋಡಿ ಎಂತಲೂ, ಈ ಪೊಟೋಗಳ ಮೂಲಕ ರೂಮರ್‍ ಗಳಿಗೆ ಪುಲ್ ಸ್ಟಾಪ್ ಹಾಕಿದ್ದೀರಾ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top