ರಾತ್ರಿ 10 ಗಂಟೆ ಬಳಿಕ ಬಾಲಿವುಡ್ ನಡೆಯೋದು ಅದೇ ಎಂದು ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ ನಟಿ ತಾಪ್ಸಿ…..!

Follow Us :

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ತಾಪ್ಸಿ ಪನ್ನು ಸಹ ಒಬ್ಬರಾಗಿದ್ದು, ಇದೀಗ ಆಕೆ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಬಾಲಿವುಡ್‌ ನಲ್ಲಿ ದೊಡ್ಡ ಫೇಮ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದೀಗ ಬಾಲಿವುಡ್ ಸಿನಿರಂಗದ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು, ಅವರು ವೈರಲ್ ಆಗುತ್ತಿವೆ.

ಕಳೆದ 2010 ರಲ್ಲಿ ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ತಾಪ್ಸಿ ಅನೇಕ ಸ್ಟಾರ್‍ ಗಳ ಜೊತೆಗೆ ತೆರೆ ಹಂಚಿಕೊಂಡರು. ಆದರೆ ಆಕೆಗೆ ಯಾವುದೇ ಸಿನೆಮಾ ಕಮರ್ಷಿಯಲ್ ಸಕ್ಸಸ್ ತಂದುಕೊಡಲಿಲ್ಲ. ಬಳಿಕ ಆಕೆ ಬಾಲಿವುಡ್ ನಲ್ಲಿ ಛಷ್ಮೆ ಬದ್ದೂರ್‍ ಸಿನೆಮಾದಲ್ಲಿ ನಟಿಸಿದ್ದರು. ಸೌತ್ ನಲ್ಲಿ ನಟಿಸುತ್ತಲೇ, ಹಿಂದಿಯಲ್ಲೂ ಸಹ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಾ ಬಂದರು. ತಾಪ್ಸಿ 2016 ರಿಂದ ಬಾಲಿವುಡ್ ನಲ್ಲೇ ಬ್ಯುಸಿಯಾಗಿದ್ದಾರೆ. ಸದ್ಯ ಇರುವಂತಹ ನಟಿಯರಲ್ಲಿ ತಾಪ್ಸಿ ತುಂಬಾನೆ ವಿಭಿನ್ನ ಎಂದೇ ಹೇಳಬಹುದು. ಏನಾದರೂ ಸಮಸ್ಯೆಯ ಬಗ್ಗೆ ಮಾತನಾಡಬೇಕಾದರೇ ಆಕೆ ನೇರವಾಗಿಯೇ ಮಾತನಾಡುತ್ತಾರೆ. ಸಿನಿರಂಗದಲ್ಲಿ ನಡೆಯುವಂತಹ ಕೆಲವೊಂದು ವಿಚಾರಗಳ ಬಗ್ಗೆ ಜೋರಾಗಿಯೇ ಮಾತನಾಡುತ್ತಿರುತ್ತಾರೆ.

ಇನ್ನೂ ನಟಿ ತಾಪ್ಸಿ ಪನ್ನು ಬಾಲಿವುಡ್ ನಲ್ಲಿ ನಡೆಯುವಂತಹ ಈವೆಂಟ್ಸ್, ಪಾರ್ಟಿಗಳಲ್ಲಿ ಹೆಚ್ಚಾಗಿ ಭಾಗಿವಹಿಸುವುದಿಲ್ಲ. ಇತ್ತೀಚಿಗೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ಅನೇಕ ಬಾಲಿವುಡ್ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಆದರೆ ತಾಪ್ಸಿ ಹಾಜರಾಗಿರಲಿಲ್ಲ. ಈ ಕುರಿತು ಎದುರಾದ ಪ್ರಶ್ನೆಗೆ ತಾಪ್ಸಿ ಉತ್ತರ ಕೊಟ್ಟಿದ್ದಾರೆ.  ದೊಡ್ಡ ಸ್ಟಾರ್‍ ಗಳಿಗೆ ಸಂದೇಶ ಕಳುಹಿಸಿ ಎಂದು ಕೆಲವರು ಹೇಳಿದ್ದರು. ಅದಾದರೇ ನನ್ನನ್ನು ಅವರ ಹುಟ್ಟುಹಬ್ಬ ಪಾರ್ಟಿಗಳಿಗೆ ಆಹ್ವಾನಿಸುತ್ತಾರೆ. ಆದರೆ ನಾನು ಆ ರೀತಿ ಮಾಡುವುದಿಲ್ಲ. ನಾನು ಬೆಳಿಗ್ಗೆ ಬೇಗ ನಿದ್ದೆಯಿಂದ ಏಳುತ್ತೇನೆ ಆದ್ದರಿಂದ ನಾನು ಬೇಗ ಮಲಗಬೇಕು. ನಾನು ಸಿಗರೇಟ್ ಕುಡಿಯೊಲ್ಲ, ಆದ್ದರಿಂದ ಪಾರ್ಟಿಯಲ್ಲಿ ನಾನು ಏನು ಮಾಡಬೇಕೆಂಬುದು ಗೊತ್ತಿಲ್ಲ. ನನಗೆ ಪರಿಚಯವಿಲ್ಲ ವ್ಯಕ್ತಿಗಳ ಪಾರ್ಟಿಗಳಲ್ಲಿ ಭಾಗಿಯಾಗೊಲ್ಲ. ಪಾರ್ಟಿಗಳಿಗೆ ಹೋಗದೇ ಇದ್ದರೇ ಏನು ಬರೊಲ್ಲ ಅಂತಾ ಅಲ್ಲ. ಈ ರೀತಿ ಪಾರ್ಟಿಗಳನ್ನು ಮಾಡಿಕೊಳ್ಳುತ್ತಿದ್ದರೇ ಬಾಲಿವುಡ್ ನಲ್ಲಿ ಸುಲಭವಾಗಿ ಮುಂದೆ ಹೋಗಬಹುದು. 10 ಗಂಟೆ ಬಳಿಕ ಪಾರ್ಟಿ ಮಾಡುವುದು ನನಗೆ ಭಾರವಾಗಿ ಅನ್ನಿಸುತ್ತದೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಕಷ್ಟಪಟ್ಟು ಇಲ್ಲಿಯವರೆಗೂ ಬಂದಿದ್ದೇನೆ ಎಂದಿದ್ದಾರೆ. ಇದಿಗ ತಾಪ್ಸಿ ಹಂಚಿಕೊಂಡ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.