News

ಉತ್ತರ ಪತ್ರಿಕೆಯಲ್ಲಿ ಉತ್ತರಕ್ಕೆ ಬದಲು ವಿದ್ಯಾರ್ಥಿನಿ ಬರೆದಿದ್ದು ಏನು ಗೊತ್ತಾ, ವೈರಲ್ ಆದ ವಿದ್ಯಾರ್ಥಿಯ ವಿಚಿತ್ರ ಮನವಿ…..!

ಸದ್ಯ ದೇಶದಾದ್ಯಂತ 10ನೇ ತರಗತಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿವೆ. ಕೆಲವೊಂದು ಕಡೆ ಬೋರ್ಡ್ ಪರೀಕ್ಷೆಗಳು ಮುಗಿದು ಮೌಲ್ಯಮಾಪನ ಕಾರ್ಯ ಸಹ ನಡೆಯುತ್ತಿದೆ. ಇದೀಗ ಉತ್ತರ ಪತ್ರಿಕೆಯಲ್ಲಿ ತನ್ನನ್ನು ಪಾಸ್ ಮಾಡುವಂತೆ ವಿಚಿತ್ರವಾದ ಮನವಿಯನ್ನು ಮಾಡಿದ್ದಾರೆ. ವಿದ್ಯಾರ್ಥಿನಿಯ ವಿಚಿತ್ರ ಮನವಿಯೊಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬಿಹಾರ ಮೂಲದ ವಿದ್ಯಾರ್ಥಿನಿಯೊಬ್ಬಳು 10ನೇ ತರಗತಿಯಲ್ಲಿ ಓದುತ್ತಿದ್ದು, ಆಕೆ ಪರೀಕ್ಷೆಯನ್ನು ಬರೆದಿದ್ದಾರೆ. ಆಕೆ ಏನಾದರೂ ಮಾಡಿ ನನ್ನನ್ನು ಪಾಸ್ ಮಾಡಿ ಎಂದು ಮನವಿ ಮಾಡಿದ್ದಾರೆ. ಇಂಗ್ಲೀಷ್ ಪರೀಕ್ಷೆಯನ್ನು ನಾನು ಫೇಲ್ ಆದರೇ ನನ್ನ ತಂದೆ ನನಗೆ ಮದುವೆ ಮಾಡುತ್ತಾರೆ. ನನಗೆ ಈಗಲೇ ಮದುವೆಯಾಗೋಕೆ ಇಷ್ಟವಿಲ್ಲ. ಮದುವೆಯಿಂದ ತಪ್ಪಿಸಿಕೊಳ್ಳಲು ನಾನು ಪಾಸಾಗಬೇಕಿದೆ. ಹೇಗಾದರೂ ಮಾಡಿ ಇಂಗ್ಲೀಷ್ ವಿಷಯದಲ್ಲಿ ನನ್ನನ್ನು ಪಾಸ್ ಮಾಡಿ. ನನ್ನ ತಂದೆ ರೈತನಾಗಿದ್ದಾನೆ. ಅದರಿಂದ ನನ್ನ ಓದಿಸೋಕೆ ತುಂಬಾ ಕಷ್ಟ ಪಡುತ್ತಿದ್ದಾರೆ. ಈ ಕಾರಣದಿಂದ ನನ್ನನ್ನು ಓದಿಸಲು ಅವರಿಗೆ ಇಷ್ಟವಿಲ್ಲ. ನನ್ನ ಮರ್ಯಾದೆ ಉಳಿಸಿ, ನಾನು ತುಂಬಾ ಬಡಕುಟುಂಬದಿಂದ ಬಂದವಳು ಎಂದು ಮನವಿ ಮಾಡಿದ್ದಾಳೆ.  ಇದೀಗ ಆ ವಿದ್ಯಾರ್ಥಿನಿಯ ಮನವಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಅಷ್ಟೇಅಲ್ಲದೇ ಮತ್ತೋರ್ವ ವಿದ್ಯಾರ್ಥಿ ಸಾಜನ್ ಎಂಬ ಬಾಲಿವುಡ್ ಸಿನೆಮಾದ ಹಾಡನ್ನು ಬರೆದಿದ್ದಾನೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಕೆಲವರು ಹರಿಬಿಡುತ್ತಿದ್ದಾರೆ. ವಿದ್ಯಾರ್ಥಿಗಳ ಈ ವಿಚಿತ್ರ ಉತ್ತರಗಳನ್ನು ನೋಡಿ ಮೌಲ್ಯಮಾಪಕರು ಶಾಕ್ ಆಗಿದ್ದಾರೆ. ಪ್ರತೀ ವರ್ಷ ಪರೀಕ್ಷೆಗಳಲ್ಲಿ ಇಂತಹ ಉತ್ತರಗಳನ್ನು ನೋಡುತ್ತಿರುತ್ತೇವೆ. ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರೇ ಮಾತ್ರವಷ್ಟೆ ನಾವು ವಿದ್ಯಾರ್ಥಿಗಳನ್ನು ಪಾಸ್ ಮಾಡುತ್ತೇವೆ. ಇಲ್ಲ ಅಂದರೇ ಅವರ ಉತ್ತರಕ್ಕೆ ಶೂನ್ಯ ಉತ್ತರ ನೀಡುವುದಾಗಿ ಶಿಕ್ಷಕರು ತಿಳಿಸಿದ್ದಾರೆ ಎನ್ನಲಾಗಿದೆ.

Most Popular

To Top