ಪವನ್ ಕಲ್ಯಾಣ್ ರವರು ದೇವರಿಗೆ ಸಮಾನ ಎಂದ ನಟಿ ಶ್ರೀಲೀಲಾ, ಪವನ್ ಅಭಿಮಾನಿಗಳ ಮನಗೆದ್ದ ನಟಿ…..!

Follow Us :

ತೆಲುಗು ಸ್ಟಾರ್‍ ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ರವರು ಸಿನಿರಂಗದಲ್ಲಿ ತುಂಬಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ಸಾಮಾನ್ಯರು ಮಾತ್ರವಲ್ಲದೇ ಅವರಿಗೆ ಸಿನೆಮಾ ಸೆಲೆಬ್ರೆಟಿಗಳೂ ಸಹ ಫ್ಯಾನ್ಸ್ ಆಗಿದ್ದಾರೆ. ಅನೇಕ ಹಿರೋ ಹಿರೋಯಿನ್ ಗಳು ಹಲವು ಭಾರಿ ತಾವು ಪವನ್ ಕಲ್ಯಾಣ್ ಅಭಿಮಾನಿಗಳೆಂದು ಹೇಳಿದ್ದಾರೆ. ಈ ಹಾದಿಯಲ್ಲೇ ಸ್ಟಾರ್‍ ನಟಿ ಶ್ರೀಲೀಲಾ ಸಹ ಪವನ್ ಕಲ್ಯಾಣ್ ರವರು ನನಗೆ ದೇವರಿದ್ದಂತೆ ಎಂದು ಹೇಳುವ ಮೂಲಕ ಪವನ್ ಅಭಿಮಾನಿಗಳ ಮನಗೆದ್ದಿದ್ದಾರೆ.

ಕನ್ನಡ ಮೂಲದ ನಟಿ ಶ್ರೀಲೀಲಾ ಸದ್ಯ ತೆಲುಗು ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ತೆರೆಕಂಡ ಭಗವಂತ್ ಕೇಸರಿ ಸಿನೆಮಾದಲ್ಲಿ ನಂದಮೂರಿ ಬಾಲಕೃಷ್ಣರವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡಿದೆ. ಇನ್ನೂ ಈ ಸಿನೆಮಾದ ಪ್ರಮೋಷನ್ ವೇಳೆ ಸಹ ಶ್ರೀಲೀಲಾ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಆಕೆಯ ಕೈಯಲ್ಲಿ 8 ಸಿನೆಮಾಗಳಿವೆ. ಅದರಲ್ಲಿ ಮೆಗಾ ಕುಟುಂಬದ ಪಂಜಾ ವೈಷ್ಣವ್ ತೇಜ್ ಜೊತೆಗೆ ಆದಿ ಕೇಶವ್ ಎಂಬ ಸಿನೆಮಾದಲ್ಲೂ ಸಹ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಸಿನೆಮಾದಿಂದ ಇತ್ತೀಚಿಗೆ ಮಾಸ್ ಹಾಡು ಸಹ ರಿಲೀಸ್ ಆಗಿದ್ದು, ಆ ಸಾಂಗ್ ಭಾರಿ ಫೇಂ ಪಡೆದುಕೊಂಡಿದೆ.

ಇನ್ನೂ ಆದಿಕೇಶವ್ ಸಿನೆಮಾ ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ. ಈ ಹಾದಿಯಲ್ಲೇ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಶ್ರೀಲೀಲಾ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಈ ವೇಳೆ ಆಕೆಗೆ ನಟರ ಬಗ್ಗೆ ಸಿಂಗಲ್ ವರ್ಡ್ ಹೇಳಬೇಕೆಂಬ ಪ್ರಶ್ನೆ ಎದುರಾಗಿದೆ. ಪವನ್ ಕಲ್ಯಾಣ್ ರವರ ಬಗ್ಗೆ ಎಂದು ಆಂಕರ್‍ ಕೇಳಿದಾಗ ಆಕೆ ಪವನ್ ಕಲ್ಯಾಣ್ ರವರು ತುಂಬಾನೆ ಪ್ರತ್ಯೇಕ. ಅವರನ್ನು ನೋಡಿದಾಗಲೆಲ್ಲಾ ದೇವರನ್ನು ನೊಡಿದಂತೆ ಆಗುತ್ತದೆ. ಅವರು ದೇವರಿದ್ದಂತೆ ಎಂದು ಹೇಳಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಪವನ್ ಕಲ್ಯಾಣ್ ಅಭಿಮಾನಿಗಳಂತೂ ಪುಲ್ ಖುಷಿಯಾಗಿ ಶ್ರೀಲೀಲಾ ರನ್ನು ಹೊಗಳುತ್ತಿದ್ದಾರೆ.

ಇನ್ನೂ ಕಡಿಮೆ ಸಮಯದಲ್ಲೇ ಶ್ರೀಲೀಲಾ ಟಾಲಿವುಡ್ ನಲ್ಲಿ ಸ್ಟಾರ್‍ ನಟಿಯಾದರು. ಅನೇಕ ನಟಿಯರಿಗೆ ಆಕೆ ದೊಡ್ಡ ಮಟ್ಟದ ಪೈಪೋಟಿಯನ್ನೇ ಕೊಡುತ್ತಿದ್ದಾರೆ ಎನ್ನಬಹುದಾಗಿದೆ. ಬ್ಯಾಕ್ ಟು ಬ್ಯಾಖ್ ಸಿನೆಮಾಗಳ ಮೂಲಕ ಭಾರಿ ಫಾಲೋಯಿಂಗ್ ಸಹ ಬೆಳೆಸುಕೊಳ್ಳುತ್ತಿದ್ದಾರೆ. ಇನ್ನೂ ಆಕೆ ಪವನ್ ಕಲ್ಯಾಣ್ ರವರ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲೂ ಸಹ ನಾಯಕಿಯಾಗಿ ನಟಿಸಿದ್ದು, ಸಿನೆಮಾದ ಬಳಿಕ ಆಕೆಯ ಕ್ರೇಜ್ ಮತಷ್ಟು ಏರಲಿದೆ ಎಂದು ಹೇಳಲಾಗುತ್ತಿದೆ.