ಟ್ರೋಲರ್ ಗಳ ಬಗ್ಗೆ ಫೈರ್ ಆದ ರೇಣು ದೇಸಾಯಿ, ಮಾರಿಹೋಗಿದ್ದೀಯಾ ಎಂದಾಗ ನೋವಾಗಲಿಲ್ಲ, ಆದರೇ ಈಗ….!

Follow Us :

ತೆಲುಗು ನಟ ಪವನ್ ಕಲ್ಯಾಣ್ ರವರ ಮಾಜಿ ಪತ್ನಿ ರೇಣು ದೇಸಾಯಿ ವಿಚ್ಚೇದನ ಪಡೆದುಕೊಂಡು ವರ್ಷಗಳೇ ಕಳೆದಿದೆ. ವಿಚ್ಚೇದನ ಬಳಿಕ ರೇಣು ತನ್ನ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ವಿಚ್ಚೇದನದ ಬಳಿಕ ಅನೇಕ ಬಾರಿ ರೇಣು ಪವನ್ ಕಲ್ಯಾಣ್ ರವರ ಬಗ್ಗೆ ಅನೇಕ ವಿಮರ್ಶೆಗಳನ್ನು ಮಾಡಿದರು. ಸೋಷಿಯಲ್ ಮಿಡಿಯಾದ ಮೂಲಕ ಆಕೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಇತ್ತಿಚಿಗೆ ಪವನ್ ರೇಣು ವಿಚ್ಚೇದನದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಸಹ ನಡೆಯುತ್ತಿದೆ. ಇದೀಗ ತಮ್ಮ ಮೇಲಿನ ಟ್ರೋಲರ್‍ ಗಳ ವಿರುದ್ದ ರೇಣು ಫೈರ್‍ ಆಗಿದ್ದಾರೆ. ಅಷ್ಟಕ್ಕೂ ಆಕೆ ಫೈರ್‍ ಆಗಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ

ನಟಿ ರೇಣು ದೇಸಾಯಿ ಇತ್ತೀಚಿಗಷ್ಟೆ ತೆರೆಕಂಡ ಟೈಗರ್‍ ನಾಗೇಶ್ವರರಾವ್ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಆಕೆ ಅನೇಕ ಸಂದರ್ಶನಗಳಲ್ಲೂ ಸಹ ಭಾಗಿಯಾಗುತ್ತಿದ್ದಾರೆ.  ಇನ್ನೂ ರೇಣು ತನ್ನ ಮಕ್ಕಳಾದ ಅಖಿರಾ ಹಾಗೂ ಆದ್ಯ ಬಗ್ಗೆ ಹೆಚ್ಚು ಕೇರ್‍ ತೆಗೆದುಕೊಳ್ಳುತ್ತಾರೆ. ಜೊತೆಗೆ ಅವರ ಬಗ್ಗೆ ಸಹ ಸೋಷಿಯಲ್ ಮಿಡಿಯಾ ಹೆಚ್ಚು ಪೋಕಸ್ ಇಟ್ಟಿದ್ದಾರೆ. ಸದ್ಯ ರೇಣು ಹೆಚ್ಚಾಗಿ ಇಂಟರ್‍ ವ್ಯೂ ಗಳಲ್ಲಿ ಭಾಗಿಯಾಗುತ್ತಿರುವ ಕಾರಣದಿಂದ ಮತ್ತೆ ಪವನ್ ಹಾಗೂ ರೇಣು ವಿಚ್ಚೇದನದ ಬಗ್ಗೆ ಚರ್ಚೆ ಸಹ ಆಗುತ್ತಿದೆ. ಸದ್ಯ ಪವನ್ ಕಲ್ಯಾಣ್ ರಾಜಕೀಯದಲ್ಲಿ ಹೆಚ್ಚು ಸಕ್ರೀಯರಾಗಿರುವ ಕಾರಣದಿಂದ ಈ ವಿಚಾರ ರಾಜಕೀಯವಾಗಿಯೂ ಸಹ ವಿಮರ್ಶೆಗೆ ಪವನ್ ಗುರಿಯಾಗುತ್ತಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ರೇಣು ಪವನ್ ಕಲ್ಯಾಣ್ ರವರನ್ನು ಸಪೋರ್ಟ್ ಮಾಡಿ ಎಂದು ವಿಡಿಯೋ ಒಂದು ಮಾಡಿದ್ದರು. ಪವನ್ ಕಲ್ಯಾಣ್ ಜನರಿಗೆ ಒಳ್ಳೆಯದು ಮಾಡುವ ಉದ್ದೇಶ ಹೊಂದಿದ್ದು, ಅವರನ್ನು ಬೆಂಬಲಿಸಿ ಎಂದು ಹೇಳಿದ್ದರು. ಇನ್ನೂ ಪವನ್ ಕಲ್ಯಾಣ್ ವಿರೋಧಿಗಳು ರೇಣು ದೇಸಾಯಿರವರನ್ನು ಟ್ರೋಲ್ ಮಾಡಿದ್ದರು. ತಾನು ಏನೆ ಮಾತನಾಡಿದರೂ ಮಾರಾಟವಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ರೇಣು ಫೈರ ಆಗಿದ್ದಾರೆ. ನಾನು ಯಾರಿಗೆ ಮಾರಾಟವಾಗಿದ್ದೀನಿ, ಯಾರ ಬಳಿ ಹಣ ಪಡೆದುಕೊಂಡಿದ್ದೇನೋ ನನಗೆ ಅರ್ಥವಾಗುತ್ತಿಲ್ಲ. ಆದರೆ ನಾನು ಈ ಕಾಮೆಂಟ್ ಬಗ್ಗೆ ಎಂದೂ ಸಹ ನೋವು ಪಡಲಿಲ್ಲ. ಆದರೆ ಅಖಿರಾ ವಿಚಾರದಲ್ಲಿ ಹೇಳಿದ ಆ ಮಾತು ತುಂಬಾ ಬೇಸರವಾಗಿದೆ ಎಂದಿದ್ದಾರೆ.

ನಾನು ಪವನ್ ಕಲ್ಯಾಣ್ ರವರಿಗೆ ಸಪೋರ್ಟ್ ಮಾಡುತ್ತಿರುವುದು ಅಖಿರಾ ನನ್ನು ಹಿರೋ ಆಗಿ ಲಾಂಚ್ ಮಾಡಲು ಎಂದು ಹೇಳಿದ್ದಾರೆ. ಪವನ್ ಕಲ್ಯಾಣ್ ರವರ ಮಗ ಅಖಿರಾ. ಅಂತಹುದರಲ್ಲಿ ಅಖಿರಾನನ್ನು ಲಾಂಚ್ ಮಾಡಲು ಆತನ ತಂದೆಗೆ ನಾನು ಮೆಚ್ಚಿಸಬೇಕೆ ಎಂದು ಬೇಸರ ಹೊರಹಾಕಿದ್ದಾರೆ. ಅಖಿರಾ ಲೈಫ್ ನಲ್ಲಿ ಸೆಟಲ್ ಆಗಲು ನನ್ನ ಅವಶ್ಯಕತೆಯಾಗಲಿ, ಕಲ್ಯಾಣ್ ರವರ ಅವಶ್ಯಕತೆಯಾಗಿ ಇಲ್ಲ. ಸ್ವಂತವಾಗಿ ಸೆಟಲ್ ಆಗುವಂತಹ ಕೆಪಾಸಿಟಿ ಅಖಿರಾಗೆ ಇದೆ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗಿದೆ.