ಟೈಟ್ ಫಿಟ್ ಡ್ರೆಸ್ ನಲ್ಲಿ ಬೋಲ್ಡ್ ಶೋ ಮಾಡಿದ ಶ್ರುತಿ ಹಾಸನ್, ವಿವಿಧ ಭಂಗಿಮಗಳಲ್ಲಿ ಹಾಟ್ ಟ್ರೀಟ್…!

Follow Us :

ಸೌತ್ ಸಿನಿರಂಗದಲ್ಲಿ ಈ ವರ್ಷದ ಆರಂಭದಲ್ಲೇ ಒಳ್ಳೆಯ ಸಕ್ಸಸ್ ಕಂಡುಕೊಂಡ ನಟಿ ಶ್ರುತಿ ಹಾಸನ್ ವಾಲ್ತೇರು ವೀರಯ್ಯ ಹಾಗೂ ವೀರಸಿಂಹಾರೆಡ್ಡಿ ಸಿನೆಮಾಗಳ ಸಕ್ಸಸ್ ಖುಷಿಯಲ್ಲಿದ್ದಾರೆ. ಶ್ರುತಿ ಹಾಸನ್ ನಟನೆಯ ಜೊತೆಗೆ  ಮ್ಯೂಜಿಕ್  ಎಂದರೇ ತುಂಬಾನೆ ಹುಚ್ಚು ಎಂದು ಹೇಳಬಹುದಾಗಿದೆ. ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ.  ಇದೀಗ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.

ನಟಿ ಶ್ರುತಿ ಹಾಸನ್ ಕೆರಿಯರ್‍ ಆರಂಭದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡ ಹಿನ್ನೆಲೆಯಲ್ಲಿ ಆಕೆ ಐರನ್ ಲೆಗ್ ಎಂಬ ಮುದ್ರೆಯನ್ನು ಹಾಕಿಕೊಂಡರು. ಆದರೆ ಹಿಂದೆ ಸರಿಯದೇ ಆಕೆ ಸಿನೆಮಾಗಳಲ್ಲಿ ನಟಿಸುತ್ತಾ ಟಾಪ್ ನಟಿಯಾಗಿ ಮುನ್ನುಗ್ಗಿದ್ದಾರೆ. ಶ್ರುತಿಗೆ ಬಿಗ್ ಬ್ರೇಕ್ ನೀಡಿದ್ದು ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ಗಬ್ಬರ್‍ ಸಿಂಗ್ ಸಿನೆಮಾ. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಬಳಿಕ ಶ್ರುತಿ ಹಾಸನ್ ಗೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಸಹ ಹರಿದುಬಂದವು. ಈ ಹಾದಿಯಲ್ಲೇ ಆಕೆ ಬಲುಪು, ಎವಡು, ರೇಸ್ ಗುರಂ, ಶ್ರೀಮಂತುಡು ಮೊದಲಾದ ಸಿನೆಮಾಗಳ ಮೂಲಕ ಸಕ್ಸಸ್ ಕಂಡುಕೊಂಡರು. ಇದರ ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಸುದ್ದಿಯಾಗಿದ್ದರು.

ಇನ್ನೂ ನಟಿ ಶ್ರುತಿ ಹಾಸನ್ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದರೂ ಸಹ ಸೋಷಿಯಲ್ ಮಿಡಿಯಾವನ್ನು ಸಕ್ರಿಯವಾಗಿ ಬಳಸುತ್ತಿರುತ್ತಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗಾಗಿ ಪೊಟೋಗಳು, ವಿಡಿಯೋಗಳು ಸೇರಿದಂತೆ ಸಿನೆಮಾ ಅಪ್ಡೇಟ್ ಬಗ್ಗೆ ಸಹ ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಟೈಟ್ ಬ್ರಾ ಧರಿಸಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಮಗಳಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಟೈಟ್ ಡ್ರೆಸ್ ನಲ್ಲಿ ಹಾಟ್ ಹಾಟ್ ಡ್ಯಾನ್ಸ್ ಮೂಮೆಂಟ್ಸ್ ಮಾಡುತ್ತಾ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳೂ ಸಹ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ವರ್ಷದ ಆರಂಭದಲ್ಲಿ ಮೆಗಾಸ್ಟಾರ್‍ ಜೊತೆಗೆ ವಾಲ್ತೇರು ವೀರಯ್ಯ ಹಾಗೂ ಬಾಲಯ್ಯ ಜೊತೆಗೆ ವೀರಸಿಂಹಾರೆಡ್ಡಿ ಸಿನೆಮಾಗಳ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಇದೀಗ ಆಕೆ ಪ್ರಭಾಸ್ ಜೊತೆಗೆ ಬಿಗ್ ಬಜೆಟ್ ಸಿನೆಮಾ ಸಲಾರ್‍ ನಲ್ಲಿ ಆದ್ಯ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಶ್ರುತಿ ಹಾಸನ್ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನೂ ಶ್ರುತಿ ಡೂಡಲ್ ಆರ್ಟಿಸ್ಟ್ ಶಾಂತಾನು ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ. ಶಾಂತಾನು ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.