Film News

ನನ್ನನ್ನು ಬ್ಲಾಕ್ ಕ್ಯಾಟ್ ಎಂದು ರೇಗಿಸುತ್ತಿದ್ದರು, ಬಾಡಿ ಶೇಮೀಂಗ್ ನೆನೆದು ಕಣ್ಣೀರಿಟ್ಟ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ….!

ಬಾಲಿವುಡ್ ಸಿನಿರಂಗದ ಸೀನಿಯರ್‍ ಬ್ಯೂಟಿ ಪ್ರಿಯಾಂಕಾ ಚೋಪ್ರಾ ರವರ ವಯಸ್ಸು ಏರುತ್ತಿದ್ದರೂ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹಾಲಿವುಡ್ ನಲ್ಲೇ ಸೆಟಲ್ ಆದ ಈಕೆ ಸದಾ ಹಾಟ್ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಹಾಟ್ ನೆಸ್ ಗೆ ಕೇರಾಫ್ ಎಂಬಂತೆ ಸದಾ ಟೆಂಪ್ಟಿಂಗ್ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನು ಸೆಳೆಯುತ್ತಿರುತ್ತಾರೆ. ಜೊತೆಗೆ ಆಗಾಗ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇದೀಗ ತಾವು ಎದುರಿಸಿದ ಅವಮಾನಗಳನ್ನು ಮೆಲುಕು ಹಾಕಿಕೊಂಡು ಭಾವುಕರಾಗಿದ್ದಾರೆ.

ಗ್ಲೋಬಲ್ ಸ್ಟಾರ್‍ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಪ್ರಿಯಾಂಕಾ ತಮಗಿಂತ 10 ವರ್ಷ ಚಿಕ್ಕವನಾದ ಹಾಲಿವುಡ್ ಸಿಂಗರ್‍ ಕಂ ಆಕ್ಟರ್‍ ನಿಕ್ ಜೋನಸ್ ಜೊತೆಗೆ ಪ್ರೇಮ ಪಯಣ ಸಾಗಿಸಿ, ಸುಮಾರು ವರ್ಷಗಳ ಕಾಲ ಡೇಟಿಂಗ್ ನಡೆಸಿ, ಕಳೆದ 2018ರಲ್ಲಿ ಮದುವೆಯಾದರು. ಮದುವೆಯಾದ ಬಳಿಕ ಆಕೆ ನ್ಯೂಯಾರ್ಕ್ ನಲ್ಲೇ ಸೆಟಲ್ ಆಗಿದ್ದಾರೆ. ಅಲ್ಲೇ ದುಬಾರಿ ಮನೆಯೊಂದನ್ನು ಸಹ ಖರೀದಿಸಿ ಸೆಟಲ್ ಆಗಿದ್ದಾರೆ. ಇನ್ನೂ ಪ್ರಿಯಾಂಕ ಚೋಪ್ರಾ ಏನೆ ಮಾಡಿದರೂ ಕಡಿಮೆ ಸಮಯದಲ್ಲೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ತಮಗಾದ ಅವಮಾನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಸಿನಿರಂಗಕ್ಕೆ ಆಕೆ ಎಂಟ್ರಿ ಕೊಟ್ಟಾಗ ಆಕೆ ಎದುರಿಸಿದ ಬಾಡಿ ಶೇಮೀಂಗ್ ಬಗ್ಗೆ ಮಾತನಾಡಿದ್ದಾರೆ. ಆಕೆಯ ಹೇಳಿಕೆಗಳು ಇದೀಗ ವೈರಲ್ ಆಗಿದೆ.

ಇತ್ತೀಚಿಗೆ ಅನೇಕ ನಟಿಯರು ಬಾಡಿ ಶೇಮಿಂಗ್ ಬಗ್ಗೆ ಒಪೆನ್ ಆಗಿಯೇ ಮಾತನಾಡುತ್ತಿರುತ್ತಾರೆ. ತಮ್ಮ ಕರಿಯರ್‍ ನಲ್ಲಿ ಎದುರಾದಂತಹ ಅನುಭವಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಸಹ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಸೌತ್ ಏಷ್ಯಾಗೆ ಸಂಬಂಧಿಸಿದ ಸಭೆಯೊಂದರಲ್ಲಿ ಈ ಬಗ್ಗೆ ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಈ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ ಚೋಪ್ರಾ ನಾನು ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗ ನನ್ನನ್ನು ತುಂಬಾ ಕೀಳಾಗಿ ನೋಡುತ್ತಿದ್ದರು. ನನ್ನನ್ನು ಬ್ಲಾಕ್ ಕ್ಯಾಟ್ ಎಂದು ಟೀಕೆ ಮಾಡುತ್ತಿದ್ದರು ಎಂದು ಭಾವುಕರಾಗಿದ್ದಾರೆ.

ನಾನು ಕೆರಿಯರ್‍ ಆರಂಭದಲ್ಲಿ ಕೊಂಚ ದಪ್ಪವಾಗಿದ್ದೆ ಜತೆಗೆ ಕಪ್ಪಾಗಿ ಸಹ ಇದ್ದೆ. ಅದನ್ನು ಬಳಸಿಕೊಂಡು ನನ್ನನ್ನು ತುಂಬಾ ಹಿಯಾಳಿಸುತ್ತಿದ್ದರು. ಪ್ರಾಣಿಗಳಿಗೆ ಹೋಲಿಕೆ ಮಾಡುತ್ತಿದ್ದರು. ಆಗ ನಾನು ತುಂಬಾ ನೋವನ್ನು ಅನುಭವಿಸುತ್ತಿದ್ದೆ. ಜೊತೆಗೆ ಅನೇಕ ಬಾರಿ ನೋವನ್ನು ಅನುಭವಿಸುವುದರ ಜೊತೆಗೆ ಅತ್ತಿದ್ದೇನೆ. ಅದನ್ನೆಲ್ಲಾ ಮೆಟ್ಟಿ ನಿಲ್ಲಲ್ಲು ನಾನು ತುಂಬಾನೆ ಕಷ್ಟಪಟ್ಟಿದ್ದೇನೆ ಎಂದು ಪ್ರಿಯಾಂಕಾ ಭಾವುಕರಾಗಿ ಮಾತನಾಡಿದ್ದಾರೆ. ಇನ್ನೂ ಪ್ರಿಯಾಂಕಾ ಸಿಟಾಡೆಲ್ ಎಂಬ ಸಿರೀಸ್ ನಲ್ಲಿ ನಟಿಸಿದ್ದಾರೆ.

Most Popular

To Top