Film News

ಡೇಟಿಂಗ್ ರೂಮರ್ ಬಗ್ಗೆ ರಿಯಾಕ್ಟ್ ಆದ ತಮನ್ನಾ, ಪ್ರತಿಯೊಬ್ಬರಿಗೂ ಜೀವನ ಎಂಬುದು ಇರುತ್ತೆ ಎಂದ ಮಿಲ್ಕಿ ಬ್ಯೂಟಿ…!

2023 ವರ್ಷದ ಆರಂಭದಿಂದ ಮಿಲ್ಕಿ ಬ್ಯೂಟಿ ತಮನ್ನಾ ಗೆ ಸಂಬಂಧಿಸಿದಂತೆ ರೂಮರ್‍ ಒಂದು ಹರಿದಾಡಲು ಶುರುವಾಗಿದೆ. ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ತಮನ್ನಾ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಲೇ ಇದೆ. ಇತ್ತೀಚಿಗೆ ಅವರು ಹಂಚಿಕೊಳ್ಳುವಂತಹ ಪೋಸ್ಟ್ ಗಳೂ ಸಹ ಈ ರೂಮರ್‍ ಗಳಿಗೆ ಮತಷ್ಟು ಬಲ ತಂದುಕೊಟ್ಟಿದೆ. ಇದೀಗ ತಮನ್ನಾ ಈ ಬಗ್ಗೆ ರಿಯಾಕ್ಟ್ ಆಗಿದ್ದು, ಪ್ರತಿಯೊಬ್ಬರಿಗೂ ಜೀವನ ಎಂಬುದು ಇರು‌ತ್ತದೆ ಎಂದು ಹೇಳಿದ್ದಾರೆ.

ಸುಮಾರು ದಿನಗಳಿಂದ ತಮನ್ನಾ ಹಾಗೂ ವಿಜಯ್ ವರ್ಮಾ ನಡುವೆ ಅಫೈರ್‍ ನಡೆಯುತ್ತಿದೆ ಎಂದು ರೂಮರ್‍ ಗಳು ಹರಿದಾಡುತ್ತಿದ್ದು, ಈ ಬಗ್ಗೆ ಈ ಹಿಂದೆ ಇಬ್ಬರಲ್ಲಿ ಯಾರೂ ರಿಯಾಕ್ಟ್ ಆಗಿರಲಿಲ್ಲ. ಇದೀಗ ತಮನ್ನಾ ರಿಯಾಕ್ಟ್ ಆಗಿದ್ದಾರೆ. ಇದೆಲ್ಲವೂ ನಿರಾಧಾರವಾದ ಸುದ್ದಿಗಳು. ಇಂತಹ ಸುದ್ದಿಗಳನ್ನು ಯಾರು ಸೃಷ್ಟಿ ಮಾಡುತ್ತಾರೆ ಎಂಬುದು ಅರ್ಥವಾಗುವುದಿಲ್ಲ. ಈ ರೂಮರ್‍ ಗಳು ನನ್ನ ವರೆಗೂ ಬಂದಿದ್ದು, ಅದನ್ನು ಕೇಳಿದ ಬಳಿಕ ನನಗೆ ತಮಾಷೆ ಎನ್ನಿಸಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಜೀವನ ಇರುತ್ತದೆ. ನನ್ನ ಜೀವನದಲ್ಲಿ ತುಂಬಾ ಪ್ರೀತಿಯನ್ನು ಪಡೆದುಕೊಂಡಿದ್ದೇನೆ ಎಂದು ತಮನ್ನಾ ಹೇಳಿದ್ದಾರೆ. ತಾನು ಅಭಿಮಾನಿಗಳಿಂದ ಅಪರಿಮಿತವಾದ ಪ್ರೀತಿಯನ್ನು ಪಡೆದುಕೊಂಡಿದ್ದೇನೆ. ಸದ್ಯ ನನಗೆ ಯಾವುದೇ ರೀತಿಯ ಅಫೈರ್‍ ಗಳು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಸದ್ಯ ತಮನ್ನಾ ಮೆಗಾಸ್ಟಾರ್‍ ಚಿರಂಜೀವಿ ಜೊತೆಗೆ ಭೋಳಾ ಶಂಕರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ತಮನ್ನಾ ಸೈರಾ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಈ ಸಿನೆಮಾದಲ್ಲಿ ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಚಿರುಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನೆಮಾ ಮೆಹರ್‍ ರಮೇಶ್ ನಿರ್ದೇಶನ ಮಾಡುತ್ತಿದ್ದಾರೆ. ತಮಿಳಿನಲ್ಲಿ ಹಿಟ್ ಹೊಡೆದ ವೇದಾಳಂ ಸಿನೆಮಾದ ರಿಮೇಕ್ ಇದಾಗಿದ್ದು. ಈ ಸಿನೆಮಾದಲ್ಲಿ ನಟಿ ಕೀರ್ತಿ ಸುರೇಶ್ ಚಿರಂಜೀವಿ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಮಿಳಿನಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ಜೊತೆಗೆ ಜೈಲರ್‍ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.

ತಮನ್ನಾ ಕೆರಿಯರ್‍ ನಲ್ಲಿ ಮೊದಲ ಬಾರಿಗೆ ಜೈಲರ್‍ ಸಿನೆಮಾದ ಮೂಲಕ ರಜನಿಕಾಂತ್ ರವರ ಜೊತೆಗೆ ನಟಿಸುತ್ತಿದ್ದಾರೆ. ಇನ್ನೂ ತಮನ್ನಾ ಗ್ಲಾಮರಸ್ ಡ್ಯಾನ್ಸ್ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಗ್ಲಾಮರ್‍ ಡ್ಯಾನ್ಸ್ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ತಮನ್ನಾ ಮೊದಲ ಸ್ಥಾನದಲ್ಲಿರುತ್ತಾರೆ ಎಂದರೇ ತಪ್ಪಾಗಲಾರದು. ಸುಮಾರು ಹದಿನೈದು ವರ್ಷಗಳಿಂದ ಸೌತ್ ಸಿನಿರಂಗದಲ್ಲಿ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top