Film News

ಮತ್ತೇರಿಸುವಂತಹ ಮಾದಕ ನೋಟ ಬೀರಿದ ಖಿಲಾಢಿ ಬ್ಯೂಟಿ ಡಿಂಪುಲ್ ಹಯಾತಿ, ವೈರಲ್ ಆದ ಪೊಟೋಸ್….!

ಇತ್ತೀಚಿಗೆ ನಟಿಯರು ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದ ಮೂಲಕ ಹೆಚ್ಚು ಪ್ಯಾಪುಲರ್‍ ಆಗುತ್ತಿರುತ್ತಾರೆ. ಜೊತೆಗೆ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಸಹ ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ಅಷ್ಟೇಅಲ್ಲದೇ ಸೌಂದರ್ಯ ಪ್ರದರ್ಶನದಲ್ಲಿ ತೆರೆದ ಪುಸ್ತಕದಂತೆ ತಮ್ಮ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಡಿಂಪುಲ್ ಹಯಾತಿ ಸಹ ಸೇರಿಕೊಳ್ಳುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಮಾದಕ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಹಾಟ್ ಬ್ಯೂಟಿ ಡಿಂಪುಲ್ ಹಯಾತಿ ಗಲ್ಫ್ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಆಕೆ ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಆದರೆ ಆಕೆಗೆ ಸಕ್ಸಸ್ ನೀಡಿದ್ದು ಮಾತ್ರ ಅಭಿನೇತ್ರಿ-2 ಸಿನೆಮಾ ಹಾಗೂ  ಗದ್ದಲಕೊಂಡ ಗಣೇಶ್ ಸಿನೆಮಾದಲ್ಲಿನ ಐಟಂ ಸಾಂಗ್. ಮೊದಲನೇ ಸಿನೆಮಾ ಗಲ್ಫ್ ಆಕೆಯ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಆಕೆಗೆ ಗದ್ದಲಕೊಂಡ ಗಣೇಶ್ ಸಿನೆಮಾದಲ್ಲಿನ ಐಟಂ ಸಾಂಗ್ ಮಾತ್ರ ತುಂಬಾನೆ ಕ್ರೇಜ್ ನೀಡಿದ್ದು, ಹಾಟ್ ಬಾಂಬ್ ಎಂಬ ಖ್ಯಾತಿಗೂ ಸಹ ಗುರಿಯಾದರು. ತೆಲುಗು ನಟಿಯಾದ ಡಿಂಪಲ್ ಅಂದುಕೊಂಡಷ್ಟು ಸಕ್ಸಸ್ ಕಂಡುಕೊಂಡಿಲ್ಲ. ಸಾಲಿಡ್ ಗ್ಲಾಮರ್‍, ಮತ್ತೇರಿಸುವಂತಹ ಕಣ್ಣುಗಳಿದ್ದರೂ ಸಹ ಆಕೆ ಸ್ಟಾರ್‍ ಆಗಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ನಟಿ ಡಿಂಪುಲ್ ಹಯಾತಿ ಟ್ರೆಡಿಷನಲ್ ಆಗಿ ಮಾದಕ ನೋಟ ಬೀರಿದ್ದಾರೆ. ಟ್ರೆಡಿಷನಲ್ ಡ್ರೆಸ್ ನಲ್ಲೂ ಆಕೆ ತುಂಬಾ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಆಕೆ ಯಾವುದೇ ಡ್ರೆಸ್ ಧರಿಸಿದರೂ ಸಹ ಹಾಟ್ ಡೋಸ್ ಮಾತ್ರ ಕಡಿಮೆ ಮಾಡುವುದಿಲ್ಲ. ಈ ಹಾದಿಯಲ್ಲೇ ಆಕೆ ಟ್ರೆಡಿಷನಲ್ ಡ್ರೆಸ್ ನಲ್ಲಿ ಮತ್ತೇರಿಸುವ ಲುಕ್ಸ್ ಕೊಟ್ಟಿದ್ದಾರೆ. ಮಾದಕ ನೋಟದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನೆಟ್ಟಿಗರು ಹಾಗೂ ಅಭಿಮಾನಿಗಳು ಆಕೆಯ ಮಾದಕತೆಗೆ ಫಿದಾ ಆಗಿ ಹಾಟ್ ಕಾಮೆಂಟ್ ಗಳು, ಫೈರಿಂಗ್ ಎಮೋಜಿಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಒಟ್ಟಾರೆಯಾಗಿ ಡಿಂಪುಲ್ ಹಯಾತಿ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ ಎಂದೇ ಹೇಳಬಹುದಾಗಿದೆ.

ಇನ್ನೂ ಡಿಂಪುಲ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ತಮ್ಮ ಸಿನೆಮಾ ಅಪ್ಡೇಟ್ ಗಳ ಜತೆಗೆ ಆಗಾಗ ಈ ಮಾದರಿಯ ಹಾಟ್ ಪೊಟೋಸ್ ಮೂಲಕ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ. ಟಾಲಿವುಡ್ ಸ್ಟಾರ್‍ ನಟ ರವಿತೇಜ ಜೊತೆಗೆ ಖಿಲಾಡಿ ಎಂಬ ಸಿನೆಮಾದ ಮೂಲಕ ಒಳ್ಳೆಯ ಹಿಟ್ ಪಡೆದುಕೊಂಡರು. ಆಕೆ ಕೊನೆಯದಾಗಿ ರಾಮಬಾಣಂ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಆಕೆಗೆ ನಿರಾಸೆಯನ್ನು ಮೂಡಿಸಿದೆ.

Most Popular

To Top