Film News

ಮೈ ಮೇಲೆ ಮತ್ತೊಂದು ಟ್ಯಾಟೂ ಹಾಕಿಸಿಕೊಂಡ ಸ್ಟಾರ್ ನಟಿ ಶ್ರುತಿ ಹಾಸನ್, ಎಲ್ಲಾ ಟ್ಯಾಟೂ ಗಳಿಗಿಂತ ಭಿನ್ನವಾದದ್ದು…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಲ್ಲೇ ಇರುತ್ತಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಸಿನೆಮಾ ಅಪ್ಡೇಟ್ ಗಳ ಜೊತೆಗೆ ಅನೇಕ ವೈಯುಕ್ತಿಕ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ತನ್ನ ಮೈಮೇಲೆ ಮತ್ತೊಂದು ಟ್ಯಾಟೂ ಹಾಕಿಸಿಕೊಂಡಿದ್ದು, ಆಕೆಯ ಹಾಕಿಸಿಕೊಂಡಿರುವ ಎಲ್ಲಾ ಟ್ಯಾಟೂ ಗಳಿಗಿಂತ ಇದು ಭಿನ್ನವಾದದ್ದು ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಸಿನೆಮಾ ತಾರೆಯರು ತಮ್ಮ ಮೈ ಮೇಲೆ ಟ್ಯಾಟೂ ಗಳನ್ನು ಹಾಕಿಸಿಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ತಮ್ಮ ದೇಹದ ಮೇಲೆ ಹತ್ತಿರದವರ ಹೆಸರಾಗಲಿ ಅಥವಾ ಕೆಲವೊಂದು ಟ್ಯಾಟೂ ಗಳನ್ನು ಹಾಖಿಸಿಕೊಳ್ಳುತ್ತಾರೆ. ಟ್ಯಾಟೂಗಳನ್ನು ಹಾಕಿಸಿಕೊಳ್ಳುವುದರಲ್ಲಿ ಶ್ರುತಿ ಹಾಸನ್ ಸದಾ ಮುಂದಿರುತ್ತಾರೆ. ಈಗಾಗಲೇ ಆಕೆಯ ಮೈ ಮೇಲೆ ಕೆಲವೊಂದು ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ಆಕೆಯ ಹೊಸ ಟ್ಯಾಟೂ ಎಲ್ಲ ಟ್ಯಾಟೂ ಗಳಿಗಿಂತ ವಿಭಿನ್ನವಾಗಿದೆ ಎಂದೇ ಹೇಳಲಾಗುತ್ತಿದೆ. ಈ ಬಾರಿಯ ಟ್ಯಾಟೂ ನಲ್ಲಿ ಭಕ್ತಿಭಾವ ಪ್ರದರ್ಶನ ಮಾಡಿದ್ದಾರೆ. ತನ್ನ ಇಷ್ಟದೈವ ಮುರುಗನ್ ಆಯುಧವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮಿಳಿನಲ್ಲಿ ತನ್ನ ಹೆಸರು ಇರುವಂತೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇನ್ನೂ ಈ ವಿಚಾರವನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಾನು ಸದಾ ಆಧ್ಯಾತ್ಮಿಕತೆಯ ಕಡೆ ಗಮನ ಕೊಡುತ್ತೇನೆ. ನನ್ನ ಹೃದಯಲ್ಲಿ ಮುರುಗನ್ ಗೆ ಪ್ರತ್ಯೇಕವಾದ ಸ್ಥಾನ ಇದೆ. ಈ ಟ್ಯಾಟೂ ಮೂಲಕ ನನ್ನಲ್ಲಿನ ಭಕ್ತಿ ಪ್ರದರ್ಶನ ಮಾಡಲು ಇಚ್ಚೆಪಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಆಕೆಯ ಈ ಟ್ಯಾಟೂ ಹಾಕಿಸಿಕೊಂಡ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆಕೆಯ ಮೈ ಮೇಲೆ ಮತಷ್ಟು ಟ್ಯಾಟೂಗಳೂ ಸಹ ಇದೆ. ಇದೀಗ ಎಲ್ಲಾ ಟ್ಯಾಟೂಗಳಿಗಿಂತ ಈ ಟ್ಯಾಟೂ ತುಂಬಾ ವಿಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀ‌ವ್ ಆಗಿರುವ ಶ್ರುತಿ ಹಾಸನ್ ಇದೀಗ ಟ್ಯಾಟೂ ಪೊಟೋ ಮೂಲಕ ಸುದ್ದಿಯಾಗಿದ್ದಾರೆ.

ಇನ್ನೂ ಶ್ರುತಿ ಹಾಸನ್ ಸದ್ಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಪಡೆದುಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲೇ ತೆರೆಕಂಡ ವಾಲ್ತೇರು ವೀರಯ್ಯ ಹಾಗೂ ವೀರಸಿಂಹಾರೆಡ್ಡಿ ಸಿನೆಮಾಗಳು ಬಾರಿ ಹಿಟ್ ಪಡೆದುಕೊಂಡರು. ಸದ್ಯ ಶ್ರುತಿ ಹಾಸನ್ ಬಾಹುಬಲಿ ಪ್ರಭಾಸ್ ಜೊತೆಗೆ ಸಲಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಶ್ರುತಿ ಹಾಸನ್ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನೂ ಆಕೆ ಖ್ಯಾತ ಡೂಡಲ್ ಆರ್ಟಿಸ್ಟ್ ಶಾಂತಾನು ಹಾಜಾರಿಕಾ ಎಂಬುವವರೊಂದಿಗೆ ಆಕೆ ಡೇಟಿಂಗ್ ನಡೆಸುತ್ತಿದ್ದಾರೆ.

Most Popular

To Top