Film News

ಆ ದಿನಕ್ಕಾಗಿ ಎದುರು ನೋಡುತ್ತಿದ್ದೀನಿ ಎಂದು ಕಾಮೆಂಟ್ ಮಾಡಿದ ಸ್ಟಾರ್ ನಟಿ ಶ್ರುತಿ ಹಾಸನ್…..!

ಸೌತ್ ಸಿನಿರಂಗದಲ್ಲಿ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿರುವ ನಟಿಯರ ಸಾಲಿನಲ್ಲಿ ಶ್ರುತಿ ಹಾಸನ್ ಟಾಪ್ ಸ್ಥಾನದಲ್ಲಿದ್ದಾರೆ. ಸೋಲುಗಳ ಮೂಲಕ ಫೇಡ್ ಔಟ್ ಆಗಿದ್ದ ಈಕೆ ಇದೀಗ ಮತ್ತೆ ಸಕ್ಸಸ್ ಹಾದಿಯಲ್ಲಿ ಸಾಗುತ್ತಿದ್ದಾರೆ. ಅದರಲ್ಲೂ ಈ ವರ್ಷದ ಆರಂಭದಲ್ಲೆ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದಾರೆ. ವೀರಸಿಂಹಾರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಸಿನೆಮಾಗಳ ಮೂಲಕ ಭಾರಿ ಸಕ್ಸಸ್ ಕಂಡುಕೊಂಡು ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟಿವ್ ಆಗಿದ್ದು, ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ.

ಸ್ಟಾರ್‍ ನಟಿ ಶ್ರುತಿ ಹಾಸನ್ ರವರು ನೇರ ವ್ಯಕ್ತಿತ್ವ ಹೊಂದಿರುವಂತಹವರು. ತನಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಸ್ಟಾರ್‍ ಕಿಡ್ ಆದರೂ ಸಹ ಸ್ವಯಂ ಕೃಷಿಯ ಮೇಲೆ ಸ್ಟಾರ್‍ ಡಮ್ ಗಿಟ್ಟಿಸಿಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ನಿಜ ಜೀವನದಲ್ಲೂ ಸಹ ಸಂಚಲನವನ್ನೇ ಸೃಷ್ಟಿಸುತ್ತಿರುತ್ತಾರೆ. ಆಕೆ ಯಾವುದೇ ಕಾರಣಕ್ಕೂ ತನ್ನ ತಂದೆಯ ಹೆಸರನ್ನು ಎಲ್ಲೂ ಬಳಸಿಕೊಳ್ಳುವುದಿಲ್ಲ. ಅನೇಕ ಸಂದರ್ಶನಗಳಲ್ಲಿ ನಮ್ಮ ತಂದೆ ತಾಯಿ ನನಗೆ ಸಂಪೂರ್ಣವಾದ ಸ್ವತಂತ್ರ ಕೊಟ್ಟಿದ್ದಾರೆ. ಅವರಿಂದ ನಾನು ಯಾವುದೇ ರೀತಿಯ ಆರ್ಥಿಕ ಸಹಾಯ ಇಲ್ಲಿಯವರೆಗೂ ಕೇಳಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ ಒಂದನ್ನು ಮಾಡಿದ್ದಾರೆ.

ಇನ್ನೂ ಇತ್ತೀಚಿಗೆ ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗದಲ್ಲಿ ಸಂಭಾವನೆಯ ತಾರತಮ್ಯದ ಬಗ್ಗೆ ಮಾತನಾಡಿದ್ದರು. ನಟರಿಗೆ ನೀಡುವಂತಹ ಸಂಭಾವನೆಯಷ್ಟೆ ನಟಿಯರಿಗೂ ಸಹ ನೀಡಬೇಕು. ನಟರಂತೆ ನಟಿಯರು ಸಹ ಸಿನೆಮಾ ಸಕ್ಸಸ್ ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಕಾಮೆಂಟ್ ಗಳನ್ನು ಮಾಡಿದ್ದರು. ಇದೀಗ ಇದಕ್ಕೆ ಶ್ರುತಿ ಹಾಸನ್ ಸಹ ಬೆಂಬಲ ಸೂಚಿಸಿದ್ದಾರೆ. ಸಿನಿರಂಗದಲ್ಲಿ ಹಿರೋಗಳಂತೆ ಹಿರೋಯಿನ್ ಗಳಿಗೂ ಸಹ ಸಮಾನತೆ ಇರಬೇಕು. ಸಮಾನ ವೇತನ ನೀಡಬೇಕು ಎಂದು ಹೇಳಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ರವರು ಹಾಲಿವುಡ್ ಹಿರೋಗಳಿಗೆ ಸಮನಾದ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಅದೇ ರೀತಿ ಇಲ್ಲೂ ಸಹ ಅಂತಹ ದಿನಗಳ ಬರಬೇಕು ಎಂದು ಶ್ರುತಿ ಹಾಸನ್ ಕಾಮೆಂಟ್ ಮಾಡಿದ್ದಾರೆ.

ಇನ್ನೂ ನಟಿ ಶ್ರುತಿ ಹಾಸನ್ ನಂದಮೂರಿ ಬಾಲಕೃಷ್ಣ ಜೊತೆಗೆ ವೀರಸಿಂಹಾರೆಡ್ಡಿ, ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ವಾಲ್ತೇರು ವೀರಯ್ಯ ಸಿನೆಮಾಗಳಲ್ಲಿ ನಟಿಸಿದ್ದು, ಈ ಎರಡೂ ಸಿನೆಮಾಗಳು ಭಾರಿ ಸಕ್ಸಸ್ ಕಂಡುಕೊಂಡಿದೆ. ಸದ್ಯ ಆಕೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಸಲಾರ್‍ ಸಿನೆಮಾದಲ್ಲೂ ಸಹ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Most Popular

To Top