ತಿರುಮಲಕ್ಕೆ ಭೇಟಿ ಕೊಟ್ಟ ಚೈತನ್ಯ, ನಿಹಾರಿಕಾ ಮಿಸ್, ಮತ್ತೊಮ್ಮೆ ವಿಚ್ಚೇದನದ ರೂಮರ್ ಸದ್ದು….!

ಮೆಗಾ ಕುಟುಂಬದಿಂದ ನಟಿಯಾಗಿ ಎಂಟ್ರಿಕೊಟ್ಟ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಸುಮಾರು ವರ್ಷಗಳ ಹಿಂದೆಯೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆಯ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡುಕೊಳ್ಳಲು ವಿಫಲರಾದರು. ಅದೇ ಸಮಯದಲ್ಲಿ ಆಕೆಗೆ ಪೋಷಕರು ಚೈತನ್ಯ ಜೊನ್ನಲಗಡ್ಡ ಎಂಬಾತನೊಂದಿಗೆ ಅದ್ದೂರಿಯಾಗಿ ಮದುವೆ ಮಾಡಿಸಿದರು. ಇನ್ನೂ ಸುಮಾರು ದಿನಗಳಿಂದ ನಿಹಾರಿಕಾ ಹಾಗೂ ಚೈತನ್ಯ ರವರ ಮದ್ಯೆ ವಿಬೇದಗಳು ಸೃಷ್ಟಿಯಾಗಿದ್ದು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೀಗ ಮತ್ತೊಮ್ಮೆ ಈ ರೂಮರ್‍ ಹರಿದಾಡುತ್ತಿದೆ.

ಮೆಗಾ ಡಾಟರ್‍ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ಬೇರೆಯಾಗಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಇಲ್ಲದೇ ಇದ್ದರೂ ಸಹ ಕೆಲವೊಂದು ಘಟನೆಗಳು ಈ ರೂಮರ್‍ ಗಳಿಗೆ ಮತಷ್ಟು ಬಲ ತಂದುಕೊಡುವಂತಿದೆ ಎಂದು ಹೇಳಬಹುದು. ನಿಹಾರಿಕಾ ಹಾಗೂ ಚೈತನ್ಯ ತಮ್ಮ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಿಂದ ಅನ್ ಫಾಲೋ ಮಾಡಿಕೊಂಡಿದ್ದು, ಅವರ ಪೊಟೋಗಳನ್ನು ಡಿಲೀಟ್ ಮಾಡಿಕೊಂಡಿದ್ದು ಎಲ್ಲವೂ ಅವರ ನಡುವೆ ವಿಬೇದಗಳು ಸೃಷ್ಟಿಯಾಗಿದೆ ಎಂಬುದಕ್ಕೆ ಕಾರಣ ಎಂದು ಅನೇಕರು ಅಭಿಪ್ರಾಯ ಪಡುತಿದ್ದಾರೆ. ಸುಮಾರು ದಿನಗಳಿಂದ ಅವರಿಬ್ಬರೂ ಜೊತೆಯಾಗಿ ಎಲ್ಲೂ ಸಹ ಕಾಣಿಸಿಕೊಂಡಿಲ್ಲ. ಇದೀಗ ಮತ್ತೊಂದು ಕಾರಣ ಅವರ ವಿಬೇದಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಲಾಗುತ್ತಿದೆ.

ನಿಹಾರಿಕಾ ಆಗಲಿ, ಚೈತನ್ಯ ಆಗಲಿ ಅಥವಾ ಅವರ ಕುಟುಂಬಗಳಾಗಲಿ ಈ ವಿಚ್ಚೇದನದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೂಮರ್‍ ಗಳು ಹರಿದಾಡುವುದು ಮಾತ್ರ ನಿಂತಿಲ್ಲ. ಇದೀಗ ಮತ್ತೊಂದು ಘಟನೆ ರೂಮರ್‍ ಹರಿದಾಡಲು ಕಾರಣವಾಗಿದೆ. ಇತ್ತಿಚಿಗೆ ಚೈತನ್ಯ ಹಾಗೂ ತನ್ನ ಕುಟುಂಬದೊಂದಿಗೆ ತಿರುಮಲಕ್ಕೆ ಹೋಗಿದ್ದಾರೆ. ಈ ವೇಳೆ ಮಿಡಿಯಾದವರ ಕಣ್ಣಿಗೆ ಚೈತನ್ಯ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಪೊಟೋಗಳನ್ನು ಸಹ ತೆಗೆದುಕೊಂಡಿದ್ದಾರೆ. ಆದರೆ ಅವರ ನಡುವೆ ನಿಹಾರಿಕಾ ಮಾತ್ರ ಕಾಣಿಸಿಕೊಂಡಿಲ್ಲ. ಈ ಕಾರಣದಿಂದ ನಿಹಾರಿಕಾ ಹಾಗೂ ಚೈತನ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂದು ಅನೇಕರು ನಂಬುತ್ತಿದ್ದಾರೆ.

ಇನ್ನೂ ನಿಹಾರಿಕಾ ಮತ್ತೆ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದಾರೆ. ನಿರ್ಮಾಣ ಸಂಸ್ಥೆಯೊಂದು ಪ್ರಾರಂಭಿಸಿ ಸಿನೆಮಾಗಳನ್ನು ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಇನ್ನೂ ಡೆಡ್ ಫಿಕ್ಸೆಲ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಿಹಾರಿಕಾ ನಟಿಸಿದ್ದು, ಈ ಸಿರೀಸ್ ಮೇ.19 ರಿಂದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.