ಚಿಕಿತ್ಸೆಗಾಗಿ ಅಮೇರಿಕಾಗೆ ಹಾರಿದ ಸಮಂತಾ, ಕೆಲವು ದಿನಗಳ ಕಾಲ ಅಮೇರಿಕಾದಲ್ಲಿ ಉಳಿಯಲಿದ್ದಾರೆ ಸಮಂತಾ…..!

Follow Us :

ಸ್ಟಾರ್‍ ನಟಿ ಸಮಂತಾ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ. ಸುಮಾರು ಹದಿಮೂರು ವರ್ಷಗಳಿಂದ ಆಕೆ ಸಿನಿರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸ್ಟಾರ್‍ ನಟರ ಜೊತೆಗೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆರೋಗ್ಯ ದೃಷ್ಟಿಯಿಂದ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದು, ಇದೀಗ ಚಿಕಿತ್ಸೆಗಾಗಿ ಅಮೇರಿಕಾಗೆ ಹಾರಿದ್ದಾರೆ. ಅಮೇರಿಕಾದಲ್ಲೇ ಆಕೆ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದುಕೊಳ್ಳಲು ಉಳಿಯಲಿದ್ದಾರಂತೆ. ಇದೀಗ ಆಕೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪೊಟೋಗಳು ವೈರಲ್ ಆಗಿದೆ.

ಕಳೆದ ಎರಡು ವರ್ಷಗಳಿಂದ ಸಮಂತಾ ಗೆ ಸಂಬಂಧಿಸಿದ ಪ್ರತಿಯೊಂದು ವಿಚಾರವೂ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆಕೆ ಸಿನೆಮಾಗಳಿಂದ ಮಾತ್ರವಲ್ಲದೇ ಹೆಚ್ಚಾಗಿ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾದರು. ಅಕ್ಕಿನೇನಿ ನಾಗಚೈತನ್ಯ ಜೊತೆಗೆ ವಿಚ್ಚೇದನ, ಬಳಿಕ ಸಿನೆಮಾಗಳು, ಬಳಿಕ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾದರು. ಈ ಎಲ್ಲಾ ಕಾರಣಗಳಿಂದ ಆಕೆ ಭಾರಿ ಸುದ್ದಿಯಾದರು. ಆಕೆಗೆ ಸಂಬಂಧಿಸಿದ ವಿಚಾರಗಳೂ ಸಹ ಕಡಿಮೆ ಸಮಯದಲ್ಲೇ ವೈರಲ್ ಆಗಿದ್ದವು. ಇದೀಗ ಸಮಂತಾ ಮತ್ತೆ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಯೋಗಾ, ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಚಿಕಿತ್ಸೆ ಪಡೆದುಕೊಳ್ಳಲು ಅಮೇರಿಕಾಗೆ ಹೋಗಿದ್ದಾರೆ.

ನಟಿ ಸಮಂತಾ ಮಯೋಸೈಟಿಸ್ ವ್ಯಾಧಿಗೆ ಗುರಿಯಾಗಿದ್ದರ ಬಗ್ಗೆ ತಿಳಿದೇ ಇದೆ. ಈ ವ್ಯಾದಿಯಿಂದ ಆಕೆ ಹೊರಬರಲು ತುಂಬಾನೆ ಪ್ರಯತ್ನಗಳನ್ನು ಮಾಡಿದ್ದರು. ಮಯೋಸೈಟೀಸ್ ವ್ಯಾಧಿಯಿಂದ ಕೊಂಚ ಗುಣಮುಖಳಾಗಿ ಸಿನೆಮಾಗಳಲ್ಲಿ ಮತ್ತೆ ಸಕ್ರೀಯರಾದರು. ಇದೀಗ ಸಂಪೂರ್ಣವಾಗಿ ವ್ಯಾಧಿಯಿಂದ ಹೊರಬರಲು ಆಕೆ ಸಿನೆಮಾಗಳಿಂದ ಒಂದು ವರ್ಷದ ಮಟ್ಟಿಗೆ ವಿರಾಮ ಪಡೆದುಕೊಂಡು ಅಮೇರಿಕಾಗೆ ತೆರಳಿದ್ದಾರೆ. ಈ ಹಿಂದೆ ಆಕೆ ಒಪ್ಪಿಕೊಂಡಿದ್ದ ಸಿಟಾಡೆಲ್ ವೆಬ್ ಸಿರೀಸ್ ಹಾಗೂ ಖುಷಿ ಸಿನೆಮಾಗಳ ಶೂಟಿಂಗ್ ಪೂರ್ಣಗೊಳಿಸಿ ಆಕೆ ಇದೀಗ ಅಮೇರಿಕಾಗೆ ಹಾರಿದ್ದಾರೆ. ಕಳೆದ ಶುಕ್ರವಾರ ಸಂಜೆ ಆಕೆ ಹೈದರಾಬಾದ್ ನಿಂದ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಇನ್ನೂ ಸಮಂತಾ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇನ್ನೂ ಸಮಂತಾ ಹಾಗೂ ವಿಜಯದೇವರಕೊಂಡ ಅಭಿನಯದ ಖುಷಿ ಸಿನೆಮಾ ಇದೇ ಸೆ.1 ರಂದು ತೆರೆ ಕಾಣಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಸಮಂತಾ ಕಾಣಿಸಿಕೊಳ್ಳದೇ ಇರುವ ಅವಕಾಶಗಳು ಹೆಚ್ಚಾಗಿದೆ. ಈ ಕಾರಣದಿಂದಲೇ ಆಕೆ ಇತ್ತೀಚಿಗೆ ಖುಷಿ ಸಿನೆಮಾ ತಂಡದಿಂದ ಏರ್ಪಡಿಸಿದ್ದ ಮ್ಯೂಜಿಕ್ ಈವೆಂಟ್ ನಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ರವರ ರೊಮ್ಯಾಂಟಿಕ್ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಜೊತೆಗೆ ಸಮಂತಾ ಸಹ ಪುಲ್ ಖುಷಿಯಾಗಿ ಕಾಣಿಸಿಕೊಂಡಿದ್ದರು.