ರಶ್ಮಿಗೆ ಕ್ರೇಜಿಯಾಗಿ ಉತ್ತರ ಕೊಟ್ಟ ಸುಧೀರ್, ನೀನು ನೆನಪಿನಲ್ಲಿ ಇದ್ದೀಯಾ ಅದಕ್ಕಾಗಿ ಇಲ್ಲಿಯವರೆಗೂ ಬದುಕಿದ್ದೇನೆ ಎಂದ ಸುಧೀರ್……!

Follow Us :

ಕಿರುತೆರೆಯಲ್ಲಿ ಸುಧೀರ್‍ ಹಾಗೂ ರಶ್ಮಿ ಜೋಡಿಗೆ ತುಂಬಾನೆ ಕ್ರೇಜ್ ಇದೆ. ಜಬರ್ದಸ್ತ್ ಶೋ ಮೂಲಕ ಈ ಜೋಡಿಯ ಹವಾ ಶುರುವಾಯಿತು. ಈ ಶೋ ನಲ್ಲಿ ಅವರ ಲವ್ ಟ್ರಾಕ್, ರೊಮ್ಯಾನ್ಸ್, ಕೆಮಿಸ್ಟ್ರಿ ಎಲ್ಲವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದರಲ್ಲೂ ಡಿ ರಿಯಾಲಿಟಿ ಶೋ ನಲ್ಲಿ ಈ ಜೋಡಿ ಮತಷ್ಟು ಸಂಚಲನ ಸೃಷ್ಟಿ ಮಾಡಿದ್ದರು. ಆದರೆ ಕಳೆದೊಂದು ವಾರದಿಂದ ಅವರಿಬ್ಬರೂ ದೂರವಾಗಿದ್ದರು. ಇದೀಗ ಮತ್ತೊಮ್ಮೆ ಅವರಿಬ್ಬರೂ ಕಾರ್ಯಕ್ರಮವೊಂದಕ್ಕಾಗಿ ಜೊತೆಯಾಗಿದ್ದು, ಇಬ್ಬರೂ ಮತ್ತೆ ವೇದಿಕೆಯ ಮೇಲೆ ಸದ್ದು ಮಾಡಿದ್ದಾರೆ.

ಕೆಲವು ವರ್ಷಗಳಿಂದ ನಟ ಸುಡಿಗಾಲಿ ಸುಧೀರ್‍ ಕಿರುತೆರೆಯಿಂದ ದೂರವಾಗಿದ್ದರು. 28 ವರ್ಷ ಈಟಿವಿ ಚಾನಲ್ ನ ಸೆಲಬ್ರೇಷನ್ ನಲ್ಲಿ ಸುಧೀರ್‍ ಎಂಟ್ರಿ ಕೊಟ್ಟಿದ್ದಾರೆ. ಈಟಿವಿ ಬಲಗಂ ಎಂಬ ಹೆಸರಿನಲ್ಲಿ ಸ್ಪೇಷಲ್ ಈವೆಂಟ್ ಆಯೋಜನೆ ಮಾಡಲಾಗಿತ್ತು. ಈ ಶೋ ನಲ್ಲಿ ಆಂಕರ್‍ ರಶ್ಮಿ ಜೊತೆಗೆ ಸುಧೀರ್‍ ಸದ್ದು ಮಾಡಿದ್ದಾರೆ. ಇಬ್ಬರೂ ಜೊತೆಗೂಡಿ ಸುಮಾರು ವರ್ಷಗಳ ಬಳಿಕ ವೇದಿಕೆಯ ಮೇಲೆ ಅಬ್ಬರಿಸಿದ್ದಾರೆ. ಇದೀಗ ಅವರಿಬ್ಬರೂ ಈ ವೇದಿಕೆಯಲ್ಲಿ ಮಾಡಿದಂತಹ ಕೆಲವೊಂದು ಸನ್ನಿವೇಶಗಳು ಸೋಷಿಯಲ್ ಮಿಡಿಯಾದಲ್ಲಿ ಹೈಲೈಟ್ ಆಗಿದೆ. ಈ ವೇಳೆ ಸುಧೀರ್‍ ಮೇಲೆ ರಶ್ಮಿ ಕೋಪಗೊಳ್ಳುತ್ತಾರೆ. ಆಕೆಯ ಕೋಪವನ್ನು ನೋಡಿದ ಸುಧೀರ್‍ ಏನು ಮೇಡಂ ತುಂಬಾ ಸೀರಿಯಸ್ ಆಗಿದ್ದೀರಾ ಎಂದು ಪ್ರಶ್ನೆ ಮಾಡುತ್ತಾರೆ. ಅಷ್ಟಕ್ಕೂ ನಾನು ನೆನಪಿದ್ದೀನಾ ಎಂದು ಕೋಪದಲ್ಲೇ ಸುಧೀರ್‍ ಗೆ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಸುಧೀರ್‍ ರಶ್ಮಿ ಹೃದಯ ಕದಲಿಸುವಂತಹ ಉತ್ತರ ನೀಡುತ್ತಾರೆ.

ರಶ್ಮಿ ಕೇಳಿದ ಪ್ರಶ್ನೆಗೆ ಸುಧೀರ್‍ ರಿಯಾಕ್ಟ್ ಆಗುತ್ತಾ, ನೀನು ನೆನಪಿನಲ್ಲಿ ಇದ್ದೀಯಾ ಆದ್ದರಿಂದಲೇ ಇನ್ನೂ ನಾನು ಬದುಕಿದ್ದೇನೆ ಎಂದು ಹೇಳಿದ್ದಾರೆ. ಬೆಟ್ಟದಷ್ಟು ಕೋಪದಲ್ಲಿದ್ದ ರಶ್ಮಿ ಕ್ಷಣದಲ್ಲೇ ಸುಧೀರ್‍ ಮಾತಿಗೆ ನೀರಾಗಿಬಿಟ್ಟರು. ಇದೀಗ ಈ ಸಂಬಂಧ ವಿಡಿಯೋ ಕ್ಲಿಪ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಬಳಿಕ ಸುಧೀರ್‍ ಹಾಗೂ ರಶ್ಮಿ ಕಾರ್ಯಕ್ರಮಕ್ಕೆ ಮತಷ್ಟು ಮೆರಗು ಕೊಟ್ಟರು. ಇನ್ನೂ ಅವರಿಬ್ಬರ ಪ್ರೀತಿಯ ಬಗ್ಗೆ ಗೆಟಪ್ ಶ್ರೀನು ಸಹ ಪಂಚ್ ಗಳನ್ನು ಹಾಕಿದ್ದಾರೆ. ಈ ಪ್ರೇಮ ಪಕ್ಷಿಗಳು ಗಾಳಿಯಲ್ಲೇ ಹಾರಾಡುತ್ತಿರುತ್ತಾ ಅಥವಾ ಗೂಡಿಗೆ ಸೇರುತ್ತದೆಯೇ ಎಂದು ಹೇಳಿದರೇ ಅದಕ್ಕೆ ಇಬ್ಬರೂ ನಾಚಿಕೊಳ್ಳುತ್ತಾರೆ. ಬಳಿಕ ಸುಧೀರ್‍ ಅದಕ್ಕೆ ನೀಡಿದ ಹೇಳಿಕೆಗೆ ರಶ್ಮಿ ಎಮೋಷನಲ್ ಆಗುತ್ತಾರೆ. ಹೈಪರ್‍ ಆದಿ ಸಹ ಕೆಲವೊಂದು ಮಾತುಗಳ ಮೂಲಕ ಸುಧೀರ್‍ ರಶ್ಮಿ ಮದುವೆಯ ಬಗ್ಗೆ ಪ್ರಸ್ತಾಪಿಸುತ್ತಾರೆ.

ಹೈಪರ್‍ ಆದಿ ನಿಮ್ಮಿಬ್ಬರ ಲವ್ ಸ್ಟೋರಿ ಸಿನೆಮಾ ತೆಗೆಯಬಹುದು ಎಂದು ಹೇಳಿದರೇ ಅದಕ್ಕೆ ರಶ್ಮಿ ಸಿನೆಮಾದ ಟೈಟಲ್ ಏನು ಎಂದು ಕೇಳುತ್ತಾರೆ. ನಡೆಯಲಾರದ ರಶ್ಮಿ, ಕೆಟ್ಟುಹೋಗದ ಸುಧೀರ್‍ ಎಂದು ಟೈಟಲ್ ಇಡುವುದಾಗಿ ಹೇಳುತ್ತಾನೆ ಆದಿ. ಈ ಡೈಲಾಗ್ ಗೆ ವೇದಿಕೆಯಲ್ಲಿದ್ದ ಎಲ್ಲರೂ ನಗಾಡುತ್ತಾರೆ. ಸದ್ಯ ಸುಧೀರ್‍ ಸ್ಪೇಷಲ್ ಈವೆಂಟ್ ಗಾಗಿ ಮಾತ್ರ ಬಂದರೇ ಅಥವಾ ಕಿರುತೆರೆಯಲ್ಲಿ ಮುಂದುವರೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಸುಮಾರು ದಿನಗಳ ಬಳಿಕ ರಶ್ಮಿ ಹಾಗೂ ಸುಧೀರ್‍ ರವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ.