ಸರಿಯಾದ ಜೋಡಿಗಾಗಿ ಹುಡುಕಾಟ ಎಂದು ಸಂಚಲನಾತ್ಮಕ ಪೋಸ್ಟ್ ಮಾಡಿದ ಸಮಂತಾ, ಇಲ್ಲೊಂದು ಟ್ವಿಸ್ಟ್….!

ಸ್ಟಾರ್‍ ನಟಿ ಸಮಂತಾ ಕಳೆದ ಎರಡು ವರ್ಷಗಳು ವೈಯುಕ್ತಿಕ ಜೀವನ ತುಂಬಾನೆ ದುಃಖದಲ್ಲಿತ್ತು ಎನ್ನಬಹುದಾಗಿದೆ. ಸಮಂತಾ ಹಾಗೂ ನಾಗಚೈತನ್ಯ ಜೊತೆಗೆ ವಿಚ್ಚೇದನದ ಪಡೆದ ಬಳಿಕ ಸಮಂತಾ ಡಿಪ್ರೆಷನ್ ಗೆ ಹೋಗಿದ್ದು, ಮಾನಸಿಕ ಹಿಂಸೆಯನ್ನು ಅನುಭವಿಸಿದ್ದರು.…

ಸ್ಟಾರ್‍ ನಟಿ ಸಮಂತಾ ಕಳೆದ ಎರಡು ವರ್ಷಗಳು ವೈಯುಕ್ತಿಕ ಜೀವನ ತುಂಬಾನೆ ದುಃಖದಲ್ಲಿತ್ತು ಎನ್ನಬಹುದಾಗಿದೆ. ಸಮಂತಾ ಹಾಗೂ ನಾಗಚೈತನ್ಯ ಜೊತೆಗೆ ವಿಚ್ಚೇದನದ ಪಡೆದ ಬಳಿಕ ಸಮಂತಾ ಡಿಪ್ರೆಷನ್ ಗೆ ಹೋಗಿದ್ದು, ಮಾನಸಿಕ ಹಿಂಸೆಯನ್ನು ಅನುಭವಿಸಿದ್ದರು. ಅದರಿಂದ ಹೊರಬಂದು ಹೊಸ ಜೀವನ ಸಹ ಶುರು ಮಾಡಿದರು. ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾದರು. ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಸಂಚಲನಾತ್ಮಕ ಪೋಸ್ಟ್ ಗಳನ್ನು ಮಾಡುತ್ತಾ ಸುದ್ದಿಯಲ್ಲಿರುತ್ತಾರೆ.

ನಟಿ ಸಮಂತಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು, ತನ್ನ ವೈಯುಕ್ತಿಕ ಜೀವನದ ಜೊತೆಗೆ ಸಿನೆಮಾಗಳ ಅಪ್ಡೇಟ್ ಗಳನ್ನು ಸಹ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಮಾಡಿದ ಲೇಟೆಸ್ಟ್ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಆಕೆ ಸರಿಯಾದ ಪಾರ್ಟನರ್‍ ಗಾಗಿ ಹುಡುಕುತ್ತಿದ್ದಾಗಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸಿಂಗಲ್ ಆಗಿರುವ ಸಮಂತಾ ಈ ಪೋಸ್ಟ್ ಹಂಚಿಕೊಂಡ ಕೂಡಲೇ ಸಖತ್ ವೈರಲ್ ಆಗುತ್ತಿದೆ. ಇನ್ನೂ ಸಮಂತಾ ಈ ಪೋಸ್ಟ್ ಹಾಕಿದ್ದು ತನಗಾಗಿ ಅಲ್ಲ ಬದಲಿಗೆ ಆಕೆಯ ಸ್ನೇಹಿತನಿಗಾಗಿ. ಸಮಂತಾ ಸ್ನೇಹಿತ ಡಾಕ್ಟರ್‍ ಜೇವೆಲ್ ಗಮಾಡಿಯಾ ಎಂಬಾತನಿಗೆ ಒಳ್ಳೆಯ ಜೋಡಿ ಬೇಕು ಎಂದು ಆತನ ಪೊಟೋ ಶೇರ್‍ ಮಾಡಿದ್ದಾರೆ. ಜೊತೆಗೆ ಆತನ ಗುಣಗಳ ಬಗ್ಗೆ ಸಹ ತಿಳಿಸಿದ್ದಾರೆ.

ಡಾಕ್ಟರ್‍ ಜೇವೆಲ್ ತುಂಬಾ ಬುದ್ದಿವಂತ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಸಮಂತಾ ರವರ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಸಮಂತಾ ಸಂಬಂಧಗಳನ್ನು ಹುಡುಕುವ ಕೆಲಸ ಸಹ ಮಾಡುತ್ತಿದ್ದಾರೆಯೇ ಎಂದು ಅನೇಕರು ಫನ್ನಿಯಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇನ್ನೂ ಡಾಕ್ಟರ್‍ ಜೇವೆಲ್ ಗಮಾಡಿಯಾ ಸೆಲೆಬ್ರೆಟಿಗಳ ವೈದ್ಯರಾಗಿದ್ದಾರೆ. ಕತ್ರಿನಾ ಕೈಫ್ ಸೇರಿದಂತೆ ಅನೇಕ ಸ್ಟಾರ್‍ ಗಳು ಆತನ ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಾರಂತೆ. ಸಮಂತಾ ರವರಿಗೂ ಸಹ ಇದೇ ವೈದ್ಯ ಚಿಕಿತ್ಸೆ ನೀಡಿದ್ದರು ಎಂದು ಹೇಳಲಾಗುತ್ತಿದೆ. ಅದು ಏನೆ ಇರಲಿ ಸಮಂತಾ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಏನೆ ಹಂಚಿಕೊಂಡರು ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಇದೀಗ ಈ ಪೋಸ್ಟ್ ಸಹ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸಮಂತಾ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿರೀಸ್ ನ ಇಂಗ್ಲೀಷ್ ವರ್ಷನ್ ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟಿಸಿದ ಪಾತ್ರವನ್ನು ಇಂಡಿಯನ್ ವರ್ಷನ್ ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಇದರ ಜತೆಗೆ ಆಕೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದು, ಈ ಸಿನೆಮಾ ಸೆ.1 ರಂದು ತೆರೆಗೆ ಬರಲಿದೆ.