ವರ್ಷ ತುಂಬಾನೆ ಹೋರಾಟ ಮಾಡಿದ್ದೇನೆ, ಮಯೋಸೈಟೀಸ್ ವ್ಯಾಧಿ ಬಂದು ಒಂದು ವರ್ಷ ಕಳೆದ ಸಮಂತಾ ಪೋಸ್ಟ್ ವೈರಲ್….!

Follow Us :

ಸೌತ್ ಸಿನರಿಂಗದ ಸ್ಟಾರ್‍ ನಟಿ ಸಮಂತಾ ಕಳೆದ ವರ್ಷ ತುಂಬಾನೆ ನೋವುಗಳನ್ನು ಅನುಭವಿಸಿದ್ದರು. ಕಳೆದ ವರ್ಷ ಆಕೆ ಮಯೋಸೈಟೀಸ್ ಎಂಬ ಮಾರಣಾಂತಿಕ ವ್ಯಾಧಿಗೆ ಗುರಿಯಾಗಿದ್ದು ನಮಗೆ ತಿಳಿದೇ ಇದೆ. ಇದೀಗ ಆಕೆ ಮಯೋಸೈಟೀಸ್ ವ್ಯಾಧಿಯಿಂದ ಹೊರಬಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಮಯೋಸೈಟೀಸ್ ವ್ಯಾದಿಗೆ ತುತ್ತಾಗಿ ಒಂದು ವರ್ಷ ಕಳೆದಿದ್ದು, ಆಕೆ ಅದನ್ನು ನೆನಪಿಸಿಕೊಂಡು ಎಮೋಷನಲ್ ಪೋಸ್ಟ್ ಒಂದನ್ನು ಮಾಡಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಮಯೋಸೈಟಿಸ್ ವಿರುದ್ದ ತಿಂಗಳುಗಳ ಕಾಲ ಹೋರಾಟ ನಡೆಸಿದ ಇದೀಗ ಮೊದಲಿನ ಸ್ಥಿತಿಗೆ ತಲುಪಿದ್ದಾರೆ. ರೆಗ್ಯುಲರ್‍ ಆಗಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ, ಮಾನಸಿಕ ಹಾಗೂ ಶಾರೀರಿಕವಾಗಿಯೂ ದೃಢವಾಗಿದ್ದಾರೆ. ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆಯ ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ಅದನ್ನು ಆಕೆ ನೆನಪಿಸಿಕೊಳ್ಳುವುದರ ಜೊತೆಗೆ ಅದರಿಂದ ಆಕೆ ಹೊರಬಂದ ಪರಿಯನ್ನು ಸಹ ಹೊರಹಾಕಿದ್ದಾರೆ. ಆಕೆ ಮಯೋಸೈಟೀಸ್ ನಿಂದ ಹೊರಬರಲು ಪಟ್ಟಂತಹ ಕಷ್ಟಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಕಳೆದ ವರ್ಷ ಸಮಂತಾ ಜೂನ್ 15 ರಂದು ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿದ್ದರಂತೆ. ಈ ವಿಚಾರವನ್ನು ಆಕೆ ನೆನಪಿಸಿಕೊಂಡು ಎಮೋಷನಲ್ ಪೋಸ್ಟ್ ಹಾಕಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಈ ಬಗ್ಗೆ ಪ್ರಸ್ತಾಪಿಸುತ್ತಾ ಮಯೋಸೈಟೀಸ್ ವ್ಯಾಧಿ ತಗುಲಿದೆ ಎಂಬುದು ನಿರ್ಧಾರವಾಗಿ ಒಂದು ವರ್ಷ ಪೂರ್ಣಗೊಂಡಿದೆ. ತುಂಬಾ ಕಷ್ಟಪಟ್ಟು ನಾನು ಸಾಮಾನ್ಯ ಸ್ಥಿತಿಗೆ ಬಂದಿದ್ದೇನೆ. ಈ ವರ್ಷ ನನ್ನ ಶರೀರ ತುಂಬಾನೆ ಹೋರಾಟಗಳನ್ನು ಮಾಡಿದೆ. ಬಲವಂತವಾಗಿ ಔಷಧಗಳನ್ನು ತೆಗೆದುಕೊಳ್ಳುತ್ತಾ ಆ ವ್ಯಾಧಿಯೊಂದಿಗೆ ಹೋರಾಟ ಮಾಡಿದ್ದೇನೆ. ಆ ವ್ಯಾಧಿಯಿಂದ ಹೊರಬರಲು ನಾನು ತುಂಬಾನೆ ಕಷ್ಟಪಟ್ಟೆ ಅನೇಕರು ನಾನು ಗುಣಮುಖರಾಗಲಿ ಎಂದು ದೇವರನ್ನು ಪ್ರಾರ್ಥಿಸಿದ್ದಾರೆ ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಇನ್ನೂ ಸಮಂತಾ ಹಂಚಿಕೊಂಡ ಈ ಪೊಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಸಮಂತಾ ಮಯೋಸೈಟೀಸ್ ನಿಂದ ಹೊರಬಂದ ಬಳಿಕ ಕಠಿಣ ಪರಿಶ್ರಮದೊಂದಿಗೆ ಬಲಿಷ್ಟವಾಗಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲಿ ಹಾಗೂ ಹಿಂದಿಯಲ್ಲಿ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಚೆನೈ ಸ್ಟೋರಿ ಎಂಬ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.