Film News

ಗೋಲ್ಡ್ ಕಲರ್ ಸೀರೆಯಲ್ಲಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡ ಸಮಂತಾ, ಸ್ಟನ್ನಿಂಗ್ ಪೋಸ್ ಕೊಟ್ಟ ಸ್ಟಾರ್ ನಟಿ….!

ಸ್ಟಾರ್‍ ನಟಿ ಸಮಂತಾ ಮಯೋಸೈಟೀಸ್ ವ್ಯಾದಿಯಿಂದ ಸಂಪೂರ್ಣವಾಗಿ ಹೊರಬರಲು ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸಂಪೂರ್ಣವಾಗಿ ಆರೋಗ್ಯವನ್ನು ಪಡೆದುಕೊಳ್ಳಲು ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಸಿನೆಮಾಗಳಿಂದ ದೂರವುಳಿದರೂ ಸಹ ಆಕೆ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಟಚ್ ನಲ್ಲೆ ಇದ್ದಾರೆ. ಪೊಟೊಶೂಟ್ಸ್, ವಿಡಿಯೋ ಹಾಗೂ ಇಂಟ್ರಸ್ಟಿಂಗ್ ಪೋಸ್ಟ್ ಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಇದೀಗ ಆಕೆ ಗೋಲ್ಡ್ ಕಲರ್‍ ಸೀರೆಯಲ್ಲಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ತೆರೆಕಂಡ ಖುಷಿ ಎಂಬ ಸಿನೆಮಾದ ಮೂಲಕ ಸಮಂತಾ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಕೆ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡು ವಿದೇಶಗಳಿಗೆ ಹೋಗಿದ್ದರು. ಇದೀಗ ಆಕೆ ಭಾರತಕ್ಕೆ ಮರಳಿದ್ದಾರೆ. ಇತ್ತೀಚಿಗಷ್ಟೆ ಆಕೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಆಕೆ ತುಂಬಾ ಆಕ್ಟೀವ್ ಆಗಿ, ಎನರ್ಜಿಟಿಕ್ ಆಗಿಯೂ ಸಹ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ ಎನ್ನಲಾಗಿದೆ. ಸಿನೆಮಾಗಳಿಗೆ ಬ್ರೇಕ್ ಕೊಟ್ಟ ಸಮಂತಾ ಕೆಲವೊಂದು ಬ್ರಾಂಡ್ ಗಳನ್ನು ಸಹ ಪ್ರಮೋಟ್ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ತನ್ನ ಕೋ ಫೌಂಡರ್‍ ಫ್ಯಾಷನ್ ಕಂಪನಿ ಸಾಕಿ(Saaki) ಗಾಗಿ ಸೀರೆಯನ್ನು ಧರಿಸಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ.

ಗೋಲ್ಡ್ ಕಲರ್‍ ಡಿಸೈನರ್‍ ಸೀರೆಯಲ್ಲಿ ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಮಿಂಚಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾ ಹಾಟ್ ಅಂಡ್ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದು, ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಆಕೆಯ ಲುಕ್ಸ್ ಗೆ ಫಿದಾ ಆಗಿ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನಟಿ ಸಮಂತಾ ಸಿನೆಮಾಗಳಿಂದ ದೂರವುಳಿದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತನ್ನ ವೈಯುಕ್ತಿಕ ವಿಚಾರಗಳನ್ನೂ ಸಹ ನೇರವಾಗಿಯೇ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ಸಮಂತಾ ಕಳೆದ ವರ್ಷ ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿದ್ದ ವಿಚಾರ ತಿಳಿದೇ ಇದೆ. ಮಯೋಸೈಟಿಸ್ ವ್ಯಾಧಿಯಿಂದ ಕೊಂಚ ಚೇತರಿಸಿಕೊಂಡು ಆಕೆ ಯಶೋಧ ಹಾಗೂ ಶಾಕುಂತಲಂ ಸಿನೆಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಯಶೋಧ ಸಿನೆಮಾ ಕೋಂಚ ಒಳ್ಳೆಯ ಪ್ರದರ್ಶನ ಕಂಡರೂ ಶಾಕುಂತಲಂ ಸಿನೆಮಾ ಮಾತ್ರ ಆಲ್ ಟೈಂ ಡಿಜಾಸ್ಟರ್‍ ಆಗಿತ್ತು.  ಕೊನೆಯದಾಗಿ ಆಕೆ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಜೊತೆಗೆ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸಿದ್ದು, ಇದು ಸಹ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ.

Most Popular

To Top