Film News

ನ.1 ರಂದು ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮ, ವೈರಲ್ ಆದ ವರುಣ್-ಲಾವಣ್ಯ ಇನ್ವಿಟೇಷನ್…..!

ಸುಮಾರು ವರ್ಷಗಳಿಂದ ಸಿಕ್ರೇಟ್ ಆಗಿ ಪ್ರೇಮ ಪಯಣ ಸಾಗಿಸುತ್ತಿದ್ದ ಮೆಗಾ ಕುಟುಂಬದ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದ್ದು, ಇದೀಗ ನ.1 ರಂದು ಈ ಜೋಡಿಯ ಮದುವೆ ಅದ್ದೂರಿಯಾಗಿ ಇಟಲಿಯಲ್ಲಿ ನೆರವೇರಲಿದೆ ಎನ್ನಲಾಗಿದೆ. ಇದೀಗ ಈ ಜೋಡಿಯ ‌ಇನ್ವಿಟೇಷನ್ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಕೇಳಿಬಂದಂತೆ ವರುಣ್ ಹಾಗೂ ಲಾವಣ್ಯ ಮದುವೆ ಇಟಲಿಯಲ್ಲೇ ನಡೆಯಲಿದೆ. ಈಗಾಗಲೇ ಮದುವೆಯ ಸಂಭ್ರಮ ಸಹ ಮೆಗಾ ಫ್ಯಾಮಿಲಿಯಲ್ಲಿ ಶುರುವಾಗಿದೆ.

ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ಲಾವಣ್ಯ ಮಿಸ್ಟರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೂಟಿಂಗ್ ಇಟಲಿಯಲ್ಲೇ ನಡೆದಿದೆ. ಅವರಿಬ್ಬರೂ ಮೊದಲು ಭೇಟಿಯಾಗಿದ್ದು ಇಟಲಿಯಲ್ಲೇ ಆದ ಕಾರಣ ಸೆಂಟಿಮೆಂಟ್ ಆಗಿ ತಮ್ಮ ಮದುವೆಯನ್ನು ಇಟಲಿಯಲ್ಲೇ ಮಾಡಲು ತೀರ್ಮಾನಿಸಲಾಗಿದೆ. ಮದುವೆಗೆ ಸಂಬಂಧಿಸಿದ ಕೆಲಸಗಳೂ ಸಹ ಭರ್ಜರಿಯಾಗಿಯೇ ನಡೆಯತ್ತಿದೆ. ಇಟಲಿಯಲ್ಲಿ ಮದುವೆಯಾದ ಕಾರಣ, ಮೆಗಾ ಕುಟುಂಬ, ಲಾವಣ್ಯ ಕುಟುಂಬದವರು ಹಾಗೂ ಕೆಲವರು ಬಂಧುಮಿತ್ರರು ಮಾತ್ರ ಮದುವೆಯಲ್ಲಿ ಹಾಜರಾಗಲಿದ್ದಾರೆ ಎನ್ನಲಾಗಿದೆ. ಇನ್ನೂ ಹೈದರಾಬಾದ್ ನಲ್ಲಿ ಗ್ರಾಂಡ್ ಆಗಿ ರಿಸೆಪ್ಷನ್ ಮಾಡಲು ಪ್ಲಾನ್ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಇಟಲಿಯಲ್ಲಿ ನ.1 ರಂದು ಮದುವೆ ನಡೆದರೇ, ನ.5 ರಂದು ಹೈದರಾಬಾದ್ ನ ಎನ್ ಕನ್ವೇಷನ್ ಸೆಂಟರ್‍ ನಲ್ಲಿ ರಿಸೆಪ್ಷನ್ ಮಾಡಲು ಪ್ಲಾನ್ ಮಾಡಿದ್ದಾರೆ. ರಿಸೆಪ್ಷನ್ ಗೆ ಸಂಬಂಧಿಸಿದಂತಹ ‌ಇನ್ವಿಟೇಷನ್ ಅತಿಥಿಗಳಿಗೆ ಹಂಚುವ ಕೆಲಸ ಸಹ ಶುರುವಾಗಿದೆ. ಇದೀಗ ಲಗ್ನಪತ್ರಿಕೆ ಗೆ ಸಂಬಂಧಿಸಿದ ಪೊಟೋಗಳು ವಿಡಿಯೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ‌ರಿಸೆಪ್ಷನ್ ‌ಇನ್ವಿಟೇಷನ್ ತುಂಬಾ ಆಕರ್ಷಣೆಯಾಗಿದೆ. ‌ಇನ್ವಿಟೇಷನ್ ಮುಂಭಾಗ V, L ಎಂಬ ಅಕ್ಷರಗಳೊಂದಿಗೆ ಡಿಸೈನ್ ಮಾಡಿದ್ದಾರೆ. ಒಳ ಭಾಗದಲ್ಲಿ ವರುಣ್ ತೇಜ್ ಅಜ್ಜಿ ಅಂಜನಾದೇವಿ, ತಾತ ಕೊಣಿದೆಲಾ ವೆಂಕಟರಾವ್ ಆರ್ಶೀವಾದದೊಂದಿಗೆ ಎಂದು ಬರೆಯಲಾಗಿದೆ. ಅದಾದ ಬಳಿಕ ಬೆಸ್ಟ್ ಕಾಂಪ್ಲಿಮೆಂಟ್ಸ್ ಫ್ರಂ ಎಂದು ಚಿರಂಜಿವಿ, ಪವನ್ ಕಲ್ಯಾಣ್ ಹಾಗೂ ರಾಮ್ ಚರಣ್ ಹೆಸರುಗಳನ್ನು ಹೈಲೈಟ್ ಮಾಡಿದ್ದಾರೆ.

ಅಷ್ಟೇಅಲ್ಲದೇ ರಿಸೆಪ್ಷನ್ ‌ಇನ್ವಿಟೇಷನ್ ನಲ್ಲಿ ಅತಿಥಿಗಳಿಗೆ ಅವಶ್ಯಕವಾಗಿ ಬೇಕಾಗಿದ್ದ ಕಾರ್‍ ಪಾಸ್ ಗಳನ್ನು ಸಹ ನೀಡಲಾಗಿದೆ. ಈಗಾಗಲೇ ಮದುವೆಯ ಸಂಭ್ರಮ ಶುರುವಾಗಿದ್ದು, ಬ್ಯಾಚಿಲರ್‍ ಪಾರ್ಟಿಗಳು ಹಾಗೂ ಇತರೆ ಸಂಭ್ರಮಗಳೂ ಸಹ ಭರ್ಜರಿಯಾಗಿ ನಡೆಯುತ್ತಿವೆ. ಬಾಲಿವುಡ್ ಸ್ಟಾರ್‍ ಮನಿಷ್ ಮೆಲ್ಹೋತ್ರಾ ಸ್ಟೈಲಿಂಗ್ ಮಾಡಲಿದ್ದಾರೆ ಎನ್ನಲಾಗಿದೆ.

Most Popular

To Top