ಕರ್ಮ ಫಲ ನಮ್ಮ ಕೈಯಲ್ಲಿರುವುದಿಲ್ಲ, ಶಾಕುಂತಲಂ ಡಿಜಾಸ್ಟರ್ ಹಿನ್ನೆಲೆ ಸಮಂತಾ ಸಂಚಲನಾತ್ಮಕ ಪೋಸ್ಟ್ ವೈರಲ್……!

Follow Us :

ಸೌತ್ ಸ್ಟಾರ್‍ ನಟಿ ಸಮಂತಾ ಅಭಿನಯದ ಶಾಕುಂತಲಂ ಸಿನೆಮಾ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿತ್ತು. ಪ್ಯಾನ್ ಇಂಡಿಯಾ ಸಿನೆಮಾ ಆದ ಶಾಕುಂತಲಂ  ಕಳೆದ ಏ.14 ರಂದು ಬಿಡುಗಡೆಯಾಗಿತ್ತು. ಭಾರಿ ನಿರೀಕ್ಷೆಯೊಂದಿಗೆ ಈ ಸಿನೆಮಾ ಬಿಡುಗಡೆಯಾಗಿದ್ದು, ಸಮಂತಾ ಸಿನೆಮಾದ ಮೇಲೆ ಭಾರಿ ಆಸೆಗಳನ್ನು ಇಟ್ಟುಕೊಂಡಿದ್ದರು. ಈ ಸಿನೆಮಾ ಲೇಡಿ ಓರಿಯೆಂಟೆಡ್ ಸಿನೆಮಾ ಆಗಿದೆ. ಈ ಸಿನೆಮಾದ ಬಗ್ಗೆ ಈಗಾಗಲೇ ಅನೇಕ ವಿಮರ್ಶೆಗಳು ಬರುತ್ತಿವೆ. ಶಾಕುಂತಲಂ ಸಿನೆಮಾ ಸೀರಿಯಲ್ ನಂತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಪೌರಾಣಿಕ ಕಥೆಯನ್ನು ಆಧರಿಸಿದ ಶಾಕುಂತಲಂ ಸಿನೆಮಾ ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದಿದೆ. ಇನ್ನೂ ಈ ಸಿನೆಮಾ ಸಕ್ಸಸ್ ಆಗುತ್ತೆ ಎಂಬ ನಂಬಿಕೆ ಚಿತ್ರತಂಡಕ್ಕೆ ಸಹ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಹೈಪ್ ಕ್ರಿಯೇಟ್ ಮಾಡಿ ಕೊಂಚ ಒಪೆನಿಂಗ್ ಸಕ್ಸಸ್ ಆದರೂ ಕಂಡುಕೊಳ್ಳಬೇಕೆಂದು ಭಾರಿ ಪ್ರಯತ್ನಗಳನ್ನು ಸಹ ನಡೆಸಿದರು. ಸಮಂತಾ ರವರ ಸಿಂಪತಿ ಯನ್ನು ಸಹ ವರ್ಕೌಟ್ ಮಾಡುವ ನಿಟ್ಟಿನಲ್ಲಿ ಆಕೆಯೊಂದಿಗೆ ಭಾರಿ ಪ್ರಚಾರವನ್ನು ಸಹ ನಡೆಸಲಾಗಿತ್ತು. ಇನ್ನೂ ಸಿನೆಮಾ ಚೆನ್ನಾಗಿಲ್ಲವಾದರೇ ಸಿಂಪತಿಗಳು, ಕಣ್ಣಿರುಗಳು ಏನು ನಡೆಯುವುದಿಲ್ಲ. ಸೂಪರ್‍ ಸ್ಟಾರ್‍ ಸಿನೆಮಾ ಆದರೂ ಸರಿ, ಸಾಮಾನ್ಯ ನಟರ ಸಿನೆಮಾ ಆದರೂ ಸರಿ ಪ್ರೇಕ್ಷಕರು ಆದರಿಸುವುದಿಲ್ಲ. ಇದೀಗ ಇದು ಶಾಕುಂತಲಂ ಸಿನೆಮಾದ ಮೂಲಕ ಪ್ರೂವ್ ಆಗಿದೆ ಎನ್ನಬಹುದಾಗಿದೆ.

ಇನ್ನೂ ಶಾಕುಂತಲಂ ಸಿನೆಮಾ ಒಳ್ಳೆಯ ಸೀರಿಯಲ್ ನಂತೆ ಸಾಗಿದೆ ಎಂಬ ವಿಮರ್ಶೆಗಳು, ಔಟ್ ಡೇಟೆಡ್ ಸ್ಕ್ರೀನ್ ಪ್ಲೇ. ಕಾರ್ಟೂನ್ ಮಾದರಿಯಲ್ಲಿ ಗ್ರಾಫಿಕ್ಸ್ ಮೂಲಕ ಒಳ್ಳೆಯ ಸೀರಿಯಲ್ ಮಾದರಿಯಲ್ಲಿ ಸಿನೆಮಾ ತೆರೆಗೆ ತರಲಾಗಿದೆ. ಮೊದಲನೇ ಶೋನೆ ಶಾಕುಂತಲಂ ಸಿನೆಮಾಗೆ ನೆಗೆಟೀವ್ ಟಾಕ್ ಬಂದಿದೆ. ಮೂಲಗಳ ಪ್ರಕಾರ ಪೋಸ್ಟರ್‍ ಗಳು ಹಾಗೂ ಪ್ರಮೋಷನ್ ಖರ್ಚುಗಳೂ ಸಹ ಬರುವಂತಹ ಸೂಚನೆ ಇಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ಸಮಂತಾ ಸಹ ತುಂಬಾ ವಿಮರ್ಶೆಗಳಿಗೆ ಗುರಿಯಾಗಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಸಮಂತಾ ನಟನೆ ಹಾಗೂ ಡಬ್ಬಿಂಗ್ ಬಗ್ಗೆ ನೆಗೆಟೀವ್ ಕಾಮೆಂಟ್ಸ್ ಬರುತ್ತಿವೆ. ಇದೀಗ ಈ ಬಗ್ಗೆ ಸಮಂತಾ ರಿಯಾಕ್ಟ್ ಆಗಿದ್ದಾರೆ.

ಮಹಾಭಾರತದ ಶ್ಲೋಕವೊಂದನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಸಮಂತಾ. ಪ್ರಯತ್ನ ಮಾಡುವುದು ಮಾತ್ರ ನಮ್ಮ ಕೈಯಲ್ಲಿರುತ್ತದೆ. ಅದರ ಫಲಿತಾಂಶ ಮಾತ್ರ ನಮ್ಮ ಕೈಯಲ್ಲಿರುವುದಿಲ್ಲ. ಫಲಿತಾಂಶಗಳಿಗೆ ಭಯಪಟ್ಟು ನಮ್ಮ ಪ್ರಯತ್ನ ಮಾಡುವುದನ್ನು ಬಿಡಬಾರದು. ಏನಾದರೂ ಮುಂದೆ ಸಾಗಬೇಕು ಎಂದು ಶ್ಲೋಕದ ಮೂಲಕ ತಿಳಿಸಿದ್ದಾರೆ. ಒಂದು ಪ್ರಯತ್ನವಾಗಿ ಶಾಕುಂತಲಂ ಸಿನೆಮಾ ಮಾಡಿದ್ದೇವೆ. ಅದರ ಫಲಿತಾಂಶ ನೆಗೇಟೀವ್ ಆಗಿ ಬಂತು. ಅದೆಲ್ಲಾ ಕರ್ಮದ ಫಲವಾಗಿದೆ. ನಮ್ಮ ಕೈಯಲ್ಲಿ ಏನು ಇರುವುದಿಲ್ಲ. ಸಿನೆಮಾ ಸೋತಿದೆ ಎಂಬ ಕಾರಣದಿಂದ ಸಿನೆಮಾಗಳನ್ನು ಮಾಡದೇ ಇರಲು ಸಾಧ್ಯವೆ ಎಂಬ ಅರ್ಥದಲ್ಲಿ ಸಮಂತಾ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.