Film News

ಸೀರೆಯಲ್ಲಿ ಕಾಣಿಸಿಕೊಂಡ ನಿವೇದಿತಾ ನಾಗವಲ್ಲಿ ಎಂದು ಟ್ರೋಲ್ ಮಾಡಿದ ನೆಟ್ಟಿಗರು…!

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರವರನ್ನು ಸೋಷಿಯಲ್ ಮಿಡಿಯಾ ಸ್ಟಾರ್‍ ಎಂತಲೇ ಕರೆಯಬಹುದು. ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಈಕೆ ಸಾಲು ಸಾಲು ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಾ ಫೇಂ ಪಡೆದುಕೊಂಡಿದ್ದಾರೆ. ಈಕೆ ಕಿರುತೆರೆಗಳಲ್ಲಿ ಪ್ಯಾಪುಲರ್‍ ಆಗಿದ್ದಕ್ಕಿಂತ, ಸೋಷಿಯಲ್ ಮಿಡಿಯಾ ಮೂಲಕವೇ ತುಂಬಾ ಪಾಪ್ಯುಲರ್‍ ಆದ ನಟಿಯಾಗಿದ್ದಾರೆ. ಸದಾ ವಿವಿಧ ರೀತಿಯ ಪೋಸ್ಟ್ ಗಳ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋ ಕಾರಣದಿಂದ ಟ್ರೋಲರ್‍ ಗಳಿಗೆ ಆಹಾರವಾಗಿದ್ದಾರೆ.

ನಟಿ ನಿವೇದಿತಾ ಗೌಡ ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದುಕೊಂಡು ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ನಟಿ ನಿವೇದಿತಾ ಗೌಡ ಸದಾ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಆಕೆ ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಆಕೆ ಮತಷ್ಟು ಫೇಮಸ್ ಆದರು. ನಿವೇದಿತಾ ಗಾಯಕ ಚಂದನ್ ಶೆಟ್ಟಿಯವರನ್ನು ಮದುವೆಯಾದ ವಿಚಾರ ತಿಳಿದೇ ಇದೆ. ಇಬ್ಬರೂ ಸಹ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡುವ ಮೂಲಕ ರಂಜಿಸುತ್ತಿರುತ್ತಾರೆ. ಮದುವೆಯಾದ ಬಳಿಕವೂ ಸಹ ನಿವೇದಿತಾ ಕಿರುತೆರೆಯಲ್ಲಿ ಆಕ್ಟೀವ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಆಕ್ಟೀವ್ ಆಗಿರುತ್ತಾರೆ.

ಇದೀಗ ನಟಿ ನಿವೇದಿತಾ ಹಂಚಿಕೊಂಡ ಲೇಟೆಸ್ಟ್ ಪೊಟೋ ಕಾರಣದಿಂದ ಟ್ರೋಲರ್‍ ಗಳಿಗೆ ಆಹಾರವಾಗಿದ್ದಾರೆ. ರೆಡ್ ಕಲರ್‍ ಸೀರೆಯನ್ನು ಧರಿಸಿ ಸ್ಲೀವ್ ಲೆಸ್ ಬ್ಲೌಜ್ ನಲ್ಲಿ, ಆಭರಣಗಳನ್ನು ಧರಿಸಿ ಹಣೆಗೆ ದೊಡ್ಡದಾಗಿ ಕುಂಕುಮ ಸಹ ಇಟ್ಟಿದ್ದಾರೆ. ರೆಡ್ ಲಿಪ್ ಸ್ಟಿಕ್ ಸಹ ಹಚ್ಚಿಕೊಂಡಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪೊಟೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇನ್ನೂ ಆಕೆಯ ಪೊಟೋಗಳನ್ನು ಕಂಡ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರು ನಿವೇದಿತಾ ಪೊಟೋ ನೋಡಿ ರಾ ರಾ ನಾಗವಲ್ಲಿ ಎಂದು ಕಾಲೆಳೆದಿದ್ದಾರೆ. ಆ ಮೂಲಕ ಚಂದ್ರ ಮುಖಿ ಸಿನೆಮಾದಲ್ಲಿ ಕಾಣಿಸಿಕೊಳ್ಳುವ ನಾಗವಲ್ಲಿಗೆ ಆಕೆಯನ್ನು ಹೋಲಿಕೆ ಮಾಡಿದ್ದಾರೆ.

ಇನ್ನೂ ನಟಿ ನಿವೇದಿತಾ ಗೌಡ ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಪೊಟೋಗಳನ್ನು, ವಿಡಿಯೋಗಳನ್ನು, ಕೆಲವೊಂದು ಪ್ರಾಡಕ್ಟ್ ಗಳ ಪ್ರಮೋಷನ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಕೆಲವೊಮ್ಮೆ ಆಕೆ ಬ್ಯೂಟಿ ಟಿಪ್ಸ್ ಗಳನ್ನು ಸಹ ನೀಡುತ್ತಿರುತ್ತಾರೆ. ಇನ್ನೂ ಶೀಘ್ರದಲ್ಲೇ ಆಕೆ ತೆಲುಗು ಸಿನೆಮಾ ಒಂದರಲ್ಲಿ ಸಹ ನಟಿಸಲಿದ್ದಾರೆ. ಇದರ ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನಲ್ ಸಹ ಹೊಂದಿದ್ದು, ಅದರಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Most Popular

To Top