ಸ್ಟಾರ್ ನಟನ ಬಳಿ 25 ಕೋಟಿ ಸಾಲ ಪಡೆದ ಬಗ್ಗೆ ಸಮಂತಾ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್…..!

Follow Us :

ಸ್ಟಾರ್‍ ನಟಿ ಸಮಂತಾ ಸದ್ಯ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡು ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಸಮಂತಾ ತನ್ನ ಚಿಕಿತ್ಸೆಗಾಗಿ 25 ಕೋಟಿ ಹಣವನ್ನು ಸ್ಟಾರ್‍ ನಟರೊಬ್ಬರ ಬಳಿ ಸಾಲವಾಗಿ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಈ ಸುದ್ದಿ ಸಮಂತಾ ವರೆಗೂ ತಲುಪಿದ್ದು ಆಕೆ ಇದೀಗ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ.

ಕಳೆದ ವರ್ಷ ಸಮಂತಾ ಮಯೋಸೈಟಿಸ್ ಎಂಬ ಮಾರಣಾಂತಿಂಕ ವ್ಯಾದಿಗೆ ಗುರಿಯಾಗಿದ್ದ ವಿಚಾರ ತಿಳಿದೇ ಇದೆ. ಈ ವ್ಯಾಧಿಯ ಕಾರಣದಿಂದ ಆಕೆ ಸುಮಾರು ತಿಂಗಳುಗಳ ಕಾಲ ಅಜ್ಞಾತದಲ್ಲೇ ಇದ್ದರು. ಬಳಿಕ ಸಿನೆಮಾಗಳಲ್ಲಿ ಆಕ್ಟೀವ್ ಆದರು. ಇದೀಗ ಮತ್ತೆ ಆಕೆ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಗೆ ಒಂದು ವರ್ಷದ ಕಾಲ ಬ್ರೇಕ್ ನೀಡಿದ್ದಾರೆ. ಇದೀಗ ಸಮಂತಾ ವೇಕೇಷನ್ ನಲ್ಲಿದ್ದು ತನ್ನ ಲೈಪ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಸುಮಾರು ದಿನಗಳಿಂದ ಸಮಂತಾ ಮಯೋಸೈಟೀಸ್ ಚಿಕಿತ್ಸೆಗಾಗಿ ಸ್ಟಾರ್‍ ನಟರೊಬ್ಬರ ಬಳಿಕ 25 ಕೋಟಿ ಸಾಲ ಪಡೆದುಕೊಂಡಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಈ ಬಗ್ಗೆ ಸಮಂತಾ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ. ಈ ಬಗ್ಗೆ ಆಕೆ ತನ್ನ ಇನ್ಸ್ಟಾ ಖಾತೆಯ ಪೋಸ್ಟ್ ಮೂಲಕ ಕೌಂಟರ್‍ ಜೊತೆಗೆ ಫನ್ನಿ ಕಾಮೆಂಟ್ ಮಾಡಿದ್ದಾರೆ.

ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಸಮಂತಾ ಆ ಸುದ್ದಿಯನ್ನು ಕೇಳಿ ಶಾಕ್ ಆಗಿದ್ದಾರಂತೆ, ಯಾರೋ ನಿಮ್ಮೊಂದಿಗೆ ರಾಂಗ್ ಡೀಲ್ ಸೆಟ್ ಮಾಡಿಕೊಂಡಿದ್ದಾರೆ ಎಂದು ಫನ್ನಿ ಕಾಮೆಂಟ್ ಮಾಡಿದ್ದಾರೆ. ಮಯೋಸೈಟೀಸ್ ವ್ಯಾಧಿಯ ಚಿಕಿತ್ಸೆಗೆ 25 ಕೋಟಿನಾ? ಯಾರೋ ನಿಮಗೆ ತಪ್ಪಾಗಿ ಡೀಲ್ ಮಾಡಿಕೊಂಡಿದ್ದಾರೆ. ಆದರೆ ನಾನು ತುಂಬಾ ಕಡಿಮೆ ಖರ್ಚು ಮಾಡಿದ್ದಕ್ಕೆ ತುಂಬಾ ಸಂತೋಷ ಪಡುತ್ತಿದ್ದೇನೆ. ಮಯೋಸೈಟೀಸ್ ವ್ಯಾಧಿ ಇದೀಗ ಸಾವಿರಾರು ಮಂದಿ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಚಿಕಿತ್ಸೆಯ ಬಗ್ಗೆ ನಾವು ನಿಡುವ ವಿಚಾರದ ಬಗ್ಗೆ ಕೊಂಚ ಜಾಗ್ರತೆಯಿಂದ ಇರಿ ಎಂದು ಸಮಂತಾ ಹೇಳಿದ್ದಾರೆ. ನಾನು ಸಾಲ ಮಾಡುವ ಸ್ಥಿತಿಯಲ್ಲಿಲ್ಲ. ನನ್ನ ಆರೋಗ್ಯನಾನು ನೋಡುಕೊಳ್ಳುವ ಸಾಮರ್ಥ್ಯ ನನಗಿದೆ ಎಂದು ತನ್ನ ಬಗ್ಗೆ ಹರಿದಾಡಿದ ಸುಳ್ಳು ರೂಮರ್‍ ಗಳಿಗೆ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ.

ಇನ್ನೂ ಸಮಂತಾ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಈ ಕೌಂಟರ್‍ ಕೊಟ್ಟಿದ್ದಾರೆ. ಸಮಂತಾ ಕೊನೆಯದಾಗಿ ಶಾಕುಂತಲಂ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಆಲ್ ಟೈಂ ಡಿಜಾಸ್ಟರ್‍ ಆಗಿದೆ. ಇದೀಗ ಆಕೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಹಾಗೂ ವರುಣ್ ಧಾವನ್ ಜೊತೆಗೆ ಸಿಡಾಟೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದು ಶೀಘ್ರದಲ್ಲೆ ಬಿಡುಗಡೆಯಾಗಲಿದೆ.