ಹಂದಿ ಮಾಂಸ, ವೈನ್ ಕುಡಿಯುವುದು ಅಂದರೇ ನನಗೆ ತುಂಬಾ ಇಷ್ಟ ಎಂದ ರಶ್ಮಿಕಾ, ವೈರಲ್ ಆದ ಹಳೆಯ ಕಾಮೆಂಟ್ಸ್…..!

Follow Us :

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲೇ ಇರುತ್ತಾರೆ. ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್, ಫೇಂ ಪಡೆದುಕೊಂಡು ಬಹುಬೇಡಿಕೆ ನಟಿಯಾಗಿದ್ದಾರೆ. ತೆಲುಗು, ತಮಿಳು, ಹಿಂದಿ ಸಿನೆಮಾಗಳಲ್ಲಿ ನಟಿಸುತ್ತಾ ಪುಲ್ ಬ್ಯುಸಿಯಾಗಿದ್ದಾರೆ. ಆಕೆ ಕನ್ನಡ ಸಿನೆಮಾಗಳಿಂದ ಬೆಳೆದು ಕನ್ನಡ ಸಿನೆಮಾಗಳಿಂದ ದೂರವಾದ ಬಗ್ಗೆ ಸಹ ವಿಮರ್ಶೆಗಳು, ಟೀಕೆಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಆಕೆಗೆ ಸಂಬಂಧಿಸಿದ ಹಳೇಯ ಸಂದರ್ಶನದ ಹೇಳಿಕೆಗಳು ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿರಂಗದ ಮೂಲಕ ಭಾರಿ ಖ್ಯಾತಿ ಪಡೆದುಕೊಂಡರು ಮೊದಲನೇ ಸಿನೆಮಾದ ಮೂಲಕವೇ ಕ್ರೇಜ್ ಪಡೆದುಕೊಂಡ ರಶ್ಮಿಕಾ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಹೆಚ್ಚು ಸಂಭಾವನೆ ಪಡೆದುಕೊಂಡು ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಪ್ಯಾನ್ ಇಂಡಿಯಾ ಪುಷ್ಪಾ ಸಿನೆಮಾದ ಬಳಿಕ ಆಕೆ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಇನ್ನೂ ಬಾಲಿವುಡ್ ಅಂಗಳಕ್ಕೂ ಸಹ ಕಾಲಿಟ್ಟ ರಶ್ಮಿಕಾ ಮಂದಣ್ಣ ಮತಷ್ಟು ಖ್ಯಾತಿ ಪಡೆದುಕೊಂಡರು. ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ಆಕೆ ಮತಷ್ಟು ಹಾಟ್ ಅವತಾರ ತಾಳಿದ್ದಾರೆ ಎಂದೇ ಹೇಳಬಹುದು. ತುಂಬಾ ಬೋಲ್ಡ್ ಆಗಿರುವಂತಹ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ರಶ್ಮಿಕಾ ತುಂಬಾನೆ ಆಕ್ಟೀವ್ ಆಗಿದ್ದು, ಆಗಾಗ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಸಹ ನಡೆಸುತ್ತಿರುತ್ತಾರೆ.

ಇನ್ನೂ ಈ ಹಿಂದೆ ರಶ್ಮಿಕಾ ಮಂದಣ್ಣ ರವರ ಸಂದರ್ಶನದ ಕೆಲವೊಂದು ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ. ಆಕೆ ತಮ್ಮ ಆಹಾರ ಪದ್ದತಿಯ ಬಗ್ಗೆ ಮಾಡಿರುವಂತಹ ಕಾಮೆಂಟ್ ಗಳು ಮತ್ತೆ ವೈರಲ್ ಆಗುತ್ತಿವೆ. ಆಕೆ ತನಗೆ ಹಂದಿ ಮಾಂಸ ಎಂದರೇ ತುಂಬಾ ಇಷ್ಟ.  ನಮ್ಮ ಕಡೆ ಹಂದಿ ಮಾಂಸವನ್ನು ಸಂಪ್ರದಾಯಿಕ ಅಡಿಗೆ ಆಗಿ ಭಾವಿಸುತ್ತೇವೆ. ಹಂದಿ ಮಾಂಸವನ್ನು ಬೆಂಕಿಯ ಕೆಂಡಗಳ ಮೇಲೆ ಸುಟ್ಟು ತಿನ್ನಲು ತುಂಭಾ ಇಷ್ಟ. ಅದೇ ರೀತಿ ವೈನ್ ಕುಡಿಯುವುದು ಸಹ ತುಂಬಾ ಇಷ್ಟ. ನಮ್ಮ ಮನೆಯಲ್ಲಿಯೇ ವೈನ್ ತಯಾರಿಸುತ್ತೇವೆ, ಅದನ್ನು ನಾವು ಸೇವಿಸುತ್ತೇವೆ ಎಂದು ಆಕೆ ತಮ್ಮ ಆಹಾರದ ಪದ್ದತಿಯ ಬಗ್ಗೆ ತಿಳಿಸಿದರು. ಇನ್ನೂ ಈ ಹೇಳಿಕೆಗಳು ಆಕೆ ಹಳೇಯ ಸಂದರ್ಶನದಲ್ಲಿ ನೀಡಿದ್ದರು. ಇದೀಗ ಆಕೆಯ ಹೇಳಿಕೆಗಳು ಮತ್ತೊಮ್ಮೆ ವೈರಲ್ ಆಗುತ್ತಿವೆ.

ಇನ್ನೂ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆಯ ಕೈಯಲ್ಲಿ ಅನೇಕ ಸಿನೆಮಾಗಳಿವೆ. ರೈನ್ ಬೋ, ಯಾನಿಮಲ್, ಪುಷ್ಪಾ-2 ಸಿನೆಮಾಗಳ ಶೂಟಿಂಗ್ ನಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಇನ್ನೂ ಪುಷ್ಪಾ-2 ಸಿನೆಮಾದ ಮೇಲೆ ಆಕೆ ತುಂಬಾನೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.