Film News

ಆರೋಗ್ಯಕ್ಕಾಗಿ ಆಧ್ಯಾತ್ಮಿಕತೆಯ ಮೊರೆ ಹೋದ ಸಮಂತಾ, ಇಷಾ ಸೆಂಟರ್ ನಲ್ಲಿ ಧ್ಯಾನ ಮಾಡುತ್ತಾ ಕಾಣಿಸಿಕೊಂಡ ಸಮಂತಾ…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕಳೆದ ವರ್ಷ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದ ವಿಚಾರ ತಿಳಿದೇ ಇದೆ. ಮಯೋಸೈಟೀಸ್ ವ್ಯಾಧಿಯಿಂದ ಕೊಂಚ ಚೇತರಿಸಿಕೊಂಡು ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾದರು. ಇದೀಗ ಆಕೆ ಆರೋಗ್ಯದ ದೃಷ್ಟಿಯಿಂದ ಮತ್ತೆ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಇದೀಗ ಆರೋಗ್ಯಕ್ಕಾಗಿ ಇಷಾ ಸೆಂಟರ್‍ ನಲ್ಲಿ ಧ್ಯಾನದ ಮೊರೆ ಹೋಗಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ಸಮಂತಾ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರು. ತನ್ನ ಕೆರಿಯರ್‍ ಮೇಲೆ ಪೋಕಸ್ ಇಟ್ಟ ಈಕೆ ಒಳ್ಳೆಯ ಅವಕಾಶಗಳನ್ನು ಸಹ ಗಿಟ್ಟಿಸಿಕೊಂಡು ಸಕ್ಸಸ್ ಕಂಡುಕೊಂಡರು. ಅದರಲ್ಲೂ ಪುಷ್ಪಾ ಸಿನೆಮಾದಲ್ಲಿ ಐಟಂ ಸಾಂಗ್ ಮೂಲಕ ಮತಷ್ಟು ಫೇಂ ಪಡೆದುಕೊಂಡರು. ಆದರೆ ಆಕೆ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಮಯೋಸೈಟೀಸ್ ಎಂಬ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದರು. ಈ ಕಾರಣದಿಂದ ಸುಮಾರು ತಿಂಗಳುಗಳ ಕಾಲ ಆಕೆ ಅಜ್ಞಾತದಲ್ಲಿದ್ದರು. ಯಶೋಧ ಸಿನೆಮಾದ ಬಿಡುಗಡೆ ಸಮಯದಲ್ಲಿ ಆಕೆ ತನ್ನ ವ್ಯಾಧಿಯ ಬಗ್ಗೆ ವಿಚಾರ ತಿಳಿಸಿದರು. ಬಳಿಕ ಆಕೆ ಈ ವ್ಯಾಧಿಯಿಂದ ಚೇತರಿಸಿಕೊಂಡು ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದರು.

ಇದೀಗ ಸಮಂತಾ ಸಂಪೂರ್ಣವಾಗಿ ಗುಣಮುಖರಾಗಲು ಮತ್ತೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಹಿಂದೆ ಸಹ ಆಕೆ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಗಾಗಿ ಆಧ್ಯಾತ್ಮಿಕತೆಯ ಮೊರೆ ಹೋಗಿದ್ದರು. ಇದೀಗ ಮತ್ತೆ ಆಕೆ ಆಧ್ಯಾತ್ಮಿಕತೆಯ ಮೊರೆ ಹೋಗಿದ್ದಾರೆ. ಈಗಾಗಲೇ ಅನೇಕ ಪುಣ್ಯಕ್ಷೇತ್ರಗಳಲ್ಲಿ ದೇವರ ಪ್ರಾರ್ಥನೆ ಮಾಡಿದ ಈಕೆ ಇದೀಗ ಸದ್ಗುರು ರವರ ಇಷಾ ಸೆಂಟರ್‍ ನಲ್ಲಿ ಸೇರಿದ್ದಾರೆ. ಪ್ರಶಾಂತವಾದ ವಾತವರಣದಲ್ಲಿ ಆಕೆ ಮೆಡಿಟೇಷನ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಧ್ಯಾನದ ಮೂಲಕ ತನ್ನಲ್ಲಿ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದೇನೆ ಎಂದು ಇಂಟ್ರಸ್ಟೀಂಗ್ ನೋಟ್ ಸಹ ಬರೆದುಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಆಕೆ ಈ ಪೋಸ್ಟ್ ನಲ್ಲಿ ಯಾವುದೇ ಆಲೋಚನೆಯಿಲ್ಲದೇ ನಿಶ್ಕಲ್ಮಶವಾಗಿ ಕುಳಿತುಕೊಳ್ಳುವುದು, ಯಾವುದೇ ಚಿಂತೆಯಿಲ್ಲದೇ ಕುಳಿತುಕೊಳ್ಳುವುದು ಅಸಾಧ್ಯವೆನ್ನಿಸಿತ್ತು. ಆದರೆ ಈ ದಿನ ಧ್ಯಾನದ ಸ್ಥಿತಿ ನನ್ನಲ್ಲಿ ತುಂಬಾ ಶಕ್ತಿಯನ್ನು ಹಾಗೂ ಮನಃಶಾಂತಿಯನ್ನು ಕೊಟ್ಟಿದೆ. ಈ ಪ್ರಕ್ರಿಯೆ ಇಷ್ಟೊಂದು ಸರಳ ಹಾಗೂ ಶಕ್ತಿಯುತವಾಗಿ ಇರುತ್ತೆ ಎಂದುಕೊಂಡಿರುವುದಿಲ್ಲ ಎಂದು ನೋಟ್ ಬರೆದುಕೊಂಡಿದ್ದಾರೆ. ಇನ್ನೂ ಶೀಘ್ರದಲ್ಲೇ ಸಮಂತಾ ಸಿಟಾಡೆಲ್ ಹಾಗೂ ಖುಷಿ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.

Most Popular

To Top