ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸ್ಟಾರ್ ನಟಿ ಸಮಂತಾ, ಪುಲ್ ಖುಷಿಯಾದ ಫ್ಯಾನ್ಸ್…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ವೈಯುಕ್ತಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಆಕೆ ವಿಚ್ಚೇದನ, ಆರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳಿಂದ ತುಂಬಾನೆ ನೋವು ಪಟ್ಟಿದ್ದರು. ಮಯೋಸೈಟೀಸ್ ಎಂಬ ಮಾರಕ ವ್ಯಾದಿಗೆ…

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ವೈಯುಕ್ತಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಆಕೆ ವಿಚ್ಚೇದನ, ಆರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳಿಂದ ತುಂಬಾನೆ ನೋವು ಪಟ್ಟಿದ್ದರು. ಮಯೋಸೈಟೀಸ್ ಎಂಬ ಮಾರಕ ವ್ಯಾದಿಗೆ ಗುರಿಯಾಗಿ ತುಂಬಾ ಸಂಕಷ್ಟ ಎದುರಿಸಿದ್ದರು. ಸಂಪೂರ್ಣ ಆರೋಗ್ಯಕ್ಕಾಗಿ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಸಹ ಪಡೆದುಕೊಂಡಿದ್ದರು. ಇದೀಗ ಸಮಂತಾ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಆ ಸುದ್ದಿ ಕೇಳಿದ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ.

ನಟಿ ಸಮಂತಾ ಮಯಸೋಸೈಟೀಸ್ ವ್ಯಾದಿಯಿಂದ ಹೊರಬರಲು ತುಂಬಾನೆ ಕಷ್ಟ ಪಡಬೇಕಿತ್ತು. ಆಕೆ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಮಾತ್ರವಲ್ಲದೇ ಸಿನೆಮಾ ಸ್ಟಾರ್‍ ಗಳೂ ಸಹ ಪ್ರಾರ್ಥಿಸಿದ್ದರು. ಅನೇಕ ನಟ-ನಟಿಯರು ಆಕೆಗೆ ಧೈರ್ಯ ತುಂಬಿದ್ದರು. ಕೊನೆಯದಾಗಿ ಸಮಂತಾ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದ ಬಳಿಕ ಆಕೆ ಸಂಪೂರ್ಣವಾಗಿ ಆರೋಗ್ಯ ಪಡೆದುಕೊಳ್ಳಲು ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರು. ಬಳಿಕ ಆಕೆ ವಿವಿಧ ಪ್ರಾಕೃತಿಕ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರೂ ಸಹ ಆಕೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಇನ್ನೂ ಸಮಂತಾ ಯಾವಾಗ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳೂ ಸಹ ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೂ ಸಮಂತಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಅಭಿಮಾನಿಗಳೊಂದಿಗೆ ಆಗಾಗ ಚಿಟ್ ಚಾಟ್ ಸಹ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಮಾತನಾಡುತ್ತಾ, ಮತ್ತೆ ಸಿನೆಮಾಗಳಲ್ಲಿ ಯಾವಾಗ ಬರುತ್ತೀರಾ ಎಂದು ಅನೇಕರು ಕೇಳುತ್ತಿದ್ದಾರೆ. ಕೊನೆಗೂ ಆ ಸಮಯ ಬಂದಿದೆ. ನಾನು ಶೀಘ್ರದಲ್ಲೇ ಶೂಟಿಂಗ್ ನಲ್ಲಿ ಭಾಗಿಯಾಗುತ್ತೇನೆ. ಕೆಲವು ದಿನಗಳ ಕಾಲ ನಾನು ಏನು ಕೆಲಸ ಇಲ್ಲದೇ ಇದ್ದೆ. ನಾನು ಹಾಗೂ ನನ್ನ ಸ್ನೇಹಿತರೊಂದಿಗೆ ಆರೋಗ್ಯದ ಪೋಡ್ ಕಾಸ್ಟ್ ಬಗ್ಗೆ ಕಾರ್ಯಕ್ರಮವೊಂದನ್ನು ಮಾಡಿದ್ದೇವೆ. ಆ ವಿಡಿಯೋ ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಸಮಂತಾ ಹೇಳಿದ್ದಾರೆ. ಇನ್ನೂ ಈ ವಿಡಿಯೋ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಇನ್ನೂ ಸಮಂತಾ ಒಂದು ವರ್ಷ ಬ್ರೇಕ್ ತೆಗೆದುಕೊಳ್ಳುವುದಕ್ಕೂ ಮುಂಚೆಯೇ ಸಿಟಾಡೆಲ್ ಎಂಬ ಹಿಂದಿ ವೆಬ್ ಸಿರೀಸ್ ನಲ್ಲಿ ನಟಿಸಿದ್ದು, ಇದು ಸಹ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ.