Film News

ಎರಡನೇ ಮದುವೆಯ ಬಗ್ಗೆ ಸಮಂತಾಗೆ ಪ್ರಶ್ನೆ, ನಟಿಯ ರಿಯಾಕ್ಷನ್ ಏನು ಗೊತ್ತಾ?

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕೊನೆಯದಾಗಿ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಸಹ ಕಂಡುಕೊಂಡಿತ್ತು. ಕಳೆದ ಎರಡು ವರ್ಷಗಳಿಂದ ಸಮಂತಾ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಆಕೆ ಕಳೆದ ವರ್ಷ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದು, ಸದ್ಯ ಸಿನೆಮಾಗಳಿಂದ ಒಂದು ವರ್ಷ ಗ್ಯಾಪ್ ಪಡೆದುಕೊಂಡಿದ್ದಾಗಿ ಹೇಳಲಾಗಿದೆ. ಇದೀಗ ಸಮಂತಾಗೆ ನೆಟ್ಟಿಗನೋರ್ವ ಎರಡನೇ ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದು, ಅದಕ್ಕೆ ಆಕೆ ಫನ್ನಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಪ್ರೀತಿಸಿ ವಿವಾಹವಾದರು. ಆದರೆ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡ ಕಾರಣದಿಂದ ಅವರಿಬ್ಬರು ವಿಚ್ಚೇದನ ಪಡೆದುಕೊಂಡು ಸದ್ಯ ಸೊಲೋ ಲೈಫ್ ಲೀಡ್ ಮಾಡುತ್ತಿದ್ದಾರೆ. ಡಿವೋರ್ಸ್ ಪಡೆದುಕೊಂಡ ಕೆಲವೇ ತಿಂಗಳುಗಳಲ್ಲಿ ಆಕೆ ಮಯೋಸೈಟಿಸ್ ಎಂಬ ಮಾರಾಣಾಂತಿಕ ವ್ಯಾದಿಗೆ ಗುರಿಯಾದರು. ಬಳಿಕ ಆಕೆ ಕೊಂಚ ಚೇತರಿಸಿಕೊಂಡು ಸಿನೆಮಾಗಳಲ್ಲಿ ನಟಿಸಿದ್ದರು. ಬಳಿಕ ಆಕೆ ಮತ್ತೇ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರು. ಸಂಪೂರ್ಣ ಆರೋಗ್ಯಕ್ಕಾಗಿ ಆಕೆ ವಿರಾಮ ಪಡೆದುಕೊಂಡಿದ್ದು, ವಿದೇಶಗಳನ್ನು ಸುತ್ತಾಡುತ್ತಾ ಒಂಟಿ ಜೀವನ ಎಂಜಾಯ್ ಮಾಡುತ್ತಿದ್ದಾರೆ.

ಇನ್ನೂ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಆಕ್ಟೀವ್ ಆಗಿದ್ದು, ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಖಾಲಿ ಸಮಯ ಸಿಕ್ಕಾಗಲೆಲ್ಲಾ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ  ಇನ್ಸ್ಟಾ ಲೈವ್ ನಲ್ಲಿ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಆಕೆ ಉತ್ತರ ನೀಡಿದ್ದಾರೆ. ಈ ಹಾದಿಯಲ್ಲೇ ಓರ್ವ ನೆಟ್ಟಿಗ ಎರಡನೇ ಮದುವೆ ಏಕೆ ಮಾಡಿಕೊಳ್ಳಲಿಲ್ಲ ಎಂದು ಕೇಳಿದ್ದಾನೆ. ಅದಕ್ಕೆ ಸಮಂತಾ ಫನ್ನಿಯಾಗಿ ಉತ್ತರಿಸಿದ್ದಾರೆ. ಇಂಡಿಯಾದಲ್ಲಿ ಮೊದಲ ಮದುವೆಗಿಂತ ಎರಡು ಮೂರು ಮದುವೆಗಳಿಗೆ ಹೆಚ್ಚು ರೇಟ್ ಹೆಚ್ಚು. ಸದ್ಯ ನನಗೆ ಆ ಆಲೋಚನೆ ಇಲ್ಲ ಎಂದು ಫನ್ನಿಯಾಗಿ ರಿಯಾಕ್ಟ್ ಆಗಿದ್ದಾರೆ.

Most Popular

To Top