ಡಿ.31 ರಂದು ಹಾಟ್ ಆಂಕರ್ ರಶ್ಮಿ ಮದುವೆಯಾಗುವ ಹುಡುಗ ಯಾರೆಂದು ಹೇಳ್ತಾರಂತೆ, ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಆಂಕರ್….!

Follow Us :

ಕಿರುತೆರೆಯಲ್ಲಿ ಸುಧೀರ್‍ ಹಾಗೂ ರಶ್ಮಿ ಜೋಡಿಗೆ ತುಂಬಾನೆ ಕ್ರೇಜ್ ಇದೆ. ಜಬರ್ದಸ್ತ್ ಶೋ ಮೂಲಕ ಈ ಜೋಡಿಯ ಹವಾ ಶುರುವಾಯಿತು. ಈ ಶೋ ನಲ್ಲಿ ಅವರ ಲವ್ ಟ್ರಾಕ್, ರೊಮ್ಯಾನ್ಸ್, ಕೆಮಿಸ್ಟ್ರಿ ಎಲ್ಲವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದರಲ್ಲೂ ಡಿ ರಿಯಾಲಿಟಿ ಶೋ ನಲ್ಲಿ ಈ ಜೋಡಿ ಮತಷ್ಟು ಸಂಚಲನ ಸೃಷ್ಟಿ ಮಾಡಿದ್ದರು. ಆಗಾಗ ರಶ್ಮಿ ಹಾಗೂ ಸುಧೀರ್‍ ಮದುವೆಯ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿರುತ್ತದೆ. ಇದೀಗ ರಶ್ಮಿ ತಾನು ಮದುವೆಯಾಗುವ ಹುಡುಗ ಯಾರೆಂದು ಡಿ.31 ರಂದು ರಿವೀಲ್ ಮಾಡಲಿದ್ದಾರಂತೆ. ಸದ್ಯ ಈ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ.

ಸುಮಾರು ಹತ್ತು ವರ್ಷಗಳಿಂದ ಆಂಕರ್‍ ಆಗಿ ಸ್ಟಾರ್‍ ಇಮೇಜ್ ಪಡೆದುಕೊಂಡ ರಶ್ಮಿ ಗೌತಮ್ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಳ್ಳಲು ವಿಫಲರಾದರು. ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಸಿಗಲಿಲ್ಲ ಎಂದೇ ಹೇಳಬಹುದು. ಆದರೆ ಕಿರುತೆರೆಯಲ್ಲಿ ಮಾತ್ರ ಆಕೆ ಸ್ಟಾರ್‍ ಡಂ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ರಶ್ಮಿ ಎಂದ ಕೂಡಲೇ ಸುಡಿಗಾಲಿ ಸುಧೀರ್‍ ಸಹ ನೆನಪಿಗೆ ಬರೋದು ಸಹಜ. ಜಬರ್ದಸ್ತ್ ಶೋ ಮೂಲಕ ಇಬ್ಬರಿಗೂ ಒಳ್ಳೆಯ ಫೇಂ ದೊರೆತಿದೆ. ಈ ಶೋ ನಲ್ಲಿ ಅವರಿಬ್ಬರು ಅಮರ ಪ್ರೇಮಿಗಳಾಗಿದ್ದಾರೆ. ಜೊತೆಗೆ ಮದುವೆ ಸಹ ಆಗಿದ್ದಾರೆ. ಈ ಜೋಡಿ ನಿಜ ಜೀವನದಲ್ಲೂ ಮದುವೆಯಾದರೇ ಚೆನ್ನಾಗಿರುತ್ತದೆ ಎಂದು ಅವರ ಅಭಿಮಾನಿಗಳು ಸಹ ಕೋರುತ್ತಿರುತ್ತಾರೆ. ಆದರೆ ಸುಧೀರ್‍ ಕೆಲವು ದಿನಗಳ ಹಿಂದೆಯಷ್ಟೆ ಜಬರ್ದಸ್ತ್ ಶೋ ಬಿಟ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಈ ಜೋಡಿ ಭೇಟಿ ಯಾಗುತ್ತಿರುತ್ತಾರೆ ಎನ್ನಲಾಗಿದೆ.

ಇನ್ನೂ ರಶ್ಮಿಗೂ ಸಹ ಮದುವೆ ವಯಸ್ಸು ದಾಟುತ್ತಿದೆ. ಇನ್ಣೂ ಆಕೆ ಮದುವೆಯಾಗಿಲ್ಲ. ಆಕೆ  ಮದುವೆ ಆಗೋದೇ ಇಲ್ಲವೇ, ಅಥವಾ ಸುಧೀರ್‍ ಗಾಗಿ ಕಾಯುತ್ತಿದ್ದಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಜೊತೆಗೆ ರಶ್ಮಿ ಯಾವಾಗ ಮದುವೆಯಾಗುತ್ತಾರೆ ಎಂದು ಪ್ರಶ್ನೆಗಳು ಎದುರಾಗುತ್ತಲೇ ಇದೆ. ಸದಾ ಮದುವೆಯ ಬಗ್ಗೆ ಪ್ರಶ್ನೆ ಬಂದರೇ ಆಕೆ ನಗುತ್ತಾ ಸುಮ್ಮನಾಗುತ್ತಾರೆ. ಇದೀಗ ರಶ್ಮಿ ಮದುವೆಯ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಮದುವೆ ಪ್ರಶ್ನೆ ಎದುರಾಗುತ್ತಿದ್ದು ತನ್ನ ಮದುವೆಯ ಬಗ್ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.  ಈ ಹಾದಿಯಲ್ಲೇ ರಶ್ಮಿ ಮದುವೆ ಪಾರ್ಟಿ ಎಂಬ ಹೆಸರಿನಲ್ಲಿ ಪ್ರೊಮೋ ಬಿಡುಗಡೆಯಾಗಿದ್ದು, ಅದರಲ್ಲಿ ಎದುರಾದಂತಹ ಮದುವೆ ಪ್ರಶ್ನೆಗೆ ಆಕೆ ಉತ್ತರಿಸಿದ್ದಾರೆ. ಎಲ್ಲರೂ ರೆಡಿಯಾಗಿ ಡಿ.31 ರಂದು ಆ ವಿಚಾರವನ್ನು ಹೊರಹಾಕುತ್ತೇನೆ ಎಂದಿದ್ದಾರೆ.

ಹೊಸ ವರ್ಷದ ಸಂಭ್ರಮದ ಅಂಗವಾಗಿ ಶ್ರೀದೇವಿ ಡ್ರಾಮಾ ಕಂಪನಿ ಎಂಬ ಕಾಮಿಡಿ ಶೋನ ಇಯರ್‍ ಎಂಡ್ ಈವೆಂಟ್  ನಿರ್ವಹಿಸುತ್ತಿದ್ದು, ಆ ದಿನ ರಶ್ಮಿ ಏನು ಘೋಷಣೆ ಮಾಡುತ್ತಾರೆ, ನಿಜಕ್ಕೂ ಆಕೆ ಅಂದು ತನ್ನ ಮದುವೆ ಸುದ್ದಿ ತಿಳಿಸುತ್ತಾರಾ? ಅಥವಾ ಶೋ ಗಾಗಿ ಆಕೆ ಈ ಪ್ರೊಮೋ ಮಾಡಿದ್ದಾರಾ ಎಂಬುದು ಯಕ್ಷ ಪ್ರಶ್ನೆಯಾಗಿದ್ದು, ಡಿ.31 ರವರೆಗೂ ಸತ್ಯಾಂಶ ಏನು ಎಂಬುದು ತಿಳಿಯಲು ಕಾಯಬೇಕಿದೆ.