ಒಂಟಿಯಾಗಿ ಸಂಕ್ರಾಂತಿ ಆಚರಿಸಿದ ಸ್ಟಾರ್ ನಟಿ ಸಮಂತಾ, ವೈರಲ್ ಆದ ಪೊಟೋಸ್……!

Follow Us :

ದೇಶದ ಸಿನಿರಂಗದ ಖ್ಯಾತ ನಟಿಯರಲ್ಲಿ ಸಮಂತಾ ಸಹ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಸ್ಟಾರ್‍ ನಟರಿಗಿಂತ ಕಡಿಮೆಯಿಲ್ಲ ಎಂಬಂತೆ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಕೊನೆಯದಾಗಿ ಆಕೆ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾದ ಬಳಿಕ ಆಕೆ ಸಿನಿಮಾಗಳಿಂದ ಒಂದು ವರ್ಷದ ಕಾಲ ಬ್ರೇಕ್ ಪಡೆದುಕೊಂಡಿದ್ದಾರೆ. ತನ್ನ ಆರೋಗ್ಯದ ದೃಷ್ಟಿಯಿಂದ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಇದೀಗ ಸಮಂತಾ ಸಂಕ್ರಾಂತಿ ಹಬ್ಬವನ್ನು ಒಂಟಿಯಾಗಿ ಆಚರಿಸಿದ್ದು, ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಸಮಂತಾ ಮಯೋಸೈಟಿಸ್ ವ್ಯಾಧಿಯಿಂದ ಸಂಪೂರ್ಣವಾಗಿ ಗುಣಮುಖರಾಗಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಗುಣಮುಖರಾಗಲು ಸಿನೆಮಾಗಳಿಂದ ಸಹ ಬ್ರೇಕ್ ಪಡೆದುಕೊಂಡಿದ್ದಾರೆ. ಜೊತೆಗೆ ಯೋಗಾ, ಆಧ್ಯಾತ್ಮಿಕ ಕೇಂದ್ರಗಳಿಗೆ ಸಹ ಭೇಟಿ ನೀಡುತ್ತಿರುತ್ತಾರೆ. ಜಿಮ್ ನಲ್ಲೂ ಸಹ ಹೆವಿ ವರ್ಕೌಟ್ಸ್ ಮಾಡುತ್ತಿರುತ್ತಾರೆ. ಮಯೋಸೈಟಿಸ್ ಕಾರಣದಿಂದ ಆಕೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಮೆಟ್ಟಿ ನಿಂತಲು ಕಠಿಣ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಸಮಂತಾ ಈಗಾಗಲೇ ಸಿನೆಮಾಗಳಿಂದಲೂ ಸಹ ದೂರ ಇದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಗ್ಲಾಮರಸ್ ಪೊಟೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇನ್ನೂ ಸಮಂತಾ ಒಂಟಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೆಲವೊಂದು ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಸಂಕ್ರಾಂತಿಯನ್ನು ನಾನು ತುಂಬಾ ಸಂತೋಷದಿಂದ ಆಚರಿಸಿದ್ದೇನೆ. ಗಾಳಿಪಟ ಹಾರಿಸಿದೆ. ಆದರೆ ಅದು ಕಟ್ ಆಯ್ತ. ಅದೇ ರೀತಿ ಹಳೆಯ ವಸ್ತುಗಳನ್ನು, ಕೆಟ್ಟ ವಸ್ತುಗಳನ್ನು ಭೋಗಿ ಕಿಚ್ಚಿನಲ್ಲಿ ಹಾಕಿ ಸುಟ್ಟಾಗಿಬಿಟ್ಟೆ. ಹಳೆಯ ಪದ್ದತಿಯಲ್ಲಿ ತಲೆ ಸ್ನಾನ ಮಾಡಿದ್ದಾರಂತೆ. ಚಿಕ್ಕ ರಂಗೋಲಿ ಹಾಕಿ ಸುಂದರವಾದ ಹೂಗಳಿಂದ ಅಲಂಕರಿಸಿದ್ದೇನೆ. ಬಳಿಕ ನನ್ನ ಪೆಟ್ಸ್ ಆದ ಬೆಕ್ಕು ಹಾಗೂ ನಾಯಿ ಮಧ್ಯೆ ಮನೆ ಯಾರದ್ದು ಎಂಬ ವಿಚಾರದಲ್ಲಿ ಗಲಾಟೆ ನಡೆಯಿತು. ಆದರೆ ಕೊನೆಯದಾಗಿ ಬೆಕ್ಕು ಗೆದಿದೆ ಎಂದು ಸಮಂತಾ ತಮಾಷೆಯಾಗಿ ಹೇಳಿದ್ದಾರೆ.

k

ಇನ್ನೂ ಸಮಂತಾ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಸಹ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ಕೋರುತ್ತಿದ್ದಾರೆ. ಇನ್ನೂ ಸಂಮಂತಾ ಸಂಪೂರ್ಣ ಆರೋಗ್ಯ ಪಡೆದುಕೊಳ್ಳಲು ಒಂದು ವರ್ಷ ಸಿನೆಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಸಹ ಸಮಂತಾ ನಟಿಸಿದ್ದು, ಈ ಸಿರೀಸ್ ಶೀಘ್ರದಲ್ಲೆ ಸ್ಟ್ರೀಮಿಂಗ್ ಆಗಲಿದೆ.