ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಹೋಗಲು ಆಗುತ್ತಿಲ್ಲ, ಇದು ನನ್ನ ದುರದೃಷ್ಟ ಎಂದ ಜಗ್ಗಿ ವಾಸುದೇವ್……!

Follow Us :

ಇಡೀ ದೇಶದ ಹಿಂದೂಗಳು ಸುಮಾರು ವರ್ಷಗಳಿಂದ ಕಾಯುತ್ತಿರುವ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಜ.22 ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇದ್ದರೂ ಸಹ ನನಗೆ ಹೋಗಲು ಆಗುತ್ತಿಲ್ಲ. ಇದು ನನ್ನ ದುರದೃಷ್ಟ ಎಂದು ಈಶಾ ಸಂಸ್ಥಾಪಕ ಜಗ್ಗಿ ವಾಸುದೇವ್ ತಿಳಿಸಿದ್ದಾರೆ.

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿರು ಈಶಾ ಆದಿಯೋಗಿ ಕೇಂದ್ರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಂದಿ ವಿಗ್ರಹ ಹಾಗೂ ತ್ರಿಶೂಲ ಪ್ರತಿಷ್ಟಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೂ ಮುನ್ನಾ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆಗೆ ನನಗೂ ಸಹ ಆಹ್ವಾನ ಬಂದಿದೆ. ಆದರೆ ಅದೇ ಸಮಯದಲ್ಲಿ ನನಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪೂರ್ವ ನಿಗಧಿ ಕಾರ್ಯಕ್ರಮ ಇರುವ ಕಾರಣ ನಾನು ಅಯೋಧ್ಯೆಗೆ ಹೋಗಲು ಆಗುತ್ತಿಲ್ಲ. ಇದು ನನ್ನ ದುರದೃಷ್ಟವೇ ಸರಿ ಎಂದು ಹೇಳಿದರು.

ಇದೇ ವೇಳೆ ಕೆಲ ಮಠಾಧೀಶರು ಅಪೂರ್ಣ ಮಂದಿರ ಉದ್ಘಾಟನೆ ಎಂಬೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದು, ಈ ಬಗ್ಗೆ ಸಹ ಜಗ್ಗಿ ವಾಸುದೇವ್ ರಿಯಾಕ್ಟ್ ಆಗಿದ್ದಾರೆ. ನಮಗೆ ಯಾರ ಮೇಲೆ ಆದರೂ ಪ್ರೀತಿ ಇದ್ರೆ ಎಷ್ಟು ಮಾಡಿದ್ರೂ ಸಾಕಾಗಿಲ್ಲ ಅನ್ಸುತ್ತೆ. ಸ್ವಲ್ಪ ಪ್ರೀತಿ ಮಾಡಿದರೂ ತುಂಬಾನೆ ಪ್ರೀತಿ ಮಾಡಿದೆ ಎಂದು ತಿಳಿದುಕೊಳ್ಳುವವರ ಹೃದಯದಲ್ಲಿ ಪ್ರೀತಿ ಇರೊಲ್ಲ. ಜಾಸ್ತಿ ಪ್ರೀತಿಸಿದರೂ ಮತಷ್ಟು ಪ್ರೀತಿಸಬೇಕು ಎಂನ್ನುವವರ ಹೃದಯದಲ್ಲಿ ಪ್ರೀತಿ ಇರುತ್ತದೆ. ದೇವಾಲಯ ಅನ್ನೋದು ಎಂದೂ ಮುಗಿಯಲ್ಲ. ದೇವಾಲಯ ನಿರ್ಮಾಣ ಮಾಡ್ತಾ ಇದ್ರೆ ಮಾಡ್ತಾನೆ ಇರಬೇಕು. ಭಕ್ತನ ಆಶಯ ಸಹ ಅದೇ. ಸದ್ಯ ಅಯೋಧ್ಯೆಯಲ್ಲಿ ರಾಮಮಂದಿರ ಮೂರು ಅಂತಸ್ತು ಇದೆ. ಒಂದು ಅಂತಸ್ತು ಇದೀಗ ಪೂರ್ಣಗೊಂಡಿದೆ. ರಾಮಲಲ್ಲಾ ಅಲ್ಲಿ ಪ್ರತಿಷ್ಟಾಪನೆ ಆಗಲಿದ್ದಾನೆ. ಮುಂದೆ ಉಳಿದ ಎಲ್ಲ ಕಾರ್ಯಗಳು ಪೂರ್ಣಗೊಳ್ಳಲಿದೆ. ಈ ಕಾರಣದಿಂದ ಅದು ಅಪೂರ್ಣ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.