ಬೌಂಡರಿಗಳನ್ನು ದಾಟಿದ ಸಮಂತಾ, ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ನಟಿ…..!

ದೇಶದ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇದೀಗ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಳ್ಳುವಂತಹ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಸಮಂತಾ ಹಾಗೂ ನಾಗಚೈತನ್ಯ…

ದೇಶದ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇದೀಗ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಳ್ಳುವಂತಹ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನದ ಬಳಿಕ ಆಕೆ ಸದಾ ಸುದ್ದಿಯಲ್ಲೇ ಇರುತ್ತಾರೆ. ಸದ್ಯ ಆರೊಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ವರ್ಷ ಸಿನಿಮಾಗಳಿಗೆ ಬ್ರೇಕ್ ನೀಡಿದ್ದಾರೆ. ಆದರೆ ಸೋಷಿಯಲ್ ಮಿಡಿಯಾ ಹಾಗೂ ಜಾಹಿರಾತುಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಬಿಕಿನಿಯಲ್ಲಿ ಬೋಲ್ಡ್ ಪೋಸ್ ಕೊಟ್ಟಿದ್ದಾರೆ.

ನಟಿ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರೂ ಸಹ ಸೋಷಿಯಲ್ ಮಿಡಿಯಾದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದಾರೆ. ಜೊತೆಗೆ ಕೆಲವೊಂದು ಬ್ರಾಂಡ್ ಗಳನ್ನು ಪ್ರಮೋಟ್ ಮಾಡುವಂತಹ ಜಾಹಿರಾತುಗಳಲ್ಲೂ ಸಹ ನಟಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಮ್ಯಾಗ್‌ ಜೈನ್ ಒಂದಕ್ಕಾಗಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಖ್ಯಾತ ಫ್ಯಾಷನ್ ಮ್ಯಾಗ್ ಜೈನ್ ಬಜಾರ್‍ ಸಮಂತಾ ರವರ ಬೋಲ್ಡ್ ಪೊಟೋಶೂಟ್ಸ್ ಮಾಡಿದೆ. ಬ್ಲಾಕ್ ಡಿಜೈನರ್‍ ಔಟ್ ಫಿಟ್ ನಲ್ಲಿ ಸೂಪರ್‍ ಹಾಟ್ ಆಗಿ, ಬಿಕಿನಿಯ ಮಾದರಿಯಲ್ಲಿರುವ ಡ್ರೆಸ್ ನಲ್ಲಿ ಹಾಟ್ ಕ್ಲೀವೇಜ್ ಶೋ ಮಾಡುವುದರ ಜೊತೆಗೆ ಥಂಡರ್‍ ಥೈಸ್ ಶೋ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ್ದು, ಅಭಿಮಾನಿಗಳ ಜೊತೆಗೆ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಇದೇ ಮ್ಯಾಗ್ ಜೈನ್ ಸಂದರ್ಶನದಲ್ಲಿ ಭಾಗಿಯಾದ ಸಮಂತಾ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ. ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳ ಬಗ್ಗೆ ರಿಯಾಕ್ಷನ್ ಏನು ಎಂಬ ಪ್ರಶ್ನೆ ಕೇಳಲಾಗಿದೆ. ಈ ವೇಳೆ ಉತ್ತರಿಸಿದ ಸಮಂತಾ, ವಿಚ್ಚೇದನ ಬಳಿಕ ಅನಾರೋಗ್ಯ ನನ್ನನ್ನು ತುಂಬಾನೆ ವೀಕ್ ಮಾಡಿದೆ. ಸಮಸ್ಯೆ ಬಳಿಕ ಮತ್ತೊಂದು ಸಮಸ್ಯೆ ನನ್ನನ್ನು ತುಂಬಾನೆ ನೋಯಿಸಿದೆ. ಅಂತಹ ಕಠಿಣ ಸಮಯದಲ್ಲಿ ನನ್ನಂತೆ ಸಮಸ್ಯೆಗಳಲ್ಲಿ ಸಿಲುಕಿದಂತಹ ಕಲಾವಿದರ ಜೀವನದ ಬಗ್ಗೆ ಓದಿದೆ. ಅವರು ಹೇಗೆ ಹೋರಾಟ ಮಾಡಿ ಗೆದ್ದರೋ ಅದೇ ನನಗೂ ಸಹ ಉಪಯೋಗವಾಯ್ತು. ಲಕ್ಷಾಂತರ ಮಂದಿ ಅಭಿಮಾನಿಗಳು ಪ್ರೀತಿಸುವಂತಹ ನಟಿಯಾಗಿ ಇರುವುದು ದೊಡ್ಡ ಬಹುಮಾನವಿದ್ದಂತೆ. ಆದ್ದರಿಂದ ನಾವು ಪ್ರಮಾಣಿಕರಾಗಿರಬೇಕು ಎಂದಿದ್ದಾರೆ.

ಎಷ್ಟು ಹಿಟ್ಸ್, ಬ್ಲಾಕ್ ಬ್ಲಸ್ಟರ್‍ ಪಡೆದುಕೊಂಡಿದ್ದೇವೆ, ಎಷ್ಟು ಅವಾರ್ಡ್‌ಗಳು ಬಂದಿದೆ ಎಂಬುದಾಗಲಿ ಅಥವಾ ಎಷ್ಟು ಸುಂದರವಾಗಿದ್ದೀವಿ, ಎಂತಹ ಬಟ್ಟೆಗಳನ್ನು ಧರಿಸುತ್ತಿದ್ದೇವೆ ಎಂಬುದು ಮುಖ್ಯವಲ್ಲ. ನಾವು ಎಂತಹ ಸಮಸ್ಯೆಗಳನ್ನು ಎದುರಿಸಿದ್ದೇವೆ, ಎಂತಹ ಕಷ್ಟಗಳಿಂದ ಹೊರಬಂದಿದ್ದೇವೆ ಎಂಬುದು ಮುಖ್ಯ. ನಾನು ನನ್ನ ಸಮಸ್ಯೆಗಳನ್ನು ಎದುರಿಸುತ್ತೇನೆ ಎಂಬುದು ಗೊತ್ತಿದೆ. ನನ್ನಂತೆ ನೋವು ಪಡುವಂತಹವರು ಸಮಸ್ಯೆಗಳನ್ನು ಎದುರಿಸುವಂತಹ ಶಕ್ತಿ ಸಿಗಬೇಕು, ನಿರಂತರವಾಗಿ ಹೋರಾಡಬೇಕು ಎಂದು ಸಮಂತಾ ಹೇಳಿದ್ದು, ಆಕೆಯ ಪೊಟೋಗಳು ಹಾಗೂ ಕಾಮೆಂಟ್ ಗಳು ವೈರಲ್ ಆಗುತ್ತಿವೆ.