Film News

ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ? ಆ ವ್ಯಾಧಿ ಏನು ಗೊತ್ತಾ?

ಸೌತ್ ಅಂಡ್ ನಾರ್ತ್ ನಲ್ಲೂ ಪುಲ್ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಸದಾ ಒಂದಲ್ಲ ಒಂದು ಸುದ್ದಿಯಿಂದ ಪ್ರಚಾರದಲ್ಲಿರುತ್ತಾರೆ. ಇತ್ತೀಚಿಗೆ ಅನೇಕ ನಟಿಯರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಮಂತಾ, ಮಮತಾ ಮೋಹನ್ ದಾಸ್, ಕಲ್ಪಿಕಾ ಗಣೇಶ್ ಸೇರಿದಂತೆ ಅನೇಕ ನಟಿಯರು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ನ್ಯಾಷನಲ್ ಕ್ರಷ್ ರಶ್ಮಿಕಾ ಸಹ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರಂತೆ. ಈ ಬಗ್ಗೆ ಅವರೇ ರಿವೀಲ್ ಮಾಡಿದ್ದಾರೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇತ್ತಿಚಿಗೆ ಮಯೋಸೈಟೀಸ್ ಎಂಬ ವ್ಯಾದಿಯಿಂದ ಬಳಲುತ್ತಿರುವ ಬಗ್ಗೆ ತಿಳಿದೇ ಇದೆ. ಇದೀಗ ಆಕೆ ಈ ವ್ಯಾಧಿಯಿಂದ ಗುಣಮುಖರಾಗಿ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಇನ್ನೂ ಮಮತಾ ಮೋಹನ್ ದಾಸ್ ಸಹ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಆಕೆಯೇ ತಿಳಿಸಿದ್ದರು. ಇದೀಗ ರಶ್ಮಿಕಾ ಸಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಶ್ಮಿಕಾ ಚರ್ಮಕ್ಕೆ ಸಂಬಂಧಿಸಿದಂತೆ ವ್ಯಾದಿಯಿಂದ ಬಳಲುತ್ತಿದ್ದಾರಂತೆ. ಇನ್ನೂ ಈ ಬಗ್ಗೆ ರಶ್ಮಿಕಾ ತನ್ನ ಇನ್ಸ್ಟಾ ಸ್ಟೋರಿ ಈ ಸುದ್ದಿ ಹರಡಲು ಕಾರಣವಾಗುತ್ತಿದೆ.  ಇನ್ನೂ ರಶ್ಮಿಕಾ ಸ್ಟೋರಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ರಶ್ಮಿಕಾ ಒಂದಲ್ಲ ಒಂದು ಪೋಸ್ಟ್ ಹಂಚಿಕೊಂಡು ಸುದ್ದಿಯಾಗುತ್ತಿರುತ್ತಾರೆ.

ಇನ್ನೂ ರಶ್ಮಿಕಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಆಕೆ ತನ್ನ ಸಿನೆಮಾಗಳು, ಪೊಟೋಶೂಟ್ಸ್ ಗಳು ಸೇರಿದಂತೆ ಆಗಾಗ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸುವ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ತನ್ನ ಇನ್ಸ್ಟಾ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ. ಈ ಸ್ಟೋರಿಯಲ್ಲಿರುವಂತೆ ಡಿಯರ್‍ ಡೈರಿ, ಈ ದಿನ ತುಂಬಾ ಇಂಟ್ರಸ್ಟಿಂಗ್ ಆಗಿ ಸಾಗಿತ್ತು. ಎದ್ದ ಕೂಡಲೇ ವರ್ಕೌಟ್ ಮಾಡಿದೆ. ಆ ಬಳಿಕ ಆಹಾರ ತೆಗೆದುಕೊಂಡೆ. ನಾಳಿನ ಶೆಡ್ಯೂಲ್ ಗಾಗಿ ಬ್ಯಾಗ್ ಸಿದ್ದಪಡಿಸಿಕೊಂಡೆ. ಆದರೆ ಎಂದಿನಂತೆ ನನ್ನ ಸುತ್ತಲಿರುವ ವಾತವರಣ, ಮಂಜು ನನ್ನನ್ನು ಹೊರಗೆ ಹೋಗದಂತೆ ತಡೆದು ಡ್ರಾಮಾ ಮಾಡಿದೆ. ಬಳಿಕ ಮತ್ತೆ ವರ್ಕೌಟ್ ಮಾಡಿದೆ. ಬಳಿಕ ಡಿನ್ನರ್‍ ಮಾಡಿದೆ, ಬಳಿಕ ಡೆರ್ಮೆಟ್ ಅಪಾಯಿಂಟ್ ಮೆಂಟ್ ತೆಗೆದುಕೊಂಡೆ. ಇಂಪಾರ್ಟೆಂಡ್ ಮೀಟಿಂಗ್ ಇದೆ, ಅದೂ ಸಹ ಕ್ಯಾನ್ಸಲ್ ಆಗಿದೆ. ಬಳಿಕ  ಮನೆಗೆ ವಾಪಸ್ಸಾದೆ. ಇನ್ನೂ ಗುಡ್ ನೈಟ್ ಚೆನ್ನಾಗಿ ನಿದ್ದೆ ಮಾಡಿ. ಎಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಈ ಸ್ಟೋರಿ ಸಖತ್ ವೈರಲ್ ಆಗಿದೆ. ಇನ್ನೂ ಡರ್ಮೆಟ್ ಅಂದರೇ ಡರ್ಮಟಾಲಿಜಿಸ್ಟ್ ಎಂದು ಅರ್ಥ ಮಾಡಿಕೊಳ್ಳಬಹುದಾಗಿದೆ. ಇದನ್ನು ನೋಡಿದ ಆಕೆಯ ಅಭಿಮಾನಿಗಳು ರಶ್ಮಿಕಾಗೆ ಏನಾಗಿದೆ, ಡರ್ಮಾಟಾಲಿಜಿಸ್ಟ್ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಲು ಆಕೆಗೆ ಚರ್ಮ ವ್ಯಾಧಿ ಏನಾದರೂ ಇದೆಯೇ ಎಂದು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ಬಗ್ಗೆ ರಶ್ಮಿಕಾ ಸರಿಯಾದ ಮಾಹಿತಿ ನೀಡಬೇಕಿದೆ.

Most Popular

To Top