Film News

ಸೌತ್ ಬ್ಯೂಟಿ ರಾಶಿ ಖನ್ನಾಗೆ ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿದ್ದು ಆ ಕಾರಣದಿಂದಲೇ?

ದೆಹಲಿ ಮೂಲದ ನಟಿ ರಾಶಿ ಖನ್ನಾ ಫಾರ್ಜಿ ಎಂಬ ಸಿರೀಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿರೀಸ್ ನಲ್ಲಿ ಷಾಹಿದ್ ಕಪೂರ್‍, ವಿಜಯ್ ಸೇತುಪತಿ, ಕೆ.ಕೆ. ಮಿನನ್ ಮೊದಲಾದವರ ಜೊತೆಗೆ ರಾಶಿಖನ್ನಾ ಸಹ ಬಣ್ಣ ಹಚ್ಚಿದ್ದಾರೆ. ಇನ್ನು ಮೊದಲನೇ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಒಳ್ಳೆಯ ಕ್ರೇಜ್ ಪಡದುಕೊಂಡ ಈಕೆಗೆ ಇತ್ತೀಚಿಗೆ ಕೊಂಚ ಅವಕಾಶಗಳೂ ಸಹ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಇದೀಗ ಆಕೆಗೆ ಅವಕಾಶಗಳು ಕಡಿಮೆಯಾಗಲು ಕಾರಣ ಅದೇ ಎಂದು ಸೋಷಿಯಲ್ ಮಿಡಿಯಾದಲ್ಲಿ ಕೇಳಿಬರುತ್ತಿದೆ.

ಸಿನಿರಂಗದಲ್ಲಿ ಅನೇಕರು ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಫೇಂ ಸಂಪಾದಿಸಿಕೊಳ್ಳುತ್ತಾರೆ. ಆದರೆ ಕಡಿಮೆ ಸಮಯದಲ್ಲೇ ಫೇಡ್ ಔಟ್ ಸಹ ಆಗಿಬಿಡುತ್ತಾರೆ. ನಟಿ ರಾಶಿ ಖನ್ನಾ ಸಹ ಮೊದಲನೇ ಸಿನೆಮಾದಲ್ಲಿ ಒಳ್ಳೆಯ ಕ್ರೇಜ್ ಸಂಪಾದಿಸಿಕೊಂಡರು. ಸೌಂದರ್ಯ, ಅಭಿನಯದ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದರು. ಕಡಿಮೆ ಸಮಯದಲ್ಲೇ ಊಹಿಸಿದ ಮಟ್ಟದ ಕ್ರೇಜ್ ಪಡೆದುಕೊಂಡರು. ಇನ್ನೂ ಆಕೆ ಸುಮಾರು 10ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ಯಾವುದೇ ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಡಲಿಲ್ಲ ಎಂದೇ ಹೇಳಬಹುದು. ಇನ್ನೂ ಇತ್ತಿಚಿಗಷ್ಟೆ ಆಕೆ ಪಕ್ಕಾ ಕಮರ್ಷಿಯಲ್, ಥ್ಯಾಂಕ್ಯೂ ಸಿನೆಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈ ಎರಡೂ ಸಿನೆಮಾಗಳೂ ಸಹ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು.

ಇನ್ನೂ ಬ್ಯಾಕ್ ಟು ಬ್ಯಾಕ್ ಸೋಲನ್ನು ಕಂಡ ರಾಶಿ ಖನ್ನಾಗೆ ಸದ್ಯ ಯಾವುದೇ ತೆಲುಗು ಸಿನೆಮಾ ಕೈಯಲ್ಲಿಲ್ಲ. ಸಂಪೂರ್ಣವಾಗಿ ಅವಕಾಶಗಳೂ ಸಹ ಕಡಿಮೆಯಾದವು. ಆದರೆ ಇದಕ್ಕೆ ಕಾರಣ ಈ ಹಿಂದೆ ಆಕೆ ನಟಿಸಿದ ಸಿನೆಮಾಗಳೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಆಕೆ ಹಿಂದಿಯಲ್ಲಿ ಫರ್ಜ್ ಎಂಬ ವೆಬ್ ಸಿರೀಸ್ ನಲ್ಲಿ ಹಾಗೂ ಯೋಧ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಆಕೆಗೆ ಅವಕಾಶಗಳೂ ಬರದೇ ಇರಲು ಒಂದು ಸೆಂಟಿಮೆಂಡ್ ಕಾರಣ ಎಂಬ ವಿಚಾರ ಪ್ರಚಾರವಾಗುತ್ತಿದೆ. ಅದರಂತೆ ರಾಶಿ ಖನ್ನಾ ಯಾವುದಾದರೂ ಸಿನೆಮಾದಲ್ಲಿ ನಟಿಸಿದರೇ ಆ ಸಿನೆಮಾ ಪ್ಲಾಪ್ ಆಗುತ್ತದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯೊಂದು ಕೇಳಿಬರುತ್ತಿದೆ. ಇನ್ನೂ ಇದಕ್ಕೆ ಅನೇಕರು ಕೆಲವೊಂದು ಉದಾಹರಣೆಗಳನ್ನು ಸಹ ನೀಡುತ್ತಿದ್ದಾರೆ.

ಕೆಲವೊಂದು ಉದಾಹರಣೆಗಳು ಕೇಳಿಬರುತ್ತಿದ್ದು, ಆ ಪೈಕಿ ರಾಶಿ ಖನ್ನಾ ಕಳೆದ 2013 ರಲ್ಲಿ ಮದ್ರಾಸ್ ಕೆಫೆ ಎಂಬ ಹಿಂದಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆ ಸಿನೆಮಾದಲ್ಲಿ ರಾಶಿ ಖನ್ನಾ ಜಾನ್ ಅಬ್ರಹಾಂ ಜೊತೆಗೆ ಕೊಂಚ ಹಾಟ್ ಆಗಿಯೇ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಕಿಸ್ ಸಹ ನೀಡಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಬಳಿಕ ತೆಲುಗಿನಲ್ಲಿ ಆಖೆ ಜಿಲ್, ಜೋರು, ಟಚ್ ಚೇಸಿ ಚೂಡು, ಬೆಂಗಾಲ್ ಟೈಗರ್‍, ವರ್ಲ್ಡ್ ಫೇಮಸ್ ಲವರ್‍ ಸೇರಿದಂತೆ ಥಾಂಕ್ಯೂ ಸಿನೆಮಾದಲ್ಲೂ ಸಹ ರಾಶಿ ಖನ್ನಾ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ ಕಾರಣ ಈ ಸಿನೆಮಾಗಳು ಪ್ಲಾಪ್ ಆದವು ಎಂದು ಅನೇಕ ಉದಾಹರಣೆಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ ರಾಶಿ ಖನ್ನಾಗೆ ಅವಕಾಶಗಳು ಕಡಿಮೆಯಾಗಲು ಲಿಪ್ ಕಿಸ್ ಗಳೇ ಕಾರಣ ಎಂಬಂತೆ ಪ್ರಚಾರ ನಡೆಯುತ್ತಿದೆ.

Most Popular

To Top