Film News

ಫೇಕ್ ವಿಡಿಯೋ ಬಗ್ಗೆ ಫೈರ್ ಆದ ರಶ್ಮಿಕಾ, ಸ್ಕೂಲ್ ಡೇಸ್ ನಲ್ಲಿ ಈ ರೀತಿ ಆಗಿದ್ದರೇ ಏನು ಮಾಡುತ್ತಿದ್ದೆನೋ ಗೊತ್ತಿಲ್ಲ ಎಂದ ರಶ್…..!

ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಏನಾದರೂ ಒಂದು ವಿಚಾರ ಬಂದರೇ ಸಾಕು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತದೆ. ಈ ಹಾದಿಯಲ್ಲೇ ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣರವರ ಫೇಕ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅನೇಕರು ರಶ್ಮಿಕಾ ರವರದ್ದೇ ವಿಡಿಯೋ ಎಂದು ಭಾವಿಸಿದ್ದರು. ಇದೀಗ ಈ ವಿಡಿಯೋ ಬಗ್ಗೆ ರಶ್ಮಿಕಾ ಫೈರ್‍ ಆಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣರವರ ಫೇಕ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.  ಆದರೆ ಈ ವಿಡಿಯೋ ಫೇಕ್ ಎಂದು ಬಳಿಕ ತಿಳಿಯಿತು. ಆದರೆ ಅನೇಕರು ಈ ವಿಡಿಯೋ ನೋಡಿ ರಶ್ಮಿಕಾ ರವರೇ ಎಂದು ಭಾವಿಸಿದ್ದರು. ಆಕೆಯ ಹೆಸರಿನಲ್ಲಿ ಹ್ಯಾಷ್ ಟ್ಯಾಗ್ ಮೂಲಕ ಎಲ್ಲಾ ಕಡೆ ವೈರಲ್ ಸಹ ಆಗಿತ್ತು. AI ತಂತ್ರಜ್ಞಾನ ಬಳಕೆ ಮಾಡಿಕೊಂಡು ಈ ವಿಡಿಯೋ ಕ್ರಿಯೇಟ್ ಮಾಡಿದೆ ಎಂದು ಹೇಳಲಾಗಿದೆ. ಇದಕ್ಕೆ ಅನೇಕ ಸೆಲೆಬ್ರೆಟಿಗಳೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಈ ಬಗ್ಗೆ ಫೈರ್‍ ಆಗಿದ್ದಾರೆ. ರಶ್ಮಿಕಾ ರವರ ಫೇಕ್ ವಿಡಿಯೋ ಹಂಚಿಕೊಂಡವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಕ್ರೋಷ ಹೊರಹಾಕುತ್ತಿದ್ದಾರೆ.

ಈ ಬಗ್ಗೆ ಇದೀಗ ರಶ್ಮಿಕಾ ಸಹ ಫೈರ್‍ ಆಗಿದ್ದಾರೆ. ಡೀಪ್ ಫೇಕ್ ವಿಡಿಯೋ ಹರಿದಾಡುತ್ತಿದ್ದ ಬಗ್ಗೆ ಮಾತನಾಡಲು ನನಗೆ ತುಂಬಾನೆ ನನಗೆ ನೋವಾಗುತ್ತಿದೆ. ತಂತ್ರಜ್ಞಾನ ದುರ್ಬಳಕೆಯಿಂದಾಗಿ ನನಗೆ ಮಾತ್ರವಲ್ಲದೇ ಎಲ್ಲರಿಗೂ ಭಯವಾಗುತ್ತದೆ. ಸಣ್ಣ ಪುಟ್ಟ ಟ್ರೋಲ್ ಆಗಿದ್ದರೇ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಭಾರಿ ಅದು ಓವರ್‍ ಆಗಿದೆ. ಎಲ್ಲರೂ ಅದು ನನ್ನದೇ ವಿಡಿಯೋ ಎಂದು ಭಾವಿಸುತ್ತಿದ್ದಾರೆ. ಈ ಕಾರಣದಿಂದ ನಾನು ಸಹ ರಿಯಾಕ್ಟ್ ಆಗುತ್ತಿದ್ದೆನೆ. ಈ ಬಗ್ಗೆ ನನಗೆ ಬೆಂಬಲ ಹಾಗೂ ರಕ್ಷಣೆ ನೀಡಿರುವ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಓರ್ವ ನಟಿಯಾಗಿ, ಮಹಿಳೆಯಾಗಿ ಋಣಿಯಾಗಿರುತ್ತೇನೆ. ಇಂತಹುದೇ ಘಟನೆ ಶಾಲೆ ಅಥವಾ ಕಾಲೇಜಿನಲ್ಲಿ ಓದಬೇಕಾದರೇ ಆಗಿದ್ದರೇ ನಾನು ಅದನ್ನು ಹೇಗೆ ನಿಭಾಯಿಸುತ್ತಿದ್ದೆನೋ ತಿಳಿಯದು. ಇಂತಹ ಘಟನೆಗಳ ಬಗ್ಗೆ ಜನರು ತೊಂದರೆಯಾಗುವುದಕ್ಕೂ ಮುನ್ನ ಈ ಸಮಸ್ಯೆಯ ಬಗ್ಗೆ ನಾವು ಗಮನ ಹರಿಸಬೇಕಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.

Most Popular

To Top