News

ತಿರುಪತಿ ಅಪ್ಡೇಟ್: ನ.10 ರಂದು ವೈಕುಂಠ ಏಕಾದಶಿಗೆ ಟಿಕೆಟ್ ಬುಕಿಂಗ್….!

ಕಲಿಯುಗ ದೈವ ಎಂದೇ ಕರೆಯಲಾಗುವ ತಿರುಮಲ ತಿರುಪತಿ ದೇವಾಲಯದಲ್ಲಿ ನೆಲೆಸಿರುವ ತಿಮ್ಮಪ್ಪನ ದರ್ಶನಕ್ಕೆ ದಿನೇ ದಿನೇ ಭಕ್ತರು ಹೋಗುತ್ತಿರುತ್ತಾರೆ. ಡಿ.23 ರಿಂದ ಜ.1 ರವೆಗೆ ವೈಕುಂಠ ದ್ವಾರ ದರ್ಶನ ಮಹೋತ್ಸವ ನಡೆಯಲಿದ್ದು, ಈ ದರ್ಶನಕ್ಕಾಗಿ ಆನ್ ಲೈನ್ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ನ.10 ರಂದು ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಬಿಡುಗಡೆ ಮಾಡಲಿದೆ.

ತಿರುಮಲದಲ್ಲಿ ಡಿ.23 ರಿಂದ ಜ.1 ರವರೆಗೆ ವೈಕುಂಠ ದ್ವಾರ ದರ್ಶನ ಆಯೋಜನೆ ಮಾಡಲಾಗಿದೆ. ಈ ದರ್ಶನಕ್ಕಾಗಿ ಆನ್ ಲೈನ್ ನಲ್ಲಿ ನ.10 ರಿಂದ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಸುಮಾರು 4.25 ಸಾವಿರ ಭಕ್ತರಿಗೆ 10 ದಿನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ವೈಕುಂಠ ದರ್ಶನ ಸಮಯದಲ್ಲಿ 300 ರೂಪಾಯಿ ದರ್ಶನ ಹಾಗೂ ಶ್ರೀವಾರಿ ದರ್ಶನ ಹೊರತುಪಡಿಸಿ ಎಲ್ಲಾ ದರ್ಶನಗಳನ್ನು ರದ್ದುಪಡಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ.

ಇನ್ನೂ ವೈಕುಂಠ ದ್ವಾರ ದರ್ಶನ ಡಿ.23 ರಿಂದ ಆರಂಭವಾಗಲಿದೆ. ಜ.1 ಕ್ಕೆ ಕೊನೆಯಾಗಲಿದೆ. ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 4.25 ಲಕ್ಷ ಟೋಕನ್ ಗಳನ್ನು ವಿತರಣೆ ಮಾಡಲಾಗುತ್ತದೆ. ಇನ್ನೂ ಈ ವೈಕುಂಠ ದ್ವಾರ ದರ್ಶನದ ಸಮಯದಲ್ಲಿ ವಿಐಪಿ ದರ್ಶನ, ಶಿಶು ಹೊಂದಿರುವ ಪೋಷಕರು, ವಿಕಲಚೇತನರು, ಹಿರಿಯ ನಾಗರೀಕರು ಸೇರಿದಂತೆ ವಿಶೇಷ ದರ್ಶನಗಳನ್ನು ರದ್ದುಗೊಳಿಸುವುದಾಗಿಯೂ ಸಹ ಟಿಟಿಡಿ ನಿರ್ಧಾರ ಮಾಡಿದೆ ಎನ್ನಲಾಗಿದೆ.

Most Popular

To Top