ಮತ್ತೊಮ್ಮೆ ಶಾಕಿಂಗ್ ಪೋಸ್ಟ್ ಮಾಡಿದ ಮೆಗಾ ಡಾಟರ್ ಶ್ರೀಜಾ, ಏನಾಗಿದೆ ಎಂದ ಫಾಲೋವರ್ಸ್……!

ಟಾಲಿವುಡ್ ಸ್ಟಾರ್‍ ನಟ ಮೆಗಾಸ್ಟಾರ್‍ ಚಿರಂಜೀವಿಯವರ ಪುತ್ರಿ ಶ್ರೀಜಾ ತನ್ನ ಪತಿಯಿಂದ ದೂರವಿದ್ದಾರೆ. ಇಬ್ಬರೂ ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಸಹ ಈ ಬಗ್ಗೆ ಅಧಿಕೃತವಾದ ಮಾಹಿತಿ ಮಾತ್ರ ಇನ್ನೂ ಹೊರಬಂದಿಲ್ಲ.  ಶ್ರೀಜಾ ಹಾಗೂ ಕಲ್ಯಾಣ್…

ಟಾಲಿವುಡ್ ಸ್ಟಾರ್‍ ನಟ ಮೆಗಾಸ್ಟಾರ್‍ ಚಿರಂಜೀವಿಯವರ ಪುತ್ರಿ ಶ್ರೀಜಾ ತನ್ನ ಪತಿಯಿಂದ ದೂರವಿದ್ದಾರೆ. ಇಬ್ಬರೂ ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಸಹ ಈ ಬಗ್ಗೆ ಅಧಿಕೃತವಾದ ಮಾಹಿತಿ ಮಾತ್ರ ಇನ್ನೂ ಹೊರಬಂದಿಲ್ಲ.  ಶ್ರೀಜಾ ಹಾಗೂ ಕಲ್ಯಾಣ್ ದೇವ್ ಕೆಲವು ತಿಂಗಳುಗಳಿಂದ ಬೇರೆಯಾಗಿದ್ದಾರೆ. ಕಲ್ಯಾಣ್ ದೇವ್ ರನ್ನು ಶ್ರೀಜಾ ಎರಡನೇ ಮದುವೆಯಾದರು. ಕಳೆದ 2016ರಲ್ಲಿ ಇವರಿಬ್ಬರ ಮದುವೆ ನಡೆದಿದ್ದು, ಅವರಿಬ್ಬರಿಗೆ ಒಂದು ಹೆಣ್ಣು ಮಗುವಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಸೆನ್ಷೇಷನ್ ಪೋಸ್ಟ್ ಮೂಲಕ ಸುದ್ದಿಯಾಗುತ್ತಿರುತ್ತಾರೆ.

ಮೆಗಾ ಡಾಟರ್‍ ಶ್ರೀಜಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀ‌ವ್ ಆಗಿರುತ್ತಾರೆ. ಆಕೆಗೆ ಇನ್ಸ್ಟಾ ದಲ್ಲಿ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಸಹ ಇದೆ. ಸುಮಾರು 4 ಲಕ್ಷ ಮಂದಿ ಆಕೆಯನ್ನು ಫಾಲೋ ಆಗುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕವೇ ಶ್ರೀಜಾ ತನಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಸಂತೋಷವಾದರೂ, ದುಃಖವಾದರೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮೂಲಕ ತಿಳಿಸುತ್ತಿರುತ್ತಾರೆ. ಸದ್ಯ ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇಟಲಿಯಲ್ಲಿ ವರುಣ್ ಹಾಗೂ ಲಾವಣ್ಯ ಮದುವೆ ಅದ್ದೂರಿಯಾಗಿ ನಡೆಯಿತು. ಬಳಿಕ ಹೈದರಾಬಾದ್ ನಲ್ಲಿ ರಿಸೆಪ್ಷನ್ ಸಹ ನಡೆದಿದ್ದು, ಈ ಸಂಬಂಧ ಪೊಟೋ ಹಾಗೂ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಈ ನಡುವೆ ಶ್ರೀಜಾ ಹಂಚಿಕೊಂಡ ಪೋಸ್ಟ್ ಒಂದು ಹಾಟ್ ಟಾಪಿಕ್ ಆಗಿದೆ.

ಸೋಷಿಯಲ್ ಮಿಡಿಯಾದಲ್ಲಿ ಶ್ರೀಜಾ, ಸೆನ್ಷೇಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿರುವಂತೆ, ಕೆಲವೊಂದು ವಿಚಾರಗಳು ನಮ್ಮ ಕಂಟ್ರೋಲ್ ನಲ್ಲಿ ಇಲ್ಲದಿದ್ದಾಗ, ಪರಿಸ್ಥಿತಿಗಳು ದಾರುಣವಾಗಿದ್ದಾಗ, ಕಠಿಣವಾಗಿದ್ದಾಗ, ಹೃದಯಕ್ಕೆ ಗಾಯವಾಗಿ ಹೃದಯ ಒಡೆದು ಹೋದಾಗ, ಮನಸ್ಸು ಡಿಸ್ಟ್ರಬ್ ಆದಾಗ, ಸ್ಪೂರ್ತಿದಾಯಕವಾಗಿ ಇಲ್ಲದಿದ್ದಾಗ ಕಣ್ಣು ಮುಚ್ಚಿಕೊಂಡು ನನ್ನಲ್ಲಿನ ಪ್ರಪಂಚದೊಂದಿಗೆ ಕನೆಕ್ಟ್ ಆಗುವುದೇ ಒಂದು ಒಳ್ಳೆಯ ಮಾರ್ಗ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಶ್ರೀಜಾ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಭಾರಿ ರೆಸ್ಪಾನ್ಸ್ ಸಹ ಪಡೆದುಕೊಂಡಿದ್ದೆ. ಸುಮಾರು 18 ಸಾವಿಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಮದುವೆಯಲ್ಲಿ ಪುಲ್ ಹ್ಯಾಪಿ ಆಗಿದ್ದ ಶ್ರೀಜಾಗೆ ಅಷ್ಟು ಬೇಗ ಏನಾಯ್ತು ಎಂದು ಆಕೆಯ ಫ್ಯಾನ್ಸ್ ವಿಚಾರ ವ್ಯಕ್ತಪಡಿಸುತ್ತಿದ್ದಾರೆ.