Film News

ನಿತಿನ್ ಸಿನಿಮಾದಿಂದ ಔಟ್ ಆದ ರಶ್ಮಿಕಾ, ರಶ್ಮಿಕಾ ಕೆರಿಯರ್ಗೆ ಹಳೇಯ ಮ್ಯಾನೇಜರ್ ಅಡ್ಡಗಾಲು ಹಾಕುತ್ತಿದ್ದಾರಾ?

ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ಬೇರೆ ಭಾಷೆಗಳಲ್ಲೂ ಸಹ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ತೆಲುಗಿನಲ್ಲಿ ಚಲೋ ಎಂಬ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಈ ಸಿನೆಮಾ ಸಹ ಭಾರಿ ಹಿಟ್ ಪಡೆದುಕೊಂಡಿತ್ತು. ತೆಲುಗಿನಲ್ಲೂ ಸಹ ಆಕೆ ಭಾರಿ ಮಟ್ಟದಲ್ಲಿ ಸಕ್ಸಸ್ ಪಡೆದುಕೊಂಡರು. ಟಾಲಿವುಡ್ ನಲ್ಲಿ ಗೀತಾ ಗೋವಿಂದಂ, ಸರಿಲೇರು ನೀಕೆವ್ವರು, ಭೀಷ್ಮಾ ಮೊದಲಾದ ಹಿಟ್ ಸಿನೆಮಾಗಳು ಆಕೆಯ ಖಾತೆಯಲ್ಲಿದೆ. ಇದೀಗ ಆಕೆ ನಿತಿನ್ ಜೊತೆಗೆ ನಟಿಸಬೇಕಿದ್ದ ಸಿನೆಮಾದಿಂದ ಹೊರಬಂದಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದ್ದು. ಅದಕ್ಕೆ ಕಾರಣ ರಶ್ಮಿಕಾ ಮಾಜಿ ಮ್ಯಾನೇಜರ್‍ ಎಂದೂ ಸಹ ಹೇಳಲಾಗುತ್ತಿದೆ.

ಇತ್ತೀಚಿಗಷ್ಟೆ ರಶ್ಮಿಕಾ ಮ್ಯಾನೇಜರ್‍ ಆಕೆಗೆ ಭಾರಿ ಮೊತ್ತವನ್ನು ಮೋಸಮಾಡಿದ್ದಾರೆ. ಈ ಕಾರಣದಿಂದ ರಶ್ಮಿಕಾ ಮ್ಯಾನೇಜರ್‍ ಕಿರಣ್ ಎಂಬಾತನನ್ನು ಕೆಲಸದಿಂದ ತೆಗೆದಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಈ ಬಗ್ಗೆ ರೂಮರ್‍ ಗಳು ಜೋರಾಗುತ್ತಿದ್ದಂತೆ ರಶ್ಮಿಕಾ ವ್ಯವಹಾರಿಕವಾಗಿ ತಾವಿಬ್ಬರೂ  ಬೇರೆಯಾಗುತ್ತಿರುವುದಾಗಿ ನೋಟ್ ಒಂದನ್ನು ಹಂಚಿಕೊಂಡು ತಮ್ಮಿಬ್ಬರ ನಡುವೆ ಯಾವುದೇ ವಿಬೇದಗಳು ಇಲ್ಲ ಎಂದು ಹೇಳಿದ್ದರು. ಆದರೆ ಈ ವಿವಾದ ಮುಗಿದಿದೆ ಎನ್ನುವಷ್ಟರಲ್ಲೇ ರಶ್ಮಿಕಾ ಸಿನೆಮಾ ಒಂದರಿಂದ ಹೊರಬಂದಿದ್ದಾರಂತೆ.  ಕೆಲವು ದಿನಗಳ ಹಿಂದೆಯಷ್ಟೆ ವೆಂಕಿ ಕುಡುಮುಲು ಹಾಗೂ ನಿತಿನ್ ಕಾಂಬಿನೇಷನ್ ನ ಸಿನೆಮಾಗೆ ರಶ್ಮಿಕಾರವರನ್ನು ಆಯ್ಕೆ ಮಾಡಿದ್ದರು. ಈ ಸಿನೆಮಾದಿಂದ ರಶ್ಮಿಕಾ ಹೊರಬಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ತೆಲುಗು ಯಂಗ್ ಹಿರೋ ನಿತಿನ್ ಹಾಗೂ ರಶ್ಮಿಕಾ ಕಾಂಬಿನೇಷನ್ ನಲ್ಲಿ ತೆರೆಕಂಡ ಭೀಷ್ಮ ಸಿನೆಮಾ ಸೂಪರ್‍ ಹಿಟ್ ಕಂಡಿತ್ತು. ಈ ಸಿನೆಮಾವನ್ನು ನಿರ್ದೇಶಕ ವೆಂಕಿ ಕುಡುಮುಲು ನಿರ್ದೇಶನ ಮಾಡಿದ್ದರು. ಇದೀಗ ಮತ್ತೊಮ್ಮೆ ಅವರ ಕಾಂಬಿನೇಷನ್ ನಲ್ಲಿ ಸಿನೆಮಾ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ರಶ್ಮಿಕಾ ಈ ಸಿನೆಮಾದಿಂದ ಸೈಡ್ ಆಗಿದ್ದಾರಂತೆ. ಅಷ್ಟಕ್ಕೂ ಈ ಸಿನೆಮಾದಿಂದ ರಶ್ಮಿಕಾ ಹೊರಬರಲು ಕಾರಣ ಏನು ಎಂಬುದರ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದೆ. ತನ್ನ ಮ್ಯಾನೇಜರ್‍ ಕಾರಣದಿಂದ ಆಕೆ ಸಿನೆಮಾದಿಂದ ಸೈಡ್ ಆಗಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ರಶ್ಮಿಕಾ ಮ್ಯಾನೇಜರ್‍ ನಿರ್ಮಾಪಕ ಹಾಗೂ ನಿರ್ದೇಶಕರ ಬಳಿ ಆಕೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರಂತೆ. ಸದ್ಯ ರಶ್ಮಿಕಾ ಬಾಲಿವುಡ್ ಸಿನೆಮಾಗಳ ಮೇಲೆ ಆಸಕ್ತಿ ಹೊಂದಿದ್ದಾರೆ. ಟಾಲಿವುಡ್ ಸಿನೆಮಾಗಳ ಮೇಲೆ ಆಸಕ್ತಿಯಿಲ್ಲ ಎಂದು ನೆಗೆಟೀವ್ ಆಗಿ ಪ್ರಚಾರ ಮಾಡುತ್ತಿದ್ದಾರೆಂಬ ರೂಮರ್‍ ಗಳು ಸಿನಿವಲಯದಲ್ಲಿ ಕೇಳಿಬರುತ್ತಿದೆ.

ಅಷ್ಟೇಅಲ್ಲದೇ ಆತ ರಶ್ಮಿಕಾ ಬದಲಿಗೆ ಶ್ರೀಲೀಲಾ, ಮೃಣಾಲ್ ಠಾಕೂರ್‍ ಹೆಸರುಗಳನ್ನು ಪ್ರಸ್ತಾಪಿಸುತ್ತಿದ್ದಾರಂತೆ. ಈ ವಿಚಾರಗಳು ರಶ್ಮಿಕಾವರೆಗೂ ತಲುಪಿದ್ದು, ಆಕೆ ಬೇಕೆಂತಲೇ ಈ ಸಿನೆಮಾದಿಂದ ಎಕ್ಸಿಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ನಲ್ಲೂ ಸಹ ರಶ್ಮಿಕಾ ಭಾಗಿಯಾಗಿದ್ದರಂತೆ. ಇದೀಗ ರಶ್ಮಿಕಾ ಸ್ಥಾನಕ್ಕೆ ಶ್ರೀಲೀಲಾ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಸದ್ಯ ಈ ರೂಮರ್‍ ಜೋರಾಗಿ ಹರಿದಾಡುತ್ತಿದ್ದು, ಈ ಬಗ್ಗೆ ರಶ್ಮಿಕಾ ಯಾವ ರೀತಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top