Film News

ಜೈಲರ್ ಸಿನೆಮಾದ ತಮನ್ನಾ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ಸಿಮ್ರಾನ್, ವೈರಲ್ ಆದ ವಿಡಿಯೋ…..!

ಸೂಪರ್‍ ಸ್ಟಾರ್‍ ರಜನಿಕಾಂತ್ ನಟಿಸುತ್ತಿರುವ ಜೈಲರ್‍ ಸಿನೆಮಾದಿಂದ ಕೆಲವು ದಿನಗಳ ಹಿಂದೆಯಷ್ಟೆ ಹಾಡೊಂದು ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ತಮನ್ನಾ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನಲ್ಲಿ ತಮನ್ನಾ ಸೌಂದರ್ಯ ಪ್ರದರ್ಶನದೊಂದಿಗೆ ಎನೆರ್ಜಿಟಿಕ್ ಆಗಿ ನೃತ್ಯ ಮಾಡಿದ್ದಾರೆ. ಇದೀಗ ತಮನ್ನಾ ಕುಣಿದ ಈ ಹಾಡಿಗೆ ಸೀನಿಯರ್‍ ನಟಿ ಸಿಮ್ರಾನ್ ಸಹ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಕೇವಲ ಸಾಮಾನ್ಯರಲ್ಲದೇ ಸೆಲೆಬ್ರೆಟಿಗಳೂ ಸಹ ರೀಲ್ಸ್, ಶಾರ್ಟ್ಸ್‌ ಮಾಡುತ್ತಾ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡ ನಟಿಯರಂತೂ ತಮ್ಮ ಅಭಿಮಾನಿಗಳನ್ನು ಸೋಷಿಯಲ್ ಮಿಡಿಯಾ ಮೂಲಕವೇ ರಂಜಿಸುತ್ತಿರುತ್ತಾರೆ. ಸಿನೆಮಾಗಳಿಂದ ದೂರ ಉಳಿದರು ತಮ್ಮ ಅಭಿಮಾನಿಗಳೊಂದಿಗೆ ಟಚ್ ನಲ್ಲಿರಲು ಈ ರೀತಿಯಲ್ಲಿ ಸೋಷಿಯಲ್ ಮಿಡಿಯಾ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದಂತಹ ಸೀನಿಯರ್‍ ನಟಿ ಸಿಮ್ರಾನ್ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ತಮ್ಮ ಅಭಿಮಾನಿಗಳಿಗಾಗಿ ಪೊಟೋಗಳು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಜೈಲರ್‍ ಸಿನೆಮಾದ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಜೈಲರ್‍ ಸಿನೆಮಾದ ಕಾವಲಯ್ಯ ಎಂಬ ಹಾಡು ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿತ್ತು. ಈ ಹಾಡು ತುಂಬಾನೆ ಪಾಪ್ಯುಲರ್‍ ಆಗಿದೆ. ಅನೇಕರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದೀಗ ಸೀನಿಯರ್‍ ನಟಿ ಸಿಮ್ರಾನ್ ಈ ಹಾಡಿಗೆ ಭಾರಿ ಜೋರಾಗಿ ಸ್ಟೆಪ್ಸ್ ಹಾಕಿದ್ದಾರೆ. 47ರ ವಯಸ್ಸಿನಲ್ಲೂ ಸಿಮ್ರಾನ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋದಲ್ಲಿ ಸಿಮ್ರಾನ್ ತಮನ್ನಾ ಗಿಂತ ತಾನು ಏನು ಕಡಿಮೆಯಿಲ್ಲ ಎಂಬಂತೆ ಆಕೆಗಿಂತ ಅದ್ಬುತವಾಗಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ನಿಮಗೆ ನೀವೇ ಸಾಟಿ, ಬೇರೆ ಯಾರೂ ಸಾಟಿಯಿಲ್ಲ ಎಂದು ಕಾಮೆಂಟ್ ಗಳು, ಲೈಕುಗಳು ಹರಿದು ಬರುತ್ತಿವೆ.

ಸೂಪರ್‍ ಸ್ಟಾರ್‍ ರಜನಿಕಾಂತ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಕಾವಲಯ್ಯ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಸಂಗೀತ ನಿರ್ದೇಶಕ ಅನಿರುಧ್ ಕಂಪೋಸ್ ಮಾಡಿದ್ದಾರೆ. ಈ ಹಾಡಿನಲ್ಲಿ ತಮನ್ನಾ ಗ್ಲಾಮರಸ್ ಆಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Most Popular

To Top