Film News

ಅತಿ ಆಸೆ ಗತಿಗೇಡು ಎಂಬಂತೆ ಒಂದನ್ನು ಪಡೆಯಲು ಹೋಗಿ, ಬಂದದನ್ನು ಕಳೆದುಕೊಂಡ ರಶ್ಮಿಕಾ….!

ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯರ ಸಾಲಿಗೆ ರಶ್ಮಿಕಾ ಮಂದಣ್ಣ ಸೇರುತ್ತಾರೆ. ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ರಶ್ಮಿಕಾ ಕಡಿಮೆ ಸಮಯದಲ್ಲೇ ಭಾರಿ ಸಕ್ಸಸ್ ಕಂಡುಕೊಂಡರು. ಪುಷ್ಪಾ ಸಿನೆಮಾದ ಬಳಿಕ ಆಕೆ ಬಾಲಿವುಡ್ ನಲ್ಲಿ ಸಹ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದರು. ಇದೀಗ ರಶ್ಮಿಕಾಳ ಅತಿ ಆಸೆಗೆ ಬಂದಿದ್ದ ಸಿನೆಮಾ ಅವಕಾಶವೊಂದನ್ನು ಕಳೆದುಕೊಂಡಿದ್ದಾರೆ. ಬಾಲಿವುಡ್ ಮೇಲಿನ ವ್ಯಾಮೋಹಕ್ಕೆ ತೆಲುಗು ಸಿನೆಮಾವನ್ನು ಸಹ ಆಕೆ ಕಳೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ತೆಲುಗು ಯಂಗ್ ಹಿರೋ ನಿತಿನ್ ಹಾಗೂ ವೆಂಕಿ ಕುಡುಮುಲ ಕಾಂಬಿನೇಷನ್ ನಲ್ಲಿ ಸಿನೆಮಾ ಅನೌನ್ಸ್ ಮಾಡಿತ್ತು. ಈ ಸಿನೆಮಾದಲ್ಲಿ ರಶ್ಮಿಕಾ ರವರನ್ನು ನಾಯಕಿಯಾಗಿ ಅನೌನ್ಸ್ ಮಾಡಲಾಗಿತ್ತು. ಈ ಹಿಂದೆ ಈ ಜೋಡಿಯ ಕಾಂಬಿನೇಷನ್ ನಲ್ಲಿ ಭೀಷ್ಮ ಸಿನೆಮಾ ಸಹ ಬಿಡುಗಡೆಯಾಗಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಆ ಕಾರಣದಿಂದ ಸಿನೆಮಾ ಘೋಷಣೆ ಮತಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಮ್ಯಾನೇಜರ್‍ ವಿವಾದದ ಕಾರಣದಿಂದ ರಶ್ಮಿಕಾ ಈ ಸಿನೆಮಾದ ಅವಕಾಶ ಕಳೆದುಕೊಂಡರು ಎಂಬ ರೂಮರ್‍ ಸಹ ಕೇಳಿಬಂತು. ರಶ್ಮಿಕಾ ಮ್ಯಾನೇಜರ್‍ ಕಿರಣ್ ಜೊತೆಗೆ ವಿವಾದದಿಂದ ರಶ್ಮಿಕಾ ಈ ಸಿನೆಮಾದಿಂದ ಹೊರಬಂದರು ಎಂಬ ಸುದ್ದಿ ಹರಿದಾಡಿತ್ತು. ಇದೀಗ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದೆ.

ನಿತಿನ್ ರವರ ಸಿನೆಮಾದಿಂದ ರಶ್ಮಿಕಾ ಹೊರಬರಲು ಮುಖ್ಯ ಕಾರಣ ಬಾಲಿವುಡ್ ಸಿನೆಮಾ ಆಫರ್‍ ಅಂತೆ. ಹೌದು ಬಾಲಿವುಡ್ ಷಾಹಿತ್ ಕಪೂರ್‍ ರವರ ಜೊತೆಗೆ ನಟಿಸಲು ಅವಕಾಶ ಬಂದ ಹಿನ್ನೆಲೆಯಲ್ಲಿ ರಶ್ಮಿಕಾ ಡೇಟ್ ಗಳ ಕಾರಣದಿಂದ ನಿತಿನ್ ಜೊತೆಗಿನ ಸಿನೆಮಾದಿಂದ ಹೊರಬಂದರಂತೆ. ಬಾಲಿವುಡ್ ನಟ ಷಾಹಿದ್ ಕಪೂರ್‍ ಜೊತೆಗೆ ರಶ್ಮಿಕಾ ನಟಿಸಲಿದ್ದು, ಆಗಸ್ಟ್ 1 ರಿಂದ ಶೂಟಿಂಗ್ ಸಹ ಆರಂಭವಾಗಬೇಕಿತ್ತಂತೆ. ಆ ಕಾರಣದಿಂದಲೇ ರಶ್ಮಿಕಾ ನಿತಿನ್ ಸಿನೆಮಾದಿಂದ ಹೊರಬಂದರು ಎಂದು ಹೇಳಲಾಗುತ್ತಿದೆ. ಬಾಲಿವುಡ್ ನಲ್ಲಿ ನಟಿಸುವ ಮಹದಾಸೆಯಿಂದ ಸೌತ್ ನಿಂದ ಬಾಲಿವುಡ್ ನತ್ತ ಅನೇಕ ನಟಿಯರು ಹೋಗುತ್ತಾರೆ. ಆದರೆ ಅವರಲ್ಲಿ ಸಕ್ಸಸ್ ಕಾಣುವುದು ಕಡಿಮೆ ಮಂದಿ ಎನ್ನಬಹುದು. ರಶ್ಮಿಕಾ ಸಹ ಸೌತ್ ನಲ್ಲಿ ಕಂಡುಕೊಂಡಷ್ಟು ಸಕ್ಸಸ್ ಬಾಲಿವುಡ್ ನಲ್ಲಿ ಕಂಡುಕೊಳ್ಳಲು ವಿಫಲರಾದರು ಎಂದು ಹೇಳಬಹುದಾಗಿದೆ.

ಬಾಲಿವುಡ್ ನಲ್ಲಿ ಅಷ್ಟೊಂದು ಸಕ್ಸಸ್ ಕಾಣದ ರಶ್ಮಿಕಾಗೆ ಬಾಲಿವುಡ್ ಮೇಲಿನ ಮೋಹ ಇನ್ನೂ ಕಡಿಮೆಯಾಗಿಲ್ಲ ಎನ್ನಲಾಗುತ್ತಿದೆ. ಆದ್ದರಿಂದಲೇ ನಿತಿನ್ ಸಿನೆಮಾ ಪಕ್ಕಕ್ಕಿಟ್ಟು ಷಾಹಿದ್ ಕಪೂರ್‍ ಸಿನೆಮಾದತ್ತ ಒಲವು ತೋರಿಸಿದ್ದಾರೆ. ಇದೀಗ ಬಜೆಟ್ ಕಾರಣದಿಂದ ಷಾಹಿದ್ ಕಪೂರ್‍ ಸಿನೆಮಾದ ಶೂಟಿಂಗ್ ಸಹ ನಿಂತಿದೆಯಂತೆ. ಆ ಮೂಲಕ ರಶ್ಮಿಕಾಳ ಅತಿಆಸೆಯಿಂದ ಒಳ್ಳೆಯ ಸಿನೆಮಾ ಕಳೆದುಕೊಂಡಿದ್ದಾರೆ. ಇನ್ನೂ ನಿತಿನ್ ಹಾಗೂ ವೆಂಕಿ ಕುಡುಮುಲ ಕಾಂಬಿನೇಷನ್ ನ ಸಿನೆಮಾಗೆ ಯಂಗ್ ನಟಿ ಶ್ರೀಲೀಲಾ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

Most Popular

To Top