ಮಾಲ್ಡೀವ್ಸ್ ಟ್ರಿಪ್ ಮುಗಿಸಿ ವಾಪಸ್ಸಾದ ತಮನ್ನಾ-ವಿಜಯ್, ವಿಮಾನ ನಿಲ್ದಾಣದಲ್ಲಿ ಎದುರಾದ ಅಸಭ್ಯಕರ ಪ್ರಶ್ನೆಗೆ ವಿಜಯ್ ಉತ್ತರ ಏನು ಗೊತ್ತಾ?

Follow Us :

ಸೌತ್ ಸಿನಿರಂಗದಲ್ಲಿ ಗ್ಲಾಮರಸ್ ಡ್ಯಾನ್ಸ್ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ತಮನ್ನಾ ಇತ್ತೀಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ತಮನ್ನಾ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ವಿಲಕ್ಷಣ ನಟ ವಿಜಯ್ ವರ್ಮಾ ಜೊತೆಗೆ ತಮನ್ನಾ ಪ್ರೀತಿಯಲ್ಲಿದ್ದಾರೆ. ಈ ವಿಚಾರವನ್ನು ಈಗಾಗಲೇ ಅವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಇದೀಗ ತಮನ್ನಾ ಹಾಗೂ ವಿಜಯ್ ವರ್ಮಾ ಮಾಲ್ಡೀವ್ಸ್ ವೆಕೇಷನ್ ನಿಂದ ವಾಪಸ್ಸಾಗಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅಸಭ್ಯಕರವಾದ ಪ್ರಶ್ನೆಯೊಂದು ಎದುರಾಗಿದ್ದು ಅದಕ್ಕೆ ಸರಿಯಾಗಿಯೇ ವಿಜಯ್ ಉತ್ತರ ನೀಡಿದ್ದಾರೆ.

ಟಾಲಿವುಡ್ ನಲ್ಲಿ ಬಹುತೇಕ ಎಲ್ಲಾ ಸ್ಟಾರ್‍ ಗಳ ಜತೆಗೆ ನಟಿಸಿದ ತಮನ್ನಾ ಪ್ರಭಾಸ್, ಪವನ್, ಮಹೇಶ್, ಅಲ್ಲು ಅರ್ಜುನ್, ರಾಮ್ ಚರಣ್ ರವರಂತಹ ಸ್ಟಾರ್‍ ಗಳ ಜೊತೆ ನಟಿಸಿ ಭಾರಿ ಫಾಲೋಯಿಂಗ್ ಪಡೆದುಕೊಂಡರು. ಜೊತೆಗೆ ಬಾಲಿವುಡ್ ನ ವೆಬ್ ಸಿರೀಸ್ ಮೂಲಕ ಆಕೆ ಮತಷ್ಟು ಸುದ್ದಿಯಾದರು. ಹಿಂದೆದೂ ನಟಿಸಿದಂತಹ ರೀತಿಯಲ್ಲಿ ಅಂದರೇ ಬೋಲ್ಡ್ ಆಗಿ ಹಾಗೂ ಇಂಟಿಮೆಂಟ್ ಸೀನ್ಸ್ ಗಳಲ್ಲಿ ಸಹ ನಟಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದರು. ವರ್ಷದ ಆರಂಭದಿಂದ ವಿಜಯ್ ವರ್ಮಾ ಹಾಗೂ ತಮನ್ನಾ ಬಗ್ಗೆ ಡೇಟಿಂಗ್ ರೂಮರ್‍ ಶುರುವಾಯ್ತು. ಹೊಸ ವರ್ಷದ ಆಚರಣೆಯ ವೇಳೆ ಅವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡರು. ಅಂದು ಇಬ್ಬರೂ ಲಿಪ್ ಕಿಸ್ ಇಟ್ಟುಕೊಂಡ ಪೊಟೋಗಳು ವೈರಲ್ ಆಗಿತ್ತು. ಅಂದಿನಿಂದ ಅವರಿಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂದು ಸುದ್ದಿ ಹರಿದಾಡಿತ್ತು. ಬಳಿಕ ಅವರಿಬ್ಬರೂ ಪ್ರೀತಿಯಲ್ಲಿರುವುದಾಗಿ ಬಹಿರಂಗಪಡಿಸಿದರು.

ಇನ್ನೂ ತಮನ್ನಾ ಹಾಗೂ ವಿಜಯ್ ವರ್ಮಾ ರವರ ಲವ್ ಹಾಟ್ ಟಾಫಿಕ್ ಆಗುತ್ತಿದೆ. ಇತ್ತೀಚಿಗಷ್ಟೆ ತಮನ್ನಾ ಹಾಗೂ ವಿಜಯ್ ಮಾಲ್ಡೀವ್ಸ್ ವೆಕೇಷನ್ ಗೆ ಹಾರಿದ್ದರು. ಮಾಲ್ಡೀವ್ಸ್ ನಿಂದ ತಮನ್ನಾ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ತಮನ್ನಾ ತನ್ನ ಪ್ರಿಯಕರನ ಪೊಟೋ ಹಂಚಿಕೊಂಡಿರಲಿಲ್ಲ. ಇನ್ನೂ ವೆಕೇಷನ್ ಮುಗಿಸಿ ಇಬ್ಬರೂ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರೂ ಬೇರೆ ಬೇರೆಯಾಗಿಯೇ ಹೊರಬಂದರು. ಕೂಡಲೇ ಮಿಡಿಯಾ ಹಾಗೂ ಅಭಿಮಾನಿಗಳು ತಮನ್ನಾ ಹಾಗೂ ವಿಜಯ್ ಹಿಂದೆ ಬಿದ್ದರು. ತಮನ್ನಾ ಬ್ರಾ ಮಾದರಿಯ ಟಾಪ್ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಪೊಟೋಗಳು ಸಹ ಸಖತ್ ವೈರಲ್ ಆಗಿತ್ತು.

ಇನ್ನೂ ವಿಜಯ್ ವರ್ಮಾ ಕಾಣಿಸಿಕೊಂಡ ಕೂಡಲೇ ಕೆಲವೊಂದು ಪ್ರಶ್ನೆಗಳು ಎದುರಾಗಿದೆ. ಮಾಲ್ಡೀವ್ಸ್ ನಲ್ಲಿ ಚೆನ್ನಾಗಿ ಮಜಾ ಮಾಡಿದ್ರಾ ಎಂದು ಓರ್ವ ಅಭಿಮಾನಿ ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ವಿಜಯ್ ವರ್ಮಾ ಕೋಪಗೊಂಡು ಎಂತಹ ಪ್ರಶ್ನೆಗಳನ್ನು ಕೇಳುತ್ತೀರಾ ನೀವು ಆ ರೀತಿ ಮಾತನಾಡಬಾರದು ಎಂದು ಹೊರಹೋಗಿದ್ದಾರೆ. ಸದ್ಯ ಗಾಢವಾದ ಪ್ರೀತಿಯಲ್ಲಿರುವ ಈ ಜೋಡಿಯ ಮದುವೆ ಯಾವಾಗ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.