Film News

ದುಬೈನಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ, ಕಿಲ್ಲಿಂಗ್ ಲುಕ್ಸ್ ಪೊಟೋಸ್ ಹಂಚಿಕೊಂಡ ಬ್ಯೂಟಿ, ವೈರಲ್ ಆದ ಪೊಟೋಸ್….!

ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೇ ಬಹುಬೇಡಿಕೆ ಸೃಷ್ಟಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಫುಲ್ ಫಾಂ ನಲ್ಲಿದ್ದಾರೆ. ಸದ್ಯ ಸೌತ್ ಸೇರಿದಂತೆ ಹಿಂದಿ ಸಿನೆಮಾಗಳಲ್ಲೂ ನಟಿಸುತ್ತಿರುವ ರಶ್ಮಿಕಾ ದುಬೈನ ವೆಕೇಷನ್ ನಲ್ಲಿದ್ದಾರೆ. ದುಬೈನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡುತ್ತಾ ಅಲ್ಲಿನ ಕೆಲವೊಂದು ಪೊಟೋಗಳನ್ನು ಆಕೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಸದ್ಯ ವಿದೇಶಗಳಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಸಿನೆಮಾ ಶೂಟಿಂಗ್ ಗಳಿಂದ ಬಿಡುವು ಪಡೆದುಕೊಂಡ ರಶ್ಮಿಕಾ ಸದ್ಯ ದುಬೈ ಪ್ರವಾಸಕ್ಕೆ ಹಾರಿದ್ದಾರೆ. ದುಬೈನ ಮೆರಿನಾ ಬೀಚ್ ಸಮೀಪವಿರುವ ಸ್ಟಾರ್‍ ಹೋಟೆಲ್ ಒಂದರಲ್ಲಿ ತಂಗಿರುವ ರಶ್ಮಿಕಾ ಅಲ್ಲಿಂದ ತೆಗೆದ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ರಶ್ಮಿಕಾ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬ್ಲಾಕ್ ಸ್ಟಾರ್‍ ಅಡ್ಡ ಗೆರೆಗಳು ಇರುವಂತಹ ಜಾಕೆಟ್ ಧರಿಸಿದ್ದಾರೆ. ಬ್ಲಾಕ್ ಕಲರ್‍ ಸ್ಟೈಲಿಷ್ ಗ್ಲಾಸಸ್ ಧರಿಸಿದ್ದಾರೆ. ಕ್ಯೂಟ್ ಅಂಡ್ ಫನ್ನಿಯಾಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ತನ್ನ ಬಲವನ್ನು ಸಹ ಶೋ ಮಾಡಿದ್ದಾರೆ. ಇನ್ನೂ ರಶ್ಮಿಕಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈಲರ್‍ ಆಗುತ್ತಿದ್ದು, ಅಭಿಮಾನಿಗಳೂ ಸೇರಿದಂತೆ ಅನೇಕರು ಲೈಕ್ ಗಳು, ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ರಶ್ಮಿಕಾ ಮಂದಣ್ಣ ದುಬೈ ಪೊಟೋಗಳ ಜೊತೆಗೆ ಗ್ಲಾಮರಸ್ ಪೋಟೋಗಳ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಇನ್ನೂ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂಹಿಂದಿಯಲ್ಲಿ ಗುಡ್ ಬೈ ಸಿನೆಮಾದಲ್ಲಿ ನಟಿಸಿದ್ದು ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಆದರೆ ಸಿದ್ದಾರ್ಥ್ ಮೆಲ್ಹೋತ್ರಾ ಜೊತೆಗೆ ನಟಿಸಿದ ಮಿಷನ್ ಮಜ್ನು ಸಿನೆಮಾ ಮಾತ್ರ ಒಳ್ಳೆಯ ಸಕ್ಸಸ್ ತಂದುಕೊಟ್ಟಿದೆ ಎಂದು ಹೇಳಬಹುದು.

ಇನ್ನೂ ತಮಿಳಿನ ಸ್ಟಾರ್‍ ನಟ ವಿಜಯ್ ದಳಪತಿ ಜೊತೆಗೆ ವಾರಸುಡು ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಬಹುನಿರೀಕ್ಷಿತ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಯಾನಿಮಲ್ ಎಂಬ ಸಿನೆಮಾದಲ್ಲಿ ರಣಬೀರ್‍ ಕಪೂರ್‍ ಜೊತೆಗೆ ನಟಿಸುತ್ತಿದ್ದಾರೆ.

Most Popular

To Top