ಅಶ್ವಿನಿ ಪುನೀತ್ ರಾಜ್ ಕುಮಾರ್ ರವರ ವರ್ಕೌಟ್ ವಿಡಿಯೋ ಸಖತ್ ವೈರಲ್, ಅಪ್ಪುರವರಂತೆ ಜಿಮ್ ನಲ್ಲಿ ಕಸರತ್ತು ಮಾಡಿದ ಅಶ್ವಿನಿ…!

Follow Us :

ಕರುನಾಡಿಗೆ ಅಕ್ಟೋಬರ್‍ 29, 2021 ರಂದು ದೊಡ್ಡ ಅಘಾತಕಾರಿ ಸುದ್ದಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆ ಹೃದಯ ಒಡೆದುಹೋಗುವಂತಹ ಸುದ್ದಿ ಬಂದು ಅಪ್ಪಳಿಸುತ್ತೆ, ಎಲ್ಲರೂ ಕ್ಷಣ ದಂಗಾಗಿಬಿಡುತ್ತಾರೆ. ಒಂದು ದೊಡ್ಡ ದುಃಖಕರ ಸುದ್ದಿಯೊಂದು ಹೊರಬರುತ್ತದೆ. ಅದು ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ರವರ ಸಾವಿನ ಸುದ್ದಿ. ಈ ಸುದ್ದಿ ಹೊರಬಂದ ಕೂಡಲೇ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶಗಳಿಂದಲೂ ಸಹ ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಇನ್ನೂ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ರವರು ಜಿಮ್ ನಲ್ಲಿ ತುಂಬಾನೆ ವರ್ಕೌಟ್ ಮಾಡುತ್ತಿದ್ದರು. ಇದೀಗ ಅವರ ಪತ್ನಿ ಅಶ್ವಿನಿ ಸಹ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಯಾಂಡಲ್ ವುಡ್ ಸಿನಿರಂಗದ ಸ್ಟಾರ್‍ ನಟ ಪುನೀತ್ ರಾಜ್ ಕುಮಾರ್ ರವರು ತುಂಬಾನೆ ವರ್ಕೌಟ್ ಮಾಡುತ್ತಿದ್ದರು. ಅವರು ವರ್ಕೌಟ್ ಮಾಡುವಂತಹ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದವು. ಇನ್ನೂ ಅಪ್ಪು ಅಗಲಿದ ಬಳಿಕ ಅಪ್ಪು ನಿರ್ವಹಣೆ ಮಾಡುತ್ತಿದ್ದ ಎಲ್ಲಾ ಜವಾಬ್ದಾರಿಗಳನ್ನು ಅವರ ಪತ್ನಿ ಅಶ್ವಿನಿ ವಹಿಸಿಕೊಂಡಿದ್ದಾರೆ. ಅಪ್ಪು ಜವಾಬ್ದಾರಿಯನ್ನು ಹೊತ್ತುಕೊಂಡು ಸಿನೆಮಾ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇನ್ನೂ ಅಶ್ವಿನಿಯವರು ಅಪ್ಪು ರವರಂತೆ ವರ್ಕೌಟ್ ಮಾಡುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದೀಗ ಅಶ್ವಿನಿ ಯವರು ವರ್ಕೌಟ್ ಮಾಡುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಶ್ವಿನಿ ಪುನೀತ್ ರಾಜ್ ಕುಮಾರ್‍ ರವರು ಹೆವಿ ವರ್ಕೌಟ್ ಮಾಡುತ್ತಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಪ್ಪುರವರ ಯುವರತ್ನ ಸಿನೆಮಾದ ಫೀಲ್ ದಿ ಪವರ್‍ ಹಾಡು ಪ್ಲೇ ಆಗುತ್ತಿದೆ. ಇನ್ನೂ ಈ ವಿಡಿಯೋದಲ್ಲಿನ ಹಾಡನ್ನು ಕೇಳಿದ ಅಪ್ಪು ಅಭಿಮಾನಿಗಳು ಅಪ್ಪು ರವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಇನ್ನೂ ಅಪ್ಪುರವರಂತೆ ಅಶ್ವಿನಿ ಸಹ ಫಿಟ್ ನೆಸ್ ಕಡೆಗೆ ತುಂಬಾ ಗಮನ ಹರಿಸುತ್ತಿದ್ದರು ಎನ್ನಲಾಗಿದೆ. ಪುನೀತ್ ರಾಜ್ ಕುಮಾರ್‍ ರವರ ಕನಸಿನ ಕೂಸು ಎಂದೇ ಕರೆಯಲಾಗಿದ್ದ ಗಂಧದ ಗುಡಿ ಡಾಕ್ಯೂಮೆಂಟರಿ ಸಿನೆಮಾದ ಸಮಯದಲ್ಲಿ ಅಪ್ಪು ಜೊತೆ ಟ್ರಕ್ಕಿಂಗ್ ಗೆ ಸಹ ಅಶ್ವಿನಿ ಹೋಗಿದ್ದರು. ಇನ್ನೂ ಅಶ್ವಿನಿಯವರು ಗಂಧದಗುಡಿ ಮೇಕಿಂಗ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಅಶ್ವಿನಿ ಪುನೀತ್ ರಾಜ್ ಕುಮಾರ್‍ ರವರ ವರ್ಕೌಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ. ಜೊತೆಗೆ ಅಶ್ವಿನಿಯವರಿಗೆ ಬೆಂಬಲ ಸಹ ಸೂಚಿಸುತ್ತಿದ್ದಾರೆ.