Film News

ಮತ್ತೊಂದು ಕ್ರೇಜಿ ಆಫರ್ ಗಿಟ್ಟಿಕೊಂಡ ಕಾಂತಾರಾ ಬ್ಯೂಟಿ ಲೀಲಾ, ನಿತಿನ್ ಜೊತೆಗೆ ರೊಮ್ಯಾನ್ಸ್ ಮಾಡಲು ರೆಡಿಯಾದ ಸಪ್ತಮಿಗೌಡ….!

ಸ್ಯಾಂಡಲ್ ವುಡ್ ನಲ್ಲಿ ಇತ್ತಿಚಿಗೆ ತೆರೆಕಂಡ ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನೆಮಾ ಈಗಾಗಲೇ ದೊಡ್ಡ ಕ್ರೇಜ್ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ದೇಶದ ಅನೇಕ ಸಿನೆಮಾ ರಂಗಗಳ ಸೆಲೆಬ್ರೆಟಿಗಳಿಗೂ ಸಹ ಈ ಸಿನೆಮಾ ತುಂಬಾನೆ ಇಷ್ಟವಾಗಿದೆ. ಇನ್ನೂ ಈ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಸಪ್ತಮಿ ಗೌಡ ಸಹ ತುಂಬಾನೆ ಅದ್ಬುತವಾಗಿ ನಟಿಸಿದ್ದು, ಈ ಸಿನೆಮಾದ ಬಳಿಕೆ ಆಕೆಗೆ ಅವಕಾಶಗಳು ಹರಿದುಬಂದಿದ್ದು, ತೆಲುಗಿನಲ್ಲಿ ಇದೀಗ ಯಂಗ್ ಹಿರೋ ನಿತಿನ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್‍ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಆಕೆ ಕಾಂತಾರ ಸಿನೆಮಾದಲ್ಲಿ ನಟಿಸಿದ್ದರು. ಆಕೆಗೆ ಕಾಂತಾರ ಸಿನೆಮಾ ಬಿಗ್ ಬ್ರೇಕ್ ನೀಡಿದೆ ಎನ್ನಬಹುದಾಗಿದೆ. ಈ ಸಿನೆಮಾದಲ್ಲಿ ಆಕೆ ಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ನಟಿ ಸಪ್ತಮಿ ತುಂಬಾನೆ ಚೆನ್ನಾಗಿ ಅಭಿನಯಿಸಿದ್ದಾರೆ. ಇನ್ನೂ ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳು ಹರಿದು ಬರುತ್ತಿವೆ. ಈಗಾಗಲೇ ವಿವೇಕ್ ಅಗ್ನಿಹೋತ್ರ ರವರ ದಿ ವ್ಯಾಕ್ಸಿನ್ ವಾರ್‍ ಸಿನೆಮಾದಲ್ಲಿ ಸಹ ಸಪ್ತಮಿ ಗೌಡ ನಟಿಸಿದ್ದು, ಶೀಘ್ರದಲ್ಲೇ ಈ ಸಿನೆಮಾ ಸಹ ತೆರೆಕಾಣಲಿದೆ. ಇದೀಗ ಸಪ್ತಮಿ ಗೌಡ ಮತ್ತೊಂದು ಕ್ರೇಜಿ ಆಫರ್‍ ಪಡೆದುಕೊಂಡಿದ್ದಾರೆ. ವಕೀಲ್ ಸಾಭ್ ಸಿನೆಮಾದ ನಿರ್ದೇಶಕ ವೇಣು ಶ್ರೀರಾಮ್ ಹಾಗೂ ನಿತಿನ್ ಕಾಂಬಿನೇಷನ್ ನ ಸಿನೆಮಾದಲ್ಲಿ ಸಪ್ತಮಿ ಗೌಡ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಿರ್ದೇಶಕ ವೇಣು ಶ್ರೀರಾಮ್ ಹಾಗೂ ನಿತಿನ್ ಕಾಂಬಿನೇಷನ್ ನಲ್ಲಿ ಹೊಸ ಪ್ರಾಜೆಕ್ಟ್ ಆರಂಭವಾಗಲಿದೆ. ಈ ಸಿನೆಮಾಗೆ ತಮ್ಮುಡು ಎಂಬ ಕ್ರೇಜಿ ಟೈಟಲ್ ಸಹ ಅನೌನ್ಸ್ ಮಾಡಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರ ಸಿನೆಮಾದ ಟೈಟಲ್ ಈ ಸಿನೆಮಾಗೆ ಇಟ್ಟಿರುವ ಕಾರಣದಿಂದ ಸಿನೆಮಾ ಮೇಲೆ ಮತಷ್ಟು ಕ್ರೇಜ್ ಹುಟ್ಟಿದೆ. ಈ ಸಿನೆಮಾವನ್ನು ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಭಾರಿ ಆಕ್ಷನ್ ದೃಶ್ಯಗಳೊಂದಿಗೆ ಈ ಸಿನೆಮಾ ತಯಾರಿಸಲು ತಂಡ ಪ್ಲಾನ್ ಮಾಡಿದೆ. ಇದೀಗ ಈ ಸಿನೆಮಾಗೆ ನಾಯಕಿಯಾಗಿ ಕಾಂತಾರ ಸಿನೆಮಾದ ನಟಿ ಸಪ್ತಮಿ ಗೌಡ ನಟಿಸಲಿದ್ದಾರಂತೆ. ಕಾಂತಾರಾ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಕಾರಣ ಸಪ್ತಮಿ ಗೌಡ ಮತಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಧಿಕೃತ ಘೋಷಣೆಯಷ್ಟೆ ಬಾಕಿ ಎಂದು ಹೇಳಲಾಗುತ್ತಿದೆ.

Most Popular

To Top