ರೆನ್ಯುಮರೇಷನ್ ವ್ಯತ್ಯಾಸದ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ರಕುಲ್, ಹಿರೋಗಳಿಗಿಂತ ನಾವೇನೂ ಕಡಿಮೆಯಲ್ಲ ಎಂದ ನಟಿ…..!

ಸಿನಿರಂಗದಲ್ಲಿ ಅತೀ ಕಡಿಮೆ ಸಮಯದಲ್ಲೇ ತನ್ನದೇ ಆದ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಇತ್ತೀಚಿಗೆ ಬಾಲಿವುಡ್ ಸಿನಿರಂಗದ ಮೇಲೆ ಹೆಚ್ಚು ಪೋಕಸ್ ಇಟ್ಟಿರುವ ಈಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಸೌಂಡ್ ಮಾಡುತ್ತಿರುತ್ತಾರೆ. ಇದೀಗ ಆಕೆ ಸಿನಿರಂಗದಲ್ಲಿನ ವೇತನ ತಾರತಮ್ಯದ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇತ್ತೀಚಿಗೆ ಅನೇಕರು ಸಿನಿರಂಗದಲ್ಲಿನ ಲಿಂಗ ತಾರತಮ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ಸಂಭಾವನೆಯ ವಿಚಾರದಲ್ಲಿ ಅನೇಕ ನಟಿಯರು ಒಪೆನ್ ಆಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇದೀಗ ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ಸಹ ಸಂಭಾವನೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಹಿರೋಗಳಿಗಿಂತ ನಾವೇನು ಕಡಿಮೆಯಲ್ಲ. ಕೆಲವೊಮ್ಮೆ ನಾವು ಅವರಿಗಿಂತಲೂ ಹೆಚ್ಚು ಕಷ್ಟಪಡುತ್ತಾರೆ. ಆದರೂ ಸಹ ಸಂಭಾವನೆ ವಿಚಾರದಲ್ಲಿ ಮಾತ್ರ ವ್ಯತ್ಯಾಸ ಇರುತ್ತದೆ. ಪ್ರತಿಭೆಗೆ ಅನುಸಾರವಾಗಿ ನೀಡಬೇಕಾದ ಸಂಭಾವನೆಯನ್ನು ಸ್ಟಾರ್‍ ಡಮ್ ಆಧಾರದ ಮೇಲೆ ನೀಡುತ್ತಿದ್ದಾರೆ. ಈ ರೀತಿಯಾಗಿ ಹಿರೋಗಳಿಗಿಂತ ಹೆಚ್ಚು ಸಂಭಾವನೆ ಹಿರೋಗಳಿಗೆ ದೊರೆಯುತ್ತಿದೆ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಅಷ್ಟೇಅಲ್ಲದೇ ಪ್ರೇಕ್ಷಕರನ್ನು ಸಿನೆಮಾ ಥಿಯೇಟರ್‍ ಗಳಿಗೆ ಕರೆಸುವುದು ಹಿರೋಗಳು ಮಾತ್ರವಲ್ಲ. ಹಿರೋಯಿನ್ ಗಳೂ ಸಹ ಕರೆತರುತ್ತಾರೆ. ಹಿರೋಯಿನ್ ಗಳಲ್ಲೂ ಸಹ ಅನೇಕರು ಪ್ರತಿಭೆಯುಳ್ಳವರು ಇದ್ದಾರೆ. ಹಿರೋಯಿನ್ ಗಳನ್ನು ನೋಡಿ ಸಹ ಅನೇಕರು ಸಿನೆಮಾ ನೋಡಲು ಬರುತ್ತಾರೆ. ಸಿನೆಮಾಗೆ ಕಥೆ, ಪಾತ್ರಗಳು ಎಲ್ಲವೂ ಒಂದಾಗಿ ಪ್ರಾಣ ಕೊಟ್ಟು ಪೋಷಣೆ ಮಾಡಬೇಕು. ಆದರೆ ಸಿನೆಮಾದ ಕ್ರೆಡಿಟ್ ಪೂರ್ಣ ಹಿರೋಗೆ ಕೊಡಲಾಗುತ್ತಿದೆ ಎಂದು ರಕುಲ್ ಸಂಚಲನಾತ್ಮಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನೂ ರಕುಲ್ ಹಂಚಿಕೊಂಡ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸೌತ್ ಸಿನೆಮಾಗಳಿಂದ ದೂರವಾದ ಈಕೆ ಬಾಲಿವುಡ್ ನಲ್ಲೇ ಸ್ಥಿರವಾಗಿದ್ದರು. ಕಳೆದ ವರ್ಷ ನಾಲ್ಕೈದು ಸಿನೆಮಾಗಳಲ್ಲಿ ರಕುಲ್ ನಟಿಸಿದ್ದರು. ಆದರೆ ಈ ಸಿನೆಮಾಗಳು ಸಕ್ಸಸ್ ಕಾಣಲಿಲ್ಲ. ಇದೀಗ ಆಕೆ ಮತ್ತೆ ಸೌತ್ ನತ್ತ ಮುಖ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್‍ ನಿರ್ದೇಶನ ಇಂಡಿಯನ್-2 ಸಿನೆಮಾದಲ್ಲಿ ಹಾಗೂ ಶಿವಕಾರ್ತಿಕೇಯನ್ ಜೊತೆಗೆ ಅಯಲಾನ್ ಸಿನೆಮಾದಲ್ಲೂ ಸಹ ನಟಿಸಿದ್ದಾರೆ. ಇನ್ನೂ ಅಯಲಾನ್ ಸಿನೆಮಾ ಬಿಡುಗಡೆಗೆ ಸಿದ್ದವಾಗಿದೆ.