ಆ ನಟನ ಜೊತೆಗೆ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡ ಕಾರಣದಿಂದ ನನಗೆ ಅವಕಾಶಗಳು ಕಡಿಮೆಯಾದವು ಎಂದ ನಟಿ ರಕುಲ್ ಪ್ರೀತ್…..!

Follow Us :

ಕಡಿಮೆ ಸಮಯದಲ್ಲೇ ಬಹುಬೇಡಿಕೆ ಸೃಷ್ಟಿಸಿಕೊಂಡ ನಟಿಯರ ಸಾಲಿಗೆ ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ಸಹ ಸೇರುತ್ತಾರೆ. ಕೆಲವು ವರ್ಷಗಳ ಹಿಂದೆ ರಕುಲ್ ಪ್ರೀತ್ ಸಿಂಗ್ ಹವಾ ಜೋರಾಗಿಯೇ ಇತ್ತು. ಆದರೆ ಇತ್ತಿಚಿಗೆ ಆಕೆಗೆ ಸೌತ್ ನಲ್ಲಿ ಆಫರ್‍ ಗಳು ಕಡಿಮೆಯಾಗಿದೆ. ಅನೇಕ ಸ್ಟಾರ್‍ ನಟರೊಂದಿಗೆ ತೆರೆ ಹಂಚಿಕೊಂಡ ರಕುಲ್ ಸದ್ಯ ಬಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಅಲ್ಲೂ ಸಹ ಆಕೆಗೆ ಅಂದುಕೊಂಡಷ್ಟು ಆಫರ್‍ ಗಳು ಬರುತ್ತಿಲ್ಲ. ಆದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಆಕೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ.

ನಟಿ ರಕುಲ್ ಪ್ರೀತ್ ಸಿಂಗ್ ತನಗೆ ಅವಕಾಶಗಳು ಕಡಿಮೆಯಾದ ಬಗ್ಗೆ ಸಂದರ್ಶನವೊಂದರಲ್ಲಿ ಕಾಮೆಂಟ್ಸ್ ಮಾಡಿದ್ದಾರೆ. ಆಕೆ ಮಾತನಾಡುತ್ತಾ ನನಗೆ ಸೌತ್ ನಲ್ಲಿ ಒಳ್ಳೆಯ ಆಫರ್‍ ಗಲು ಬರುತ್ತಿದ್ದವು. ಟಾಲಿವುಡ್ ನನನ್ನು ಸ್ಟಾರ್‍ ಮಾಡಿತ್ತು. ನನ್ನ ಕೆರಿಯರ್‍ ಒಳ್ಳೆಯದಾಗಿ ಸಾಗುತ್ತಿರುವಾಗ ಕೆಲವೊಂದು ಸೋಲುಗಳು ಕಂಡುಬಂದವು. ಅದರಲ್ಲೂ ಓರ್ವ ಸೀನಿಯರ್‍ ನಟನ ಸಿನೆಮಾದಲ್ಲಿ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದು, ಅದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಆ ದೃಶ್ಯಗಳನ್ನು ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ. ಆ ಸಿನೆಮಾ ತುಂಬಾ ನಿರಾಸೆ ತಂದುಕೊಟ್ಟಿತ್ತು. ಇದೇ ಕಾರಣದಿಂದ ನನಗೆ ಸೌತ್ ನಲ್ಲಿ ಅವಕಾಶಗಳು ಕಡಿಮೆಯಾದವು ಎಂದು ರಕುಲ್ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ರಕುಲ್ ಪ್ರೀತಿ ಸಿಂಗ್ ನಟಿಸಿದ ಆ ಸಿನೆಮಾ ಯಾವುದು ಆ ಸೀನಿಯರ್‍ ನಟ ಯಾರು ಎಂಬ ಚರ್ಚೆಗಳೂ ಸಹ ಶುರುವಾಗಿವೆ. ರಕುಲ್ ಹಾಗೂ ಅಕ್ಕಿನೇನಿ ನಾಗಾರ್ಜುನ್ ಕಾಂಬಿನೇಷನ್ ನಲ್ಲಿ ಮನ್ಮಥುಡು-2 ಸಿನೆಮಾದಲ್ಲಿ ನಾಗಾರ್ಜುನ್ ಜೊತೆಗೆ ಕಿಸ್ಸಿಂಗ್ ಸೀನ್ ನಲ್ಲಿ ರಕುಲ್ ಕಾಣಿಸಿಕೊಂಡಿದ್ದರು. ಜೊತೆಗೆ ಬಾಲಿವುಡ್ ನಲ್ಲಿ ಅಜಯ್ ದೇವಗನ್ ಜೊತೆಗೂ ಸಹ ರಕುಲ್ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದರು. ಆದರೆ ಆಕೆ ಸೌತ್ ನಲ್ಲಿ ಅವಕಾಶಗಳು ಕಡಿಮೆಯಾದವು ಎಂದು ಹೇಳಿದ ಹಿನ್ನೆಲೆಯಲ್ಲಿ ರಕುಲ್ ನಾಗಾರ್ಜುನ್ ರವರನ್ನು ಉದ್ದೇಶಿಸಿ ಈ ಕಾಮೆಂಟ್ ಗಳನ್ನು ಮಾಡಿದ್ದಾರೆ ಎಂಬ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಮನ್ಮಥುಡು-2 ಸಿನೆಮಾ ಬಿಡುಗಡೆಯಾದ ಬಳಿಕ ರಕುಲ್ ಕೆಲವೊಂದು ಕಿಸ್ಸಿಂಗ್ ದೃಶ್ಯಗಳು, ಸ್ಮೋಕಿಂಗ್ ದೃಶ್ಯಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಆ ಸಮಯದಲ್ಲಿ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡಿದ್ದರು.

ಕಳೆದ ವರ್ಷ ಆಕೆ ಅನೇಕ ಹಿಂದಿ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಇದೀಗ ಮತ್ತೆ ಸೌತ್ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡಿದರೂ ಆಕೆ ನಿರೀಕ್ಷೆಯನ್ನು ತಲುಪಲಿಲ್ಲ. ಸದ್ಯ ಆಕೆ ಕಮಲ್ ಹಾಸನ್ ರವರ ಇಂಡಿಯನ್-2 ಹಾಗೂ ಶಿವಕಾರ್ತಿಕೇಯನ್ ಜೊತೆಗೆ ಅಯಾಲಾನ್ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.