Film News

ಸುಡಿಗಾಲಿ ಸುಧೀರ್ ಗೆ ಮದುವೆ ಫಿಕ್ಸ್ ಮಾಡಿದ ಪೋಷಕರು, ಅಕ್ಕನ ಮಗಳೊಂದಿಗೆ ಮದುವೆಯಂತೆ, ವೈರಲ್ ಆದ ಪೋಸ್ಟ್ ಗಳು…..!

ತೆಲುಗಿನ ತೆಲುಗು ಕಾಮಿಡಿ ಶೋ ಜಬರ್ದಸ್ತ್ ಮೂಲಕ ಅನೇಕ ಕಲಾವಿದರು ಇಂದು ಸಿನೆಮಾಗಳಲ್ಲಿ ನಟಿಸುತ್ತಾ ಖ್ಯಾತಿ ಪಡೆದುಕೊಂಡಿದ್ದಾರೆ. ಈ ಶೋನಲ್ಲಿ ರಂಜಿಸಿದ ಅನೇಕ ಕಲಾವಿದರು ಇಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅವರಲ್ಲಿ ಸುಡಿಗಾಲಿ ಸುಧೀರ್‍ ಸಹ ಒಬ್ಬರಾಗಿದ್ದಾರೆ. ಈ ಶೋ ನಲ್ಲಿ ರಶ್ಮಿ ಹಾಗೂ ಸುಡಿಗಾಲಿ ಸುಧೀರ್‍ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದೆ. ಆದರೆ ಇದೀಗ ಸುಧೀರ್‍ ಗೆ ತಮ್ಮ ಕುಟುಂಬದವರು ಮದುವೆ ಫಿಕ್ಸ್ ಮಾಡಿದ್ದಾರಂತೆ. ತಮ್ಮ ಸಂಬಂಧಿಕರಲ್ಲೆ ಹುಡುಗಿಯನ್ನು ನೋಡಿದ್ದು, ಶೀಘ್ರದಲ್ಲೆ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಜಬರ್ದಸ್ತ್ ಶೋನಲ್ಲಿ ಸುಧೀರ್‍ ಜೊತೆಗೆ ಕಾಣಿಸಿಕೊಂಡ ರಾಮ್ ಪ್ರಸಾದ್, ಗೆಟಪ್ ಶ್ರೀನು ಈಗಾಗಲೇ ಮದುವೆಯಾಗಿ ಮಕ್ಕಳನ್ನು ಸಹ ಪಡೆದುಕೊಂಡಿದ್ದಾರೆ. ಆದರೆ ಸುಧೀರ್‍ ಮಾತ್ರ ಇನ್ನೂ ಮದುವೆಯಾಗಿಲ್ಲ. ಸುಧೀರ್‍ ಕಿರಿಯ ಸಹೋದರನಿಗೂ ಸಹ ಈಗಾಗಲೇ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಜಬದರ್ಸ್ತ್ ಶೋ ನಲ್ಲಿ ರಶ್ಮಿ ಹಾಗೂ ಸುಧೀರ್‍ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಅವರಿಬ್ಬರ ನಡುವೆ ನಡೆಯುವಂತಹ ಕೆಲವೊಂದು ಘಟನೆಗಳು ಆ ಶೋ ನಲ್ಲಿ ಹೈಲೈಟ್ ಎಂದೇ ಹೇಳಬಹುದಾಗಿದೆ. ಇನ್ನೂ ಒಂದು ಕಡೆ ಈ ಸುದ್ದಿ ಸುಳ್ಳು ಎಂತಲೂ, ಮತ್ತೊಂದು ಕಡೆ ಲವ್ ಇರುವುದು ನಿಜ ಎಂತಲೂ ಹೇಳುವಂತೆ ಹಿಂಟ್ಸ್ ಸಹ ನೀಡುತ್ತಿರುತ್ತಾರೆ. ಆದರೆ ಇದೀಗ ರಶ್ಮಿಗೆ ಕೈಕೊಟ್ಟು ಸುಧೀರ್‍ ಬೇರೆ ಯುವತಿಯೊಂದಿಗೆ ಮದುವೆಯಾಗಲಿದ್ದಾರಂತೆ. ಇನ್ನು ರಶ್ಮಿ ಪರಿಸ್ಥಿತಿ ಏನು ಎಂದು ಸೋಷಿಯಲ್ ಮಿಡಿಯಾದಲ್ಲಿ ನೆಟ್ಟಿಗರು ವಿವಿಧ ರೀತಿಯ ಪೋಸ್ಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಸುಧೀರ್‍ ಮದುವೆಯ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆ ಸುದ್ದಿ ಕೇಳಿದ ರಶ್ಮಿ ಹಾರ್ಟ್ ಬ್ರೇಕ್ ಆಗಿದೆ ಎಂದು ರೂಮರ್‍ ಗಳು ಶುರುವಾಗಿದೆ. ತನ್ನ ಸಂಬಂಧಿಕರಲ್ಲೇ ಸುಧೀರ್‍ ಮದುವೆಯಾಗಲಿದ್ದಾರಂತೆ. ಈ ಪ್ರಚಾರಕ್ಕೆ ಮತ್ತಷ್ಟು ಬಲ ಬರುವಂತೆ ಆತನ ಎಂಗೇಜ್ ಮೆಂಟ್ ಸಹ ನಡೆದು ಹೋಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇನ್ನೂ ಇದು ದೊಡ್ಡವರು ಫಿಕ್ಸ್ ಮಾಡಿದಂತಹ ಮದುವೆಯಂತೆ. ಇದೀಗ ರಶ್ಮಿ ಪರಿಸ್ಥಿತಿಯಾದರು ಏನು ಎಂದು ನೆಟ್ಟಿಗರು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ರಶ್ಮಿ ಸಹ ಈ ಹಿಂದೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು. ಭವಿಷ್ಯತ್ ನಲ್ಲಿ ಏನಾದರೂ ನಡೆಯಬಹುದು. ಕೆಲವೊಂದು ವಿಚಾರಗಳನ್ನು ಸೀಕ್ರೇಟ್ ಆಗಿಟ್ಟುಕೊಳ್ಳಬೇಕು, ನನ್ನಲ್ಲೇ ಇಟ್ಟುಕೊಳ್ಳಬೇಕು ಎಂದು ಹೇಳಿದ್ದರು. ಇವೆಲ್ಲವನ್ನೂ ನೋಡುತ್ತಿದ್ದರೇ ಸುಧೀರ್‍ ಗೆ ಮದುವೆ ಫಿಕ್ಸ್ ಆಗಿದೆ ಎಂಬ ಅನುಮಾನಗಳನ್ನು ಅನೇಕರು ಹೊರಹಾಕುತ್ತಿದ್ದಾರೆ.

ಇನ್ನೂ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸುಧೀರ್‍ ಮಾತ್ರ ಯಾವುದೇ ರೀತಿಯಲ್ಲಿ ರಿಯಾಕ್ಟ್ ಆಗಿಲ್ಲ. ಈ ಸುದ್ದಿ ನಿಜನಾ ಅಥವಾ ಸುಳ್ಳಾ ಎಂಬುದು ಸುಧೀರ್‍ ರಿಯಾಕ್ಟ್ ಆದ ಬಳಿಕ ಗೊತ್ತಾಗಲಿದೆ. ಇನ್ನೂ ಸುಧೀರ್‍ ಕೊನೆಯದಾಗಿ ಗಾಲೋಡು ಎಂಬ  ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಸುಧೀರ್‍ ಗೋಟ್, ಕಾಲಿಂಗ್ ಸಹಸ್ರ ಎಂಬ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top