ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅತ್ಯಗತ್ಯವಾಗಿದೆ ಎಂದ ಸ್ಟಾರ್ ನಟಿ ರಕುಲ್ ಪ್ರೀತ್ ಸಿಂಗ್…!

Follow Us :

ಸಿನಿರಂಗದಲ್ಲಿ ಅತೀ ಕಡಿಮೆ ಸಮಯದಲ್ಲೇ ತನ್ನದೇ ಆದ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಸದ್ಯ ರಕುಲ್ ಸೌತ್ ಅಂಡ್ ನಾರ್ತ್ ಎರಡೂ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಲೈಂಗಿಕ ಶಿಕ್ಷಣದ ಬಗ್ಗೆ ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.

ನಟಿ ರಕುಲ್ ಪ್ರೀತ್ ಸಿಂಗ್ ಡಾಕ್ಟರ್‍ ಜೀ ಎಂಬ ಸಿನೆಮಾದ ಮೂಲಕ ಕೊನೆಯದಾಗಿ ಪ್ರೇಕ್ಷಕರ ಮುಂದೆ ಬಂದಿದ್ದರು. ಕಳೆದ ವರ್ಷ ಆಕೆ ಬರೊಬ್ಬರಿ ಆರು ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳು ಅಂದುಕೊಂಡಷ್ಟು ಸಕ್ಸಸ್ ಕಾಣದೇ ಇದ್ದರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಛತ್ರಿವಾಲಿ ಎಂಬ ಸಿನೆಮಾದ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಕುರಿತಂತೆ ನಿರ್ಮಾಣವಾಗಿರುವ ಸಿನೆಮಾ ಆಗಿದೆ. ಇನ್ನೂ ಇತ್ತೀಚಿಗೆ ಆಕೆ ನೀಡಿದ ಸಂದರ್ಶನವೊಂದರಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ, ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದಾರೆ. ಶಾಲೆಯಲ್ಲಿ ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆ ಕುರಿತಂತೆ ಆಕೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ.

ಇನ್ನೂ ನಟಿ ರಕುಲ್ ಇತ್ತೀಚಿಗೆ ನಡೆದ ಮಾದ್ಯಮವೊಂದರ ಜೊತೆ ಮಾತನಾಡುತ್ತಾ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಅಗತ್ಯವಾಗಿ ಬೇಕಿದೆ. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕಡ್ಡಾಯವಾಗಬೇಕು ಎಂಬುದನ್ನು ಈ ಸಿನೆಮಾದ ಮೂಲಕ ತಿಳಿಸಲಾಗುತ್ತದೆ. ಲೈಂಗಿಕ ಶಿಕ್ಷಣ ವ್ಯಕ್ತಿಯಲ್ಲಿನ ಸ್ವಾಭಾವಿಕ ಪ್ರಗತಿಯನ್ನು ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ. ಅದರಿಂದ ನಾವು ಎಸ್ಕೇಪ್ ಆಗಲು ಸಾಧ್ಯವಿಲ್ಲ. ಇದು ಜೀವಶಾಸ್ತ್ರ, ವಿಜ್ಞಾನ ಹಾಗೂ ಆರೋಗ್ಯಕ್ಕೂ ಸಹ ಸಂಬಂಧಿಸಿದೆ. ಇನ್ನೂ ಲೈಂಗಿಕ ಶಿಕ್ಷಣ ಎಂಬುದು 13-14 ವಯಸ್ಸಿನ ಮಕ್ಕು ಪ್ರೌಢಾವ್ಯವಸ್ಥೆ ತಲುಪಿದ ಮಕ್ಕಳಿಗೆ ಲೈಂಗಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ರಕುಲ್ ತಿಳಿಸಿದ್ದಾರೆ.

ಇನ್ನೂ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೇ ಅಥವಾ ಬೇಡವೇ ಎಂಬುದು ಈಗಲೂ ಸಹ ಚರ್ಚೆ ನಡೆಯುತ್ತಿದ್ದು, ಪರ ವಿರೋಧ ಸಹ ಎದುರಾಗುತ್ತಿದೆ. ಇದೀಗ ರಕುಲ್ ಲೈಂಗಿಕ ಶಿಕ್ಷಣದ ಬಗ್ಗೆ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ರಕುಲ್ ಬಾಲಿವುಡ್ ನಲ್ಲಿ ಎಟಾಕ್, ರನ್ ವೇ34, ಕಟ್ ಪುಟ್ಲಿ, ಡಾಕ್ಟರ್‍ ಜಿ, ಥ್ಯಾಂಕ್ ಗಾಡ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆಕೆ ಅಯಲಾನ್, ಇಂಡಿಯನ್ 2 ಸೇರಿದಂತೆ ಮತ್ತೆರಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.